15 ಲಕ್ಷ ವರದಕ್ಷಿಣೆ: ಬೆಂಗಳೂರು ಟೆಕ್ಕಿ ಬಂಧನ

ಆರೋಪಿ ಹೆನ್ರಿ ವಿಲಿಯಂ ಬೋಸ್ಕೋ ಬೆಂಗಳೂರಿನವ. 34 ವರ್ಷದ ಈತ ವರದಕ್ಷಿಣೆಗಾಗಿ ತನ್ನನ್ನು ಗೋಳು ಹೊಯ್ದುಕೊಳ್ಳುತ್ತಿದ್ದ ಎಂದು ಇಂಜಿನಿಯರಿಂಗ್ ಕಾಲೇಜಿನಲ್ಲಿ ಪ್ರೊಫೆಸರ್ ಆಗಿರುವ ಟೆಕ್ಕಿಯ ಪತ್ನಿ ಪೊಲೀಸರಿಗೆ ದೂರು ನೀಡಿದ್ದರು.
2011ರಲ್ಲಿ ನಮ್ಮ ಮದುವೆಯಾಗಿತ್ತು. ಆ ವೇಳೆ 10 ಲಕ್ಷ ರೂ ವರದಕ್ಷಿಣೆ ನೀಡಲಾಗಿತ್ತು. ಆದರೂ ಕಳೆದೆರಡು ವರ್ಷದಿಂದ ವರದಕ್ಷಿಣೆಗಾಗಿ ನನ್ನ ಮೇಲೆ ಒಂದೇ ಸಮನೆ ದೈಹಿಕ ಹಲ್ಲೆಯನ್ನು ನಡೆಸಿದ್ದಾನೆ. ಈ ಮಧ್ಯೆ ಗರ್ಭಪಾತವೂ ಆಯಿತು ಎಂದು ಪೂನಾಮಲ್ಲೆಯಲ್ಲಿರುವ ಇಂಜಿನಿಯರಿಂಗ್ ಕಾಲೇಜಿನ ಪ್ರೊ. ರೀಟಾ ಕರೋಲಿನ್ (30) ಪೊಲೀಸರಿಗೆ ನೀಡಿರುವ ದೂರಿನಲ್ಲಿ ಅಲವತ್ತುಕೊಂಡಿದ್ದಾರೆ.
ನನ್ನ ತಾಯಿ ನರ್ಸ್ ಆಗಿದ್ದು, ಎಲ್ಲ ಸಂಕಷ್ಟಗಳನ್ನು ಎದುರಿಸಿ/ಸಹಿಸಿಕೊಂಡು ಹೋಗುವಂತೆ ಬುದ್ಧಿವಾದ ಹೇಳುತ್ತಿದ್ದರು. ಭಯ/ಮಾನ ಮರ್ಯಾದೆಗೆ ಅಂಜಿ ನಾನು, ನಮ್ಮ ತಾಯಿ ಎಲ್ಲವನ್ನೂ ಸಹಿಸಿಕೊಂಡೆವು ಎಂದು ರೀಟಾ ದೂರಿದ್ದಾರೆ.
ಚೆನ್ನೈನ ಮಹಿಳಾ ಪೊಲೀಸರು ಇದೀಗ ರೀಟಾ ದೂರಿಗೆ ಸ್ಪಂದಿಸಿದ್ದು ಬೋಸ್ಕೋನನ್ನು ವಿಚಾರಣೆಗೆ ಗುರಿಪಡಿಸಿದ್ದಾರೆ.












Click it and Unblock the Notifications