ಇದು ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣ

ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣವನ್ನು ಪಟ್ಟಿ ಮಾಡಿ, ಅದಕ್ಕೆ ನಂಬರ್ ಕೊಡಬಹುದಾದರೆ ನೇಪಾಳದ ಲೂಕ್ಲಾ ವಿಮಾನ ನಿಲ್ದಾಣಕ್ಕೆ ಪ್ರಥಮ ಸ್ಥಾನ ನೀಡಬಹುದು. ಇದು ದಶಕಗಳಷ್ಟು ಹಳೆಯದಾದ ಏರ್ಪೋರ್ಟ್.

ವಿಮಾನ ಪ್ರಯಾಣಿಕರನ್ನು ಸುರಕ್ಷಿತವಾಗಿ ಈ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಮಾಡಿದ ತಕ್ಷಣ, ಸುರಕ್ಷಿತವಾಗಿ ಇಳಿದಿದ್ದಕ್ಕೆ ಸಂತೋಷಪಟ್ಟು ಪ್ರಯಾಣಿಕರು ಒಬ್ಬರನ್ನೊಬ್ಬರು ಅಪ್ಪಿಕೊಂಡು ಚಪ್ಪಾಳೆ ಹೊಡೆಯುತ್ತಾರೆ.

2843 ಮೀಟರ್ ಎತ್ತರದಲ್ಲಿರುವ ಈ ನಿಲ್ದಾಣ ವಿಶ್ವದ ಅತ್ಯಂತ ಅಪಾಯಕಾರಿ ವಿಮಾನ ನಿಲ್ದಾಣ ಎನ್ನುವ ಕುಖ್ಯಾತಿ ಪಡೆದಿದೆ. ವಿಮಾನ ನಿಲ್ದಾಣಕ್ಕಿರುವ ಒಂದೇ ರನ್ ವೇ ಅತ್ಯಂತ ಕಿರಿದಾದ ಮತ್ತು ಇಳಿಜಾರಿನಿಂದ ಕೂಡಿದೆ.

ನೇಪಾಳ ವಿಮಾನ ನಿಲ್ದಾಣ

ನೇಪಾಳ ವಿಮಾನ ನಿಲ್ದಾಣ

1965ರಲ್ಲಿ ಸರ್ ಎಡ್ಮಂಡ್ ಹಿಲರಿ ಈ ವಿಮಾನ ನಿಲ್ದಾಣವನ್ನು ಕಟ್ಟಿಸಿದ. ವಿಶ್ವದ ಅತ್ಯಂತ ಎತ್ತರದ ಶಿಖರವನ್ನು ಏರಿ ಇತಿಹಾಸ ನಿರ್ಮಿಸಿದ ಸಂಭ್ರಮಕ್ಕೆ ಹಿಲರಿ ಈ ವಿಮಾನ ನಿಲ್ದಾಣ ನಿರ್ಮಿಸಿ, ಶ್ರೆಪ್ರಾಗಳ ಜೀವನ ಶೈಲಿಯ ಅಭಿವೃದ್ದಿಗೆ ಕೆಲವೊಂದು ಪ್ರದೇಶಗಳ ಅಭಿವೃದ್ದಿಗೂ ಸಹಕರಿಸಿದ.

ತೇನ್ಸಿಂಗ್ - ಹಿಲರಿ ವಿಮಾನನಿಲ್ದಾಣ

ತೇನ್ಸಿಂಗ್ - ಹಿಲರಿ ವಿಮಾನನಿಲ್ದಾಣ

ಪೂರ್ವ ನೇಪಾಳದ ಸೊಲೋಕುಂಭ್ ಜಿಲ್ಲೆಯಲ್ಲಿರುವ ಈ ವಿಮಾನ ನಿಲ್ದಾಣವನ್ನು ತೇನ್ಸಿಂಗ್ - ಹಿಲರಿ ವಿಮಾನ ನಿಲ್ದಾಣ ಎಂದೂ ಕರೆಯುತ್ತಾರೆ. 2008ರಲ್ಲಿ ವಿಮಾನ ನಿಲ್ದಾಣ ಸಣ್ಣಮಟ್ಟಿನ ರಿಪೇರಿ ಕೆಲಸ ಕಂಡಿತ್ತು.

ವಿಮಾನ ನಿಲ್ದಾಣ ಮತ್ತು ಮೌಂಟ್ ಎವರೆಸ್ಟ್

ವಿಮಾನ ನಿಲ್ದಾಣ ಮತ್ತು ಮೌಂಟ್ ಎವರೆಸ್ಟ್

ಮೌಂಟ್ ಎವರೆಸ್ಟ್ ಪರ್ವತ ಶ್ರೇಣಿ ಏರಲು ಬರುವವರು ಈ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಾರೆ. ಲುಕ್ಲಾ ಮತ್ತು ಕಾಠ್ಮಂಡು ನಡುವೆ ಹಗಲಿನಲ್ಲಿ ವಿಮಾನ ಯಾನದ ಸೌಲಭ್ಯವಿರುವುದರಿಂದ ಪರ್ವತ ಏರಲು ಬಯಸುವವರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ.

ಲೂಕ್ಲಾ ವಿಮಾನ ನಿಲ್ದಾಣ

ಲೂಕ್ಲಾ ವಿಮಾನ ನಿಲ್ದಾಣ

ದಿನವೊಂದಕ್ಕೆ ಸುಮಾರು 5-10 ವಿಮಾನಗಳು ಈ ನಿಲ್ದಾಣದಲ್ಲಿ ಕಾರ್ಯ ನಿರ್ವಹಿಸುತ್ತವೆ. ಮಳೆ ಮತ್ತು ಹವಾಮಾನದಲ್ಲಿ ಆಗುವ ಬದಲಾವಣೆಗಳಿಂದ ಈ ನಿಲ್ದಾಣದಿಂದ ಯಾವುದೇ ವಿಮಾನವು ನಿಗದಿತ ಸಮಯಕ್ಕೆ ಸರಿಯಾಗಿ ಕಾರ್ಯ ನಿರ್ವಹಿಸುವುದಿಲ್ಲ.

ವಿಮಾನ ಅಪಘಾತ

ವಿಮಾನ ಅಪಘಾತ

2004ರಿಂದ ಈಚೆಗೆ ಆರು ವಿಮಾನಗಳು ಅಪಘಾತಕ್ಕೀಡಾಗಿದೆ. 2004ರಲ್ಲಿ ಸೀತಾ ಏರ್ ಡೋರ್ನಿಯರ್ ವಿಮಾನ ಈ ನಿಲ್ದಾಣದಲ್ಲಿ ಅಪಘಾತಕ್ಕೀಡಾಗಿ ಎರಡು ದಿನ ದುರಸ್ತಿ ಕೆಲಸಕ್ಕೆ ವಿಮಾನ ನಿಲ್ದಾಣವನ್ನು ಮುಚ್ಚಲಾಗಿತ್ತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+