ರೇಪಿಸ್ಟ್ ಪ್ರೇಮಿ ಕಾಟ: ವಿಡಿಯೋ ಎಡಿಟರ್ ಆತ್ಮಹತ್ಯೆ

Boyfriend pressure -Delhi film editor Pallavi suicide in Mumbai
ಮುಂಬೈ, ಜುಲೈ 3: ಅವಳು ಯುವ ವಿಡಿಯೋ ಎಡಿಟರ್. ಅವಳಿಗೊಬ್ಬ ಪ್ರಿಯಕರನೂ ಇದ್ದ. ಅವನು ಆಕೆಯನ್ನು ಮದುವೆಯಾಗುವುದಾಗಿಯೂ ಮಾತು ಕೊಟ್ಟಿದ್ದ. ಈ ಮಧ್ಯೆ ಯೌವನದಲ್ಲಿದ್ದ ಇಬ್ಬರೂ ದೈಹಿಕವಾಗಿ ಒಂದಾಗಿದ್ದಾರೆ. ಅದಾದನಂತರ ಪ್ರಿಯಕರ ಕೈಕೊಟ್ಟಿದ್ದಾನೆ.

ಯುವತಿ ಆಗ ಕಂಗಾಲಾಗಿದ್ದಾಳೆ. ತಕ್ಷಣ ಅವನ ವಿರುದ್ಧ ಅತ್ಯಾಚಾರ ಆರೋಪ ಹೊರಿಸಿ ಪೊಲೀಸರಿಗೆ ದೂರು ನೀಡಿದ್ದಾಳೆ. ಈಗ ಕಂಗಾಲಾಗುವ ಸರದಿ ಪ್ರಿಯಕರನದ್ದಾಗಿದೆ. ಸರಿ ಅದಕ್ಕೆ ತನ್ನ ಪ್ರಿಯತಮೆ ಮೇಲೆ ಒಂದೇ ಸಮನೆ ಒತ್ತಡ ಹಾಕಲಾರಂಭಿಸಿದ್ದಾನೆ. ಹೇಗಾದರೂ ಮಾಡಿ ಅತ್ಯಾಚಾರ ದೂರನ್ನು ವಾಪಸ್ ತೆಗೆದುಕೊ ಎಂದು ಯುವತಿಯ ಮೇಲೆ ವಿಪರೀತ ಒತ್ತಡ ಹೇರಿದ್ದಾನೆ.

ದಿಕ್ಕುತೋಚದ ಯುವತಿ ಮುಂಬೈನ ಜೋಗೇಶ್ವರಿ ಬಡಾವಣೆಯಲ್ಲಿ ತನ್ನ ಬಾಡಿಗೆ ಮನೆಯಲ್ಲಿ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾಳೆ. ಮೂಲತಃ ದೆಹಲಿಯವಳಾದ 22 ವರ್ಷದ ಪಲ್ಲವಿ ಝಾ ಸಾವಿಗೀಡಾದ ನತದೃಷ್ಟೆ. ಬಾಲಿವುಡ್ ನಲ್ಲಿ ವೃತ್ತಿಜೀವನ ಕಂಡುಕೊಳ್ಳಲು 2 ವರ್ಷಗಳ ಹಿಂದೆ ಆಕೆ ಮುಂಬೈಗೆ ಬಂದು ನೆಲೆಸಿದ್ದಳು.

ಮಾಡೆಲ್ ಆಗಬೇಕೆಂಬ ಕನಸು ಕಾಣುತ್ತಿದ್ದ ಪಲ್ಲವಿ, film editor ಆಗಿದ್ದಳು. 5 ವರ್ಷಗಳ ಹಿಂದೆ ದೆಹಲಿಯವನೇ ಆದ ಶೈಲೇಂದ್ರ ಶರ್ಮಾ ಜತೆ ಲವ್ವಿಡವ್ವಿಗೆ ಬಿದ್ದಿದ್ದಳು. ಮದುವೆಯಾಗಲು 35 ಲಕ್ಷ ರೂ ವರದಕ್ಷಿಣೆ ನೀಡಬೇಕು ಎಂದು ಶೈಲೇಂದ್ರ, ಪಲ್ಲವಿಯನ್ನು ಪೀಡಿಸಿದ್ದನಂತೆ. ಪೊಲೀಸರು ಈಗ ಬಾಯ್ ಫ್ರೆಂಡ್ ನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+