ಅಪಾರ್ಟ್‌ಮೆಂಟ್‌ಗಳಿಗೆ ಜಲಮಂಡಳಿ ಶಾಕ್!

ಬೆಂಗಳೂರು ಜಲಮಂಡಳಿ ಅಪಾರ್ಟ್‌ಮೆಂಟ್‌ಗಳು, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಸತಿಗೃಹಗಳು, ವಿಲ್ಲಾಗಳಿಗಳ ಕುಡಿಯುವ ನೀರಿನ ದರದಲ್ಲಿ ಶೇ270ರಷ್ಟು ಏರಿಕೆ ಮಾಡಿದೆ. ಆದರೆ, ಸಾಮಾನ್ಯ ಬಳಕೆದಾರನಿಗೆ ಈ ದರ ಅನ್ವಯವಾಗುವುದಿಲ್ಲ ಎಂಬುದು ಸಮಾಧಾನದ ಸಂಗತಿ.
ಅಪಾರ್ಟ್‌ಮೆಂಟ್‌ಗಳ ಕುಡಿಯುವ ನೀರಿನ ದರ ಹೆಚ್ಚಳ ಮಾಡುವುದಾಗಿ, ಜಲಮಂಡಳಿ ಜೂನ್ 13ರಂದು ಸುತ್ತೋಲೆ ಹೊರಡಿಸಿತ್ತು. ಜುಲೈನಿಂದ ಈ ದರಗಳು ಅನ್ವಯವಾಗಿದೆ. ದೊಡ್ಡ ಅಪಾರ್ಟ್‌ಮೆಂಟ್‌ಗಳು, ವಸತಿ ಗೃಹಗಳು, ವಿಲ್ಲಾಗಳು ಹೊಸ ದರ ಕೇಳಿ ಬೆಚ್ಚಿಬಿದ್ದಿವೆ.
ಎಷ್ಟಿತ್ತು, ಎಷ್ಟು ಹೆಚ್ಚಾಯಿತು : ಜಲಮಂಡಳಿಯು ದರ ಪರಿಷ್ಕರಣೆ ಮಾಡಿ, ಕಿಲೋ ಲೀಟರ್ ಗೆ (ಕೆಎಲ್- ಸಾವಿರ ಲೀಟರ್)ಗೆ ರೂ .19 ಎಂದು ನಿಗದಿಪಡಿಸಿದೆ. ಹಿಂದೆ 0-8000 ಲೀಟರ್ ವರೆಗೆ ಕಿಲೋಲೀಟರ್ ಗೆ ರೂ. 6 ದರ ನಿಗದಿಯಾಗಿತ್ತು.
8001ರಿಂದ 25,000 ಲೀಟರ್ ಗೆ ರೂ 9. 25,001ರಿಂದ 50,000 ಲೀಟರ್ ವರೆಗೆ ರೂ. 15 , 75,000 ಲೀಟರ್ ವರೆಗೆ ರೂ. 30, ಒಂದು ಲಕ್ಷ ಲೀಟರ್ ವರೆಗೆ ರೂ. 36 ದರ ನಿಗದಿಗೊಳಿಸಲಾಗಿತ್ತು.
ಐದು ವರ್ಷಗಳ ಹಿಂದಿನ ಪ್ರಸ್ತಾವನೆ : ನೀರಿನ ದರ ಹೆಚ್ಚಾಗಿರುವುದನ್ನು ಜಲಮಂಡಳಿ ಅಧಿಕಾರಿಗಳು ಖಚಿತ ಪಡಿಸಿದ್ದಾರೆ. ಅಲ್ಲದೇ ಐದು ವರ್ಷಗಳ ಹಿಂದೆ ದರ ಏರಿಕೆಯ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದ್ದೆವು.
ಹೊಸ ಸರ್ಕಾರ ಮೇ ಅಂತ್ಯದಲ್ಲಿ ಈ ಪ್ರಸ್ತಾವನೆಗೆ ಒಪ್ಪಿಗೆ ಸೂಚಿಸಿತ್ತು. ಅದರಂತೆ ದರ ಏರಿಕೆ ಮಾಡಲಾಗಿದೆ. ಎಲ್ಲಾ ಬಗೆಯ ಬಳಕೆದಾರರ ನೀರಿನ ದರ ಏರಿಕೆ ಬಗ್ಗೆಯೂ ಮಂಡಳಿ, ಸರ್ಕಾರಕ್ಕೆ ಪಸ್ತಾವನೆ ಸಲ್ಲಿಸಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಮೂಲಕ ಸಾಮಾನ್ಯ ಜನರಿಗೂ ಸದ್ಯದಲ್ಲೇ ಜಲಮಂಡಳಿ ದರ ಹೆಚ್ಚಳದ ಬಿಸಿ ಮುಟ್ಟಿಸಲಿದೆ.
ಹೊಸ ಸರ್ಕಾರ ಬಂದ ನಂತರ ವಿದ್ಯುತ್, ಬಸ್ ಪ್ರಯಾಣದರ ಏರಿಕೆಯಾಗಿತ್ತು. ಸದ್ಯ ನೀರಿನ ಸರದಿ, ಸರ್ಕಾರ ನೀರಿನ ದರ ಹೆಚ್ಚಳಕ್ಕೆ ಅನುಮತಿ ನೀಡಿದ್ದು, ಎಷ್ಟು ಸರಿ? ಜನಸಾಮಾನ್ಯರಿಗೆ ಇದರ ಬಿಸಿ ತಟ್ಟಲಿದೆ. ನೀರಿನ ದರ ಏರಿಕೆಯ ಬಗ್ಗೆ ನೀವು ಏನು ಹೇಳುತ್ತೀರಿ?












Click it and Unblock the Notifications