ಎಚ್ಡಿಕೆಗೆ ಸರಕಾರಿ ಕಾರೇ ಬೇಕು, ಮಗನಿಗೆ 5 ಕೋಟಿ ಕಾರು

ಬೆಂಗಳೂರು, ಜುಲೈ 5- ಅಪ್ಪ, ವಿಧಾನಸಭೆಯ ಪ್ರತಿಪಕ್ಷ ನಾಯಕ ಎಚ್ ಡಿ ಕುಮಾರಸ್ವಾಮಿ ಅವರು ಕಾಡಿಬೇಡಿ 24 ಲಕ್ಷ ರೂ ಮೌಲ್ಯದ Fortuner ಸರಕಾರಿ ಕಾರನ್ನು ಪಡೆದಿರುವಾಗ 'ಮಣ್ಣಿನ ಮೊಮ್ಮಗ' ಸುಮ್ಮನಿರುತ್ತಾನಾ?

ಎದೆಮಟ್ಟ ಬೆಳೆದು ನಿಂತ ಮಗ ನಿಖೀಲ್ ಗೌಡ ಓಡಾಡುವುದಕ್ಕೆ ನನಗೂ ಒಂದು ಕಾರು ಕೊಡಿಸಪ್ಪಾ ಎಂದು ಕೇಳಿದ್ದೇ ತಡ ಜೆಡಿಎಸ್ ಪಕ್ಷದ ಕುಮಾರಸ್ವಾಮಿ ಅವರು ತಥಾಸ್ತು ಅಂದಿದ್ದಾರೆ. ಅಂದರೆ ತಮ್ಮ ಪುತ್ರನಿಗೆ ಅವರು ಬರೋಬ್ಬರಿ 5 ಕೋಟಿ ರೂ ಮೌಲ್ಯದ Lamborghini ಕಾರನ್ನು ಕೊಡಿಸಿದ್ದಾರೆ.

'ಏ ಇಲ್ರೀ ಆದರೆ ಅದನ್ನು ನಾನು ಕೊಡಿಸಿಲ್ಲ. ಅವನೇ ತೆಗೆದುಕೊಂಡಿದ್ದಾನೆ. ಅವನೂ ಕೇಬಲ್ ಬಿಸಿನೆಸ್ ಅದೂ ಇದೂ ಅಂತ ವಹಿವಾಟು ನಡೆಸುತ್ತಾನೆ. ಚೆನ್ನಾಗಿ ಸಂಪಾದಿಸುತ್ತಾನೆ. ಹಾಗಾಗಿ ಅವನದೇ ದುಡ್ಡಿನಲ್ಲಿ ಕಾರು ಖರೀದಿಸಿದ್ದಾನೆ' ಎಂದು ಕುಮಾರಸ್ವಾಮಿ ಸ್ಪಷ್ಟನೆಯನ್ನೂ ನೀಡಿದ್ದಾರೆ. ಇದೆಲ್ಲಾ ಇಂದಿನ ಬೆಂಗಳೂರು ಮಿರರ್ ನಲ್ಲಿ ಸಮಗ್ರವಾಗಿ ವರದಿಯಾಗಿದೆ.

ಕಡ್ಲೆಪುರಿ ಥರ ಮಾರುವ ಕಾರಲ್ಲ ಅದು

ಕಡ್ಲೆಪುರಿ ಥರ ಮಾರುವ ಕಾರಲ್ಲ ಅದು

ಸೀಮಿತ ಸಂಖ್ಯೆಯಲ್ಲಿ ತಯಾರಾಗುವ Lamborghini Gallardo LP550-2 ಕಾರೇರಿ ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ರಾಜಧಾನಿಯಲ್ಲಿ ಓಡಾಡಿಕೊಂಡಿದ್ದಾರೆ.

ಜತೆಗೆ ಮತ್ತೊಂದೂ ಇರಲಿ ಅಂತ ಅಷ್ಟೇ

ಜತೆಗೆ ಮತ್ತೊಂದೂ ಇರಲಿ ಅಂತ ಅಷ್ಟೇ

ಹಾಗಂತ 'ಮಣ್ಣಿನ ಮೊಮ್ಮಗ' ನಿಖಿಲ್ ಕುಮಾರಸ್ವಾಮಿ ಬಳಿ ಕಾರುಗಳೇ ಇರಲಿಲ್ಲ ಅಂತಲ್ಲ. ಆದರೂ ಅವುಗಳ ಜತೆಗೆ ಮತ್ತೊಂದೂ ಇರಲಿ ಅಂತ ಕೇವಲ 5 ಕೋಟಿ ರೂ ಮೌಲ್ಯದ ಕಿತ್ತಳೆ ಬಣ್ಣದ ಕಾರನ್ನು ಖರೀದಿಸಿದ್ದಾರೆ.

ಬೆಂಗಳೂರಿಗೆ ಇವರೇ ಮೊದಲು

ಬೆಂಗಳೂರಿಗೆ ಇವರೇ ಮೊದಲು

ಬಹುಶಃ ಬೆಂಗಳೂರಿನಲ್ಲಿ ಇಂತಹ ಕಾರನ್ನು ಖರೀದಿಸಿರುವುದು ಇವರೊಬ್ಬರೇ ಅನ್ನಿಸುತ್ತಿದೆ. ಸದ್ಯದಲ್ಲೇ ರಾಜಕೀಯಕ್ಕೆ ಆರಂಗೇಟ್ರಂ ಕೊಡಲಿರುವ ನಿಖಿಲ್, ಭಾರಿ ಉದ್ಯಮ/ ವಹಿವಾಟುಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಹಾಗಾಗಿ ಅವರಿಗೆ ಕಾರಿನ ಅಗತ್ಯವಿದೆಯಂತೆ. ಅಪ್ಪನಿಗಿಂತ ಮಗನೇ ಹೆಚ್ಚು Fortuner!

ನೈಸ್ ರೋಡೇ ಗತಿ

ನೈಸ್ ರೋಡೇ ಗತಿ

ಮೊನ್ನೆ ಸಿದ್ದರಾಮಣ್ಣ ಅವರೇ ಹೇಳಿದಂತೆ ಬೆಂಗಳೂರು ರಸ್ತೆಗಳು ಗುಂಡಿಗಳ ಮಧ್ಯೆ. ಅದರ ಮೇಲೆ ಇಂತಹ ದುಬಾರಿ Lamborghini ಕಾರನ್ನು ಓಡಿಸಿಡುವುದಕ್ಕೆ ಆಗುತ್ತದಾ? ಹಾಗಾಗಿ ನಿಖಿಲ್ ಕುಮಾರಸ್ವಾಮಿ ಅವರು ತಮ್ಮ ತಾತಾ ದೊಡ್ಡಗೌಡರ ಕಡುವಿರೋಧಿ, ಶಾಸಕ ಅಶೋಕ್ ಖೇಣಿ ಅವರು ನಿರ್ಮಿಸಿರುವ ನೈಸ್ ರಸ್ತೆಯಲ್ಲಿ ನೈಸಾಗಿ ಓಡಿಸಬಹುದು!

ಬಿಡುಗಡೆಗೂ ಮುನ್ನವೇ ಕಳೆದ ತಿಂಗಳು ಖರೀದಿ

ಬಿಡುಗಡೆಗೂ ಮುನ್ನವೇ ಕಳೆದ ತಿಂಗಳು ಖರೀದಿ

ಇಡೀ ಭಾರತಕ್ಕೆ ಅಂತ ಇಟಲಿಯ Lamborghini ತಯಾರಕರು ಕೇವಲ 6 ಕಾರುಗಳನ್ನು ಸಿದ್ಧಪಡಿಸಿದ್ದಾರೆ. ಆದರೆ ನಮ್ಮ ನಿಖಿಲ್ ಅವರು ಇಟಲಿ ಕಂಪನಿ ಅದನ್ನು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆ ಮಾಡುವುದಕ್ಕೂ ಮುನ್ನವೇ ಕಳೆದ ತಿಂಗಳು ತಾವು ಬುಕ್ ಮಾಡಿದ್ದ ಕಾರನ್ನು ತರಿಸಿಕೊಂಡಿದ್ದಾರಂತೆ.

ರಾಮನಗರದ RTOನಲ್ಲಿ ರಿಜಿಸ್ಟರ್ ಆಗಿದೆ

ರಾಮನಗರದ RTOನಲ್ಲಿ ರಿಜಿಸ್ಟರ್ ಆಗಿದೆ

ಅಪ್ಪ ಕುಮಾರಸ್ವಾಮಿ ಅವರು ಪ್ರತಿನಿಧಿಸುವ ಕ್ಷೇತ್ರವಾದ ರಾಮನಗರದ RTOನಲ್ಲಿ ನಿಖಿಲ್ ತಮ್ಮ ಅದ್ದೂರಿ, ದುಬಾರಿ, ವೈಭವೋಪೇತ ಕಾರನ್ನು ರಿಜಿಸ್ಟರ್ ಮಾಡಿಸಿದ್ದಾರೆ. ಅಂದಹಾಗೆ Lamborghini ಕಾರಿನ ಬೆಲೆ 3.06 ಕೋಟಿ ರೂ. ಅದಕ್ಕೆ ತೆರಿಗೆ ಅದೂ ಇದೂ ಸೇರಿಸಿದರೆ ಅದರ ಬೆಲೆ 5 ಕೋಟಿ ರೂ ದಾಟುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+