Mallನಲ್ಲಿ ಎಲ್ಲರೆದುರು ಹಾರಿ ಪ್ರಾಣಬಿಟ್ಟ ಟೆಕ್ಕಿ

23 ವರ್ಷದ ಷಣ್ಮುಗಂ ಎಂಬ ಟೆಕ್ಕಿ ನಗರದ ರಾಯಪೇಟದಲ್ಲಿರುವ Express Avenue Mallನಲ್ಲಿ ಮೂರೆಯ ಮಹಡಿಯಿಂದ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಷಣ್ಮುಗಂ Cognizant Technologies ಕಂಪನಿಯಲ್ಲಿ ಸಾಫ್ಟ್ ವೇರ್ ಇಂಜಿನಿಯರ್ ಆಗಿದ್ದರು.
ಮಳಿಗೆಯವರು ಮತ್ತು ಗ್ರಾಹಕರು ಷಣ್ಮುಗಂನನ್ನು ಆಸ್ಪತ್ರೆಗೆ ದಾಖಲಿಸಿದರಾದರೂ ಅಷ್ಟರಲ್ಲಾಗಲೇ ಆತನ ಪ್ರಾಣ ಪಕ್ಷಿ ಹಾರಿಹೋಗಿತ್ತು. ಪ್ರೇಮ ವೈಫಲ್ಯವೇ ಆತ್ಮಹತ್ಯೆಗೆ ಕಾರಣವಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡಿದ್ದು ಹೇಗೆ: ಎಸ್ಕಲೇಟರಿನ ಸ್ಟೀಲ್ ಹಿಡಿಯ ಮೇಲೆ ಮಂಡಿಯೂರಿದ ಷಣ್ಮುಗಂ ಅಲ್ಲಿಂದ ಮಾಲ್ ಮಧ್ಯ ಭಾಗಕ್ಕೆ ಹಾರಿ ಪ್ರಾಣ ಬಿಟ್ಟಿದ್ದಾನೆ. ಆತ ಕೆಳಗೆ ಬಿದ್ದು 15 ನಿಮಿಷವಾದರೂ ಯಾರೂ ನೆರವಿಗೆ ಧಾವಿಸಲಿಲ್ಲ. ಆತ ವಿಲಿವಿಲಿ ಒದ್ದಾಡುತ್ತಿದ್ದ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
ಅಣ್ಣಾ ಸೆಲೈ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.












Click it and Unblock the Notifications