ರಸೆಲ್ ಮಾರ್ಕೆಟ್ ಮಧ್ಯಭಾಗದಲ್ಲಿ ನಾನ್ ವೆಜ್

ಮಟಲ್ ಸ್ಟಾಲ್ ಗಳ ಚಿತ್ರ ಸಂತೆಗಾಗಿ ಇಲ್ಲಿ ಕ್ಲಿಕ್ಕಿಸಿ: ಮನೆ ಮುಂದೆ ಬೃಂದಾವನದಂತೆ ಹೂ ಹಣ್ಣುಗಳ ಅಂಗಡಿಗಳು ನಳನಳಸುತ್ತಿದ್ದರೆ ಹಿತ್ತಲಲ್ಲಿ ಅಂದರೆ ಮಾರುಕಟ್ಟೆಯ ಮಧ್ಯಭಾಗದಲ್ಲಿ ನಾನ್ ವೆಜ್. ತಾಜಾ ಆಗಿ ಇಲ್ಲಿ ಲಭ್ಯವಾಗುವ ನಾನ್ ವೆಜ್ ಐಟಂಗಳು ಗ್ರಾಹಕರ ಬಾಯೂರಿಸುತ್ತವೆ.
ಸುಮಾರು 125 ಮಟನ್ ಸ್ಟಾಲ್ ಗಳು ಇಲ್ಲಿವೆ. ರಾಜ್ಯದ ಉತ್ತರ ಭಾಗದಿಂದ ಹೆಚ್ಚಾಗಿ ಇಲ್ಲಿಗೆ ಸಪ್ಲೈ ಆಗುತ್ತದೆ. ಅಲ್ಲದೆ ಪಕ್ಕದ ಆಂಧ್ರದಿಂದಲೂ ಇಲ್ಲಿಗೆ ಮಟನ್ ಬರುತ್ತದೆ. ಅನಂತಪುರ, ಹಿಂದೂಪುರದ ಮಟನ್ ಗೆ ಗ್ರಾಹಕರಿಂದ ಹೆಚ್ಚು ಬೇಡಿಕೆಯಿದೆ.
ಮುಸಲ್ಮಾನರ ಪವಿತ್ರ ಹಬ್ಬವಾದ ರಂಜಾನ್ ವೇಳೆ ಮಾರುಕಟ್ಟೆಗೆ ವಿಶೇಷ ಕಳೆ ಕಟ್ಟುತ್ತದೆ. ಇಲ್ಲಿನ ಸ್ಟಾಲುಗಳು ಬೆಳಗ್ಗೆಯೇ ಅಂಗಡಿ ತೆರೆಯುತ್ತವೆ. ಮಧ್ಯಾಹ್ನನದ ವೇಳೆಗೆ ಬಹುತೇಕ ಸರಕು ಬಿಕರಿಯಾಗಿ ಮುಗಿದಿರುತ್ತದೆ. ಆದ್ದರಿಂದ ಬೆಳಗ್ಗೆಯೇ ಮಾರುಕಟ್ಟೆಗೆ ಭೇಟಿ ನೀಡಿದರೆ ಫ್ರೆಶ್ ಮಟನ್ ಸಿದ್ಧ.
ಬೆಂಗಳೂರಿನ ಕೆಆರ್ ಮಾರುಕಟ್ಟೆ, ಯಶವಂತಪುರದ ಮಾರುಕಟ್ಟೆಯಲ್ಲಿ ಮತ್ತು ನಗರದ ನಾನಾ ಕಡೆಗಳಲ್ಲೂ ಮಟನ್ ಸಿಗುತ್ತದಾದರೂ ಇಲ್ಲಿನ ಮಟನ್ ರುಚಿಯೇ ವಿಭಿನ್ನ/ ವಿಶೇಷ. ಜನ ಇಲ್ಲಿಗೆ ಹುಡುಕುಕೊಂಡು ಬರುತ್ತಾರೆ ಎನ್ನುತ್ತಾರೆ ಸ್ಟಾಲ್ ಮಾಲೀಕ ಜಬೀಉಲ್ಲಾ.
ಸೋ ನೆಕ್ಟ್ ಟೈಮ್ ತಾಜಾ ಮಟನ್ ಬೇಕೆಂದರೆ ಸೀದಾ ಶಿವಾಜಿನಗರದಲ್ಲಿರುವ ರಸೆಲ್ ಮಾರ್ಕೆಟಿಗೆ ಭೇಟಿ ನೀಡಿ ಎನ್ನುತ್ತಾರೆ ಜಬೀಉಲ್ಲಾ...












Click it and Unblock the Notifications