6000 ಕೋಟಿ ಸಾಲ ತೀರಿಸಿದ ರಿಲಯನ್ಸ್; ಜಿಗಿದ ಷೇರು

ಒಟ್ಟು 1 ಶತಕೋಟಿ ಡಾಲರ್ ಮೊತ್ತದ 2 ಪ್ರತ್ಯೇಕ ಸಾಲಗಳನ್ನು ಜೂನ್ ತ್ರೈಮಾಸಿಕದಲ್ಲಿ ತಮ್ಮ ಕಂಪನಿ ಮರುಪಾವತಿಸಿದೆ ಎಂದು Reliance Communications -RCom ಸೋಮವಾರ ಘೋಷಿಸುತ್ತಿದ್ದಂತೆ ಸಂತಸದಿಂದ ಪುಟಿದೆದ್ದ ಷೇರುದಾರರು ಕಂಪನಿಯ ಷೇರುಗಳಿಗೆ ಹೆಚ್ಚಿನ ಮೌಲ್ಯ ತಂದುಕೊಟ್ಟಿದ್ದಾರೆ.
ಅಂತಾರಾಷ್ಟ್ರೀಯ ಬ್ಯಾಂಕ್ ಸಮೂಹದಿಂದ 2007ರಲ್ಲಿ ಈ ಭಾರಿ ಮೊತ್ತದ ಸಾಲಗಳನ್ನು ಪಡೆದಿತ್ತು. ಇಷ್ಟೇ ಅಲ್ಲದೆ, RCom ಕಂಪನಿಯು ಇನ್ನೂ 1,200 ಕೋಟಿ ರೂ ಮೊತ್ತದ ಇತರೆ ಬಾಕಿಯನ್ನೂ ನಿಗದಿತ ಅವಧಿಯಲ್ಲಿ ತೀರಿಸಿದೆ.
ಇದರಿಂದ ಕಂಪನಿಯ ಮೌಲ್ಯ ಮತ್ತಷ್ಟು ಸದೃಢವಾಗಿದ್ದು, ಷೇರುಪೇಟೆ ಸಕಾರಾತ್ಮಕವಾಗಿ ಸ್ಪಂದಿಸಿ, BSEಯಲ್ಲಿ RCom ಷೇರುಗಳ ಮೌಲ್ಯ ಶೇ. 12.00 ಪ್ರಮಾಣದಲ್ಲಿ ಏರಿಕೆ ಕಂಡಿದೆ. ವರ್ಷ ವರ್ಷವೂ RCom ಕಂಪನಿ ಪಾವತಿಸಬೇಕಿರುವ ವಿದೇಶಿ ಸಾಲದ ಮೊತ್ತ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಾ ಬಂದಿದೆ.












Click it and Unblock the Notifications