ಬಿಎಸ್‌ವೈ ಮರಳುವ ಬಗ್ಗೆ ಬಿಜೆಪಿ ನಾಯಕರ ಉವಾಚ
ಬೆಂಗಳೂರು,
ಜೂ. 28 : ಭಾರತೀಯ ಜನತಾ ಪಕ್ಷಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮರಳುವ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಬಿಜೆಪಿ ನಾಯಕರು ತಮಗೆ ತಿಳಿದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಕೆಲವರು ಬರಬೇಕು ಎಂದು ಸ್ಪಷ್ಟವಾಗಿ ಹೇಳುತ್ತಿದ್ದರೆ, ಹಲವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿಕೆ ನೀಡುತ್ತಿದ್ದಾರೆ. id="toptextpromo"> id='are-slot-1' class='oiad oi-axt oiadv'>ಎರಡನೇ
ಸಾಲಿನ ನಾಯಕರುಗಳನೇಕರು ಯಡಿಯೂರಪ್ಪನವರು ಬಿಜೆಪಿ ಮರಳದಿದ್ದರೆ ಪಕ್ಷ ಉದ್ಧಾರವಾಗುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಶನಿವಾರ ಮಧ್ಯಾಹ್ನ ಬೆಂಗಳೂರಿನಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಕೂಡ ಯಾವುದೇ ನಿಖರವಾದ ತೀರ್ಮಾನವನ್ನು ತೆಗೆದುಕೊಳ್ಳಲಾಗಿಲ್ಲ. ಕೋರ್ ಕಮಿಟಿ ಸಭೆಯ ನಂತರ ಬಿಜೆಪಿ ನಾಯಕರು ಯಡಿಯೂರಪ್ಪ ಮರಳುವ ಬಗ್ಗೆ ಏನೆನ್ನುತ್ತಾರೆ ಓದಿರಿ. id='are-slot-2' class='oiad oi-axt oiadv'>
ಅನಂತ್ ಕುಮಾರ್
ಯಡಿಯೂರಪ್ಪ ಅವರು ಬಿಜೆಪಿ ಮರಳುವ ಬರುವ ಬಗ್ಗೆ ಅವರಿಂದ ಪ್ರಸ್ತಾವನೆಯೇ ಇಲ್ಲ. ಇನ್ನು ಅವರನ್ನು ಮರಳಿ ಕರೆಯಿಸಿಕೊಳ್ಳುವ ಬಗ್ಗೆ ಪ್ರಶ್ನೆಯೆಲ್ಲಿ ಬಂತು? ಹಿಂದೆ, ಕಲ್ಯಾಣ್ ಸಿಂಗ್ ಮತ್ತು ಉಮಾ ಭಾರತಿ ತಾವಾಗಿಯೇ ಬಿಜೆಪಿ ತ್ಯಜಿಸಿದ್ದರು ಮತ್ತು ತಾವಾಗಿಯೇ ಬಿಜೆಪಿ ಮರಳಿದರು. ಯಡಿಯೂರಪ್ಪನವರು ತಾವಾಗಿಯೇ ಮರಳಿ ಬರುವುದಾದರೆ ಬರಲಿ. ಇಲ್ಲಿ ಬಲವಂತದ ಪ್ರಶ್ನೆ ಉದ್ಭವಿಸುವುದಿಲ್ಲ.

ಡಿ.ವಿ ಸದಾನಂದ ಗೌಡ
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಮರಳಿ ಬಿಜೆಪಿ ತರಿಸುವ ಬಗ್ಗೆ ಪಕ್ಷ ಸ್ಪಷ್ಟ ನಿಲುವನ್ನು ಪ್ರಕಟಿಸಬೇಕು. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ. ಇಂಥ ಸಮಯದಲ್ಲಿ ಪಕ್ಷದಲ್ಲಿ ಇಲ್ಲಿ ಯಾವುದೇ ಗೊಂದಲವಿರಬಾರದು. ಪಕ್ಷದ ದೃಷ್ಟಿಯಿಂದ ಯಡಿಯೂರಪ್ಪ ಮರಳಿದರೆ ಬಿಜೆಪಿ ಬಲ ಬಂದಂತಾಗುತ್ತದೆ. ಇಲ್ಲದಿದ್ದರೆ ಲೋಕಸಭೆ ಚುನಾವಣೆಯಲ್ಲಿ ನಷ್ಟ ಅನುಭವಿಸುವವರು ನಾವೇ.

ತಾವರಚಂದ್ ಗೆಹ್ಲೋಟ್
ಯಡಿಯೂರಪ್ಪನವರನ್ನು ಬಿಜೆಪಿ ಮರಳಿ ತರುವ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ. ಕೆಲವರು ಅವರನ್ನು ಮರಳಿ ಕರೆಯಿಸಿಕೊಳ್ಳುವ ಬಗ್ಗೆ ಮಾತಾಡಿದ್ದಾರೆ. ಆದರೆ, ಯಡಿಯೂರಪ್ಪ ಅವರು ತಾವೇ ಸ್ವತಃ ಬಿಜೆಪಿ ಬಿಟ್ಟಿದ್ದರು. ಈಗ ಅವರಿಂದಲೇ ಪಕ್ಷಕ್ಕೆ ಮರಳುವ ಬಗ್ಗೆ ಪ್ರಸ್ತಾವನೆ ಬರಬೇಕು. ಅದು ಬಂದನಂತರವಷ್ಟೇ ಬಿಜೆಪಿ ಸಂದದೀಯ ಮಂಡಳಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಕೆಎಸ್ ಈಶ್ವರಪ್ಪ
ಯಡಿಯೂರಪ್ಪ ಅವರು ಬಿಜೆಪಿ ಮರಳುವ ಬಗ್ಗೆ ಪಕ್ಷದಲ್ಲಿ ಸಾಕಷ್ಟು ಗೊಂದಲಗಳಿರುವುದು ನಿಜ. ಅವರು ಬರಲಿ ಎಂದೂ ಹೇಳುವುದಿಲ್ಲ, ಬರಬಾರದು ಎಂದೂ ಹೇಳುವುದಿಲ್ಲ. ಬಂದ್ರೂ ಸಂತೋಷ, ಬರದಿದ್ರೂ ಸಂತೋಷ. ಆದರೆ, ಈ ಗೊಂದಲಗಳು ಆದಷ್ಟು ಬೇಗನೆ ನಿವಾರಣೆಯಾಗಬೇಕು. ಇದೇ ಮಾತನ್ನು ಜಗದೀಶ್ ಶೆಟ್ಟರ್ ಧ್ವನಿಸಿದ್ದಾರೆ.

ಪ್ರಹ್ಲಾದ್ ಜೋಶಿ
ಯಡಿಯೂರಪ್ಪ ಅವರು ಬಿಜೆಪಿಗೆ ವಾಪಸ್ ಬರಬೇಕು, ಅವರನ್ನು ವಾಪಸ್ ತರಬೇಕು ಎಂದು ಹಲವಾರು ನಾಯಕರು ನನಗೆ ಹೇಳಿದ್ದಾರೆ. ಈ ಸಂಗತಿಯನ್ನು ಬಿಜೆಪಿ ರಾಷ್ಟ್ರಾಧ್ಯಕ್ಷ ರಾಜನಾಥ್ ಸಿಂಗ್ ಅವರ ಮುಂದೆ ಇಡುತ್ತೇನೆ. ಬಿಜೆಪಿ ಹೈಕಮಾಂಡ್ ಈ ಕುರಿತು ಸ್ಪಷ್ಟ ನಿರ್ಣಯ ಸದ್ಯದಲ್ಲಿಯೇ ತೆಗೆದುಕೊಳ್ಳಲಿದೆ. ಈ ಬಗ್ಗೆ ಎರಡನೇ ಶ್ರೇಣಿಯ ನಾಯಕರು ಬಹಿರಂಗ ಹೇಳಿಕೆ ನೀಡಬಾರದು.


Click it and Unblock the Notifications
