ನರೇಂದ್ರ ಮೋದಿ ಕಾಡಿನಲ್ಲಿ ಸಿಂಹಿಣಿಯರ ಘರ್ಜನೆ

ಅಹಮದಾಬಾದ್,

ಜೂನ್
29:
ನರೇಂದ್ರ
ಮೋದಿ
ಕಾಡಿನಲ್ಲಿ
ಸಿಂಹಿಣಿಯರ
ಘರ್ಜನೆ!
ಇದೇನೋ
ಒಂಥರಾ
odd
ಆಗಿ
ಕೇಳಿಸುತ್ತಿದೆಯಲ್ವಾ?
ಆದರೂ
ಇದು
ನಿಜ್ಜಾ.

id="toptextpromo">
id='are-slot-1'
class='oiad
oi-axt
oiadv'>

ಏನಪ್ಪಾ

ಅಂದರೆ
ಗುಜರಾತಿನ
ಮುಖ್ಯಮಂತ್ರಿ
ನರೇಂದ್ರ
ಮೋದಿ
ಅವರು
ಮಹಿಳೆಯರಲ್ಲಿನ
ಅಂತಃಶಕ್ತಿ
ಅರಿತು
ಅವರನ್ನು
ಕಾಡಿಗೆ
ಅಟ್ಟಿದ್ದಾರೆ.
'ಅಯ್ಯೋ
ನಾಡಿನಲ್ಲೇ
ನಿಮ್ಮ
ಕೈಯಲ್ಲಿ
ಏನು
ಮಾಡೋಕ್ಕಾಗೊಲ್ಲಾ
ಅಂಥಾದ್ದರಲ್ಲಿ
ಕಾಡಿಗೆ
ಹೋಗಿ
ಏನು
ಮಾಡ್ತೀರಿ'
ಎಂದು
ಮಹಿಳೆಯರಲ್ಲಿನ
ಧೀಶಕ್ತಿಯನ್ನು
ಅಡಗಿಸದೆ
ಮಹಿಳೆಯರ
ತಾಕತ್ತನ್ನು
ಸಮರ್ಪಕವಾಗಿ
ಬಳಸಿಕೊಳ್ಳುತ್ತಿದ್ದಾರೆ.

id='are-slot-2'
class='oiad
oi-axt
oiadv'>

ಗುಜರಾತಿನ

ಖ್ಯಾತ
ಅರಣ್ಯಧಾಮವಾದ
ಗಿರ್
ಪ್ರದೇಶದಲ್ಲಿ
ಸಿಂಹ
ಸಂತಾನವನ್ನು
ಪೋಷಿಸುವ
ಹೊಣೆಗಾರಿಕೆಯನ್ನು
ಮುಖ್ಯಮಂತ್ರಿ
ಮೋದಿ
ಅವರು
ಯುವ
ಮಹಿಳೆಯರ
ಹೆಗಲಿಗೆ
ವರ್ಗಾಯಿಸಿದ್ದಾರೆ.
ಅದು ಆರಂಭವಾಗಿದ್ದು 2007ರಲ್ಲಿ...

ಅದು ಆರಂಭವಾಗಿದ್ದು 2007ರಲ್ಲಿ...

ಜುನಾಗಢ, ಅಮ್ರೇಲಿ ಮತ್ತು ಭಾವ್ ನಗರ ಜಿಲ್ಲೆಗಳಲ್ಲಿರುವ ಕಾಡುಗಳಲ್ಲಿ ಸಿಂಹ ಸಂಕುಲವನ್ನು ರಕ್ಷಿಸಲು ಮುಖ್ಯಮಂತ್ರಿ ಮೋದಿ ಅವರು ಯುವ ಮಹಿಳೆಯರನ್ನು ನೇಮಕ ಮಾಡಿದರು. ಅಲ್ಲಿಂದ ಮುಂದಕ್ಕೆ ಮಹಿಳೆಯರು ಮತ್ತು ಸಿಂಹಗಳು ಪರಸ್ಪರ ಸದೃಢವಾಗಿ ಬೆಳೆಯುತ್ತಿದ್ದಾರೆ!

40 ಮಹಿಳಾ ಫಾರೆಸ್ಟ್ ಗಾರ್ಡುಗಳು

40 ಮಹಿಳಾ ಫಾರೆಸ್ಟ್ ಗಾರ್ಡುಗಳು

ಇದುವರೆಗೂ ಗುಜರಾತ್ ಸರಕಾರ ಸುಮಾರು 40 ಮಹಿಳಾ ಫಾರೆಸ್ಟ್ ಗಾರ್ಡುಗಳನ್ನು ನೇಮಕ ಮಾಡಿಕೊಂಡಿದೆ. ಈ ಮಹಿಳೆಯರು ಅರಣ್ಯ ಸಂರಕ್ಷಣೆಯಿಂದ ಹಿಡಿದು ವನ್ಯಜೀವಿ ಸಂರಕ್ಷಣೆ, ಮಾನವ-ಪ್ರಾಣಿ ಸಂಕುಲ ಘರ್ಷಣೆ ಉಪಶಮನ, ಪ್ರಾಣಿಗಳ ರಕ್ಷಣೆ, ಪರಿಸರ ಪ್ರವಾಸೋದ್ಯಮ, ಸಂಶೋಧನೆ, ತರಬೇತಿ ಮತ್ತು ಜನಜಾಗೃತಿ ಕ್ಷೇತ್ರಗಳಲ್ಲಿ ಇವರು ಶಕ್ತಿಮೀರಿ ದುಡಿಯುತ್ತಿದ್ದಾರೆ.

ಇನ್ನೂ ನೂರು ವನಿತಾ ವನ ರಕ್ಷಾ ಸಹಾಯಕರು

ಇನ್ನೂ ನೂರು ವನಿತಾ ವನ ರಕ್ಷಾ ಸಹಾಯಕರು

ಆರಂಭದ ಯಶಸ್ಸಿನಿಂದ ಉತ್ತೇಜಿತರಾದ ಮುಖ್ಯಮಂತ್ರಿ ಮೋದಿ ಅವರು ಈ ವರ್ಷವೂ ನೂರಕ್ಕೂ ಹೆಚ್ಚು ವನಿತಾ ವನ ರಕ್ಷಾ ಸಹಾಯಕರ ನೇಮಕಾತಿ ಮಾಡಿಕೊಳ್ಳುವ ಪ್ರಕ್ರಿಯೆ ಆರಂಭಿಸಿದ್ದಾರೆ.

ಪುರುಷರಿಗಿಂತ ಮಹಿಳೆಯರ ಸಾಧನೆ ಹೆಚ್ಚು

ಪುರುಷರಿಗಿಂತ ಮಹಿಳೆಯರ ಸಾಧನೆ ಹೆಚ್ಚು

ಆರಂಭದ ಹಂತದಲ್ಲಿ ಸಮೀಪದ ಗ್ರಾಮಸ್ಥರ ವಿಶ್ವಾಸ ಗಳಿಸುವ ಈ ವನಿತಾ ವನ ರಕ್ಷಾ ಸಹಾಯಕರು ಅವರಲ್ಲಿ ವನ್ಯಜೀವಿ ಸಂರಕ್ಷಣೆ ಬಗ್ಗೆ ಅರಿವು ಮೂಡಿಸುತ್ತಾರೆ. ವನ್ಯಜೀವಿಗಳ ಜತೆ ಭಾವನಾತ್ಮಕವಾಗಿ ಹೊಂದಿಕೊಳ್ಳುವಂತೆ ಮನೆಮನೆಗಳಲ್ಲೂ ಪ್ರಚಾರ ಮಾಡುತ್ತಿದ್ದಾರೆ. ಮನೆಯಲ್ಲಿ ಮಹಿಳೆಯರು ಮತ್ತು ಮಕ್ಕಳೊಂದಿಗೆ ಸುಲಲಿತವಾಗಿ ಬೆರೆಯುವ ಮಹಿಳಾ ವನ್ಯ ರಕ್ಷಕರು ಪುರುಷರಿಗಿಂತ ಹೆಚ್ಚಿನದನ್ನು ಸಾಧಿಸುತ್ತಾರೆ ಎಂಬ ವಿಶ್ವಾಸವನ್ನು ಗಟ್ಟಿಗೊಳಿಸಿದ್ದಾರೆ.

ಸಿಂಹ ಬೇಟೆಗೆ ಕಡಿವಾಣ

ಸಿಂಹ ಬೇಟೆಗೆ ಕಡಿವಾಣ

ಪ್ರಾಣಿ ಬೇಟೆ ವಿಷಯದಲ್ಲಿ ಮಹಿಳೆಯರ ಮೂಲಕ ಪುರುಷರನ್ನು ಕಟ್ಟಿಹಾಕುವಲ್ಲಿ ಯಶಸ್ವಿಯಾಗಿರುವ ಮಹಿಳಾ ವನ್ಯ ರಕ್ಷಕರು ಸಿಂಹ ಸೇರಿದಂತೆ ಸಕಲ ವನ್ಯಜೀವಿ ಸಂಕುಲದ ಉಳಿವಿನಲ್ಲಿ ಮಹತ್ತರ ಪಾತ್ರ ನಿಭಾಯಿಸುತ್ತಿದ್ದಾರೆ.

ಮನಿಷಾ ವಘೇಲಾ ಕಥೆಯನ್ನೇ ಕೇಳಿ

ಮನಿಷಾ ವಘೇಲಾ ಕಥೆಯನ್ನೇ ಕೇಳಿ

2011ರಲ್ಲಿ ಅರಣ್ಯ ರಕ್ಷಕಿ ಮನಿಷಾ ಏನು ಮಾಡಿದರೆಂದರೆ ಪ್ರಾಣಿ ಬೇಟೆಯಾಡಲು ಹೊಂಚುಹಾಕುತ್ತಿದ್ದ ತಂಡದ ವಿರುದ್ಧ ಏಕಾಂಗಿಯಾಗಿ ಹೋರಾಡಿದರು. ಇದಲ್ಲದೆ ಇತರೆ ಮಹಿಳೆಯರು ಇದುವರೆಗೂ ಸುಮಾರು 500ಕ್ಕೂ ಹೆಚ್ಚು ವನ್ಯಜೀವಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ.

ನಾಶದ ಮಾತೇ ಇಲ್ಲ; ಸಂಖ್ಯೆ ಹೆಚ್ಚಳ

ನಾಶದ ಮಾತೇ ಇಲ್ಲ; ಸಂಖ್ಯೆ ಹೆಚ್ಚಳ

ತತ್ಪರಿಣಾಮ ಗಿರ್ ಅರಣ್ಯದಲ್ಲಿ ಏಷ್ಯಾ ಜಾತಿಯ ಸಿಂಹಗಳ ಸಂಖ್ಯೆ ಕಳೆದ 5 ವರ್ಷಗಳಲ್ಲಿ ನಾಶವಾಗದೆ ಶೇ. 13ರಷ್ಟು ವೃದ್ಧಿಸಿದೆ. ಇಂದು ಗಿರ್ ಅರಣ್ಯದಲ್ಲಿರುವ ಸಿಂಹಗಳ ಸಂಖ್ಯೆ 411.

ಪ್ರವಾಸೋದ್ಯಮಕ್ಕೂ ಕೋಡು ಮೂಡಿದೆ

ಪ್ರವಾಸೋದ್ಯಮಕ್ಕೂ ಕೋಡು ಮೂಡಿದೆ

ಅರಣ್ಯಗಳಲ್ಲಿ ಮಹಿಳೆಯರೇ ಹೆಜ್ಜೆ ಹಾಕುತ್ತಿರುವುದರಿಂದ ಪ್ರವಾಸೋದ್ಯಮಕ್ಕೆ ಕೋಡು ಮೂಡಿದೆ. 'Khusboo Gujarat Ki' ಕಾರ್ಯಕ್ರಮದ ಮೂಲಕ ಪ್ರವಾಸಿಗರು ಧೈರ್ಯವಾಗಿ ಕಾಡುಗಳಲ್ಲಿ ಹೆಜ್ಜೆ ಹಾಕುವಂತಾಗಿದೆ. ಪ್ರವಾಸೋದ್ಯಮ ಅಭಿವೃದ್ಧಿ ಪಥದಲ್ಲಿ ಸಾಗುತ್ತಿದೆ. 2008-09 ರಲ್ಲಿ 1,61,000 ರಷ್ಟಿದ್ದ ಪ್ರವಾಸಿಗರ ಸಂಖ್ಯೆ ಈಗ 4,16,000ಕ್ಕೆ ಏರಿದೆ.

ಕ್ಯಾಮರಾ ಕಣ್ಣಿನಲ್ಲಿ ದಾಖಲು

ಕ್ಯಾಮರಾ ಕಣ್ಣಿನಲ್ಲಿ ದಾಖಲು

Rifles, walkie-talkie radios ಮತ್ತು bikes ಮಹಿಳಾ ವನ್ಯ ರಕ್ಷಕರಿಗೆ ಆಪತ್ಪಾಂಧವ ಎನಿಸಿವೆ. ಇತ್ತೀಚೆಗೆ ಮಹಿಳಾ ವನ್ಯ ರಕ್ಷಕರ ಕೈಗೆ ಪುಟ್ಟದೊಂದು ಕ್ಯಾಮೆರಾವನ್ನು ನೀಡಲಾಗಿದೆ. ಇದರಿಂದ ವನ ರಕ್ಷಕಿಯರು ಸೆಟೆದೆದ್ದು ಅರಣ್ಯಗಳಲ್ಲಿ ಹೆಜ್ಜೆಹಾಕುತ್ತಿದ್ದಾರೆ. ಅರಣ್ಯದಲ್ಲಿನ ಪ್ರತಿಯೊಂದು ಚಲನವಲನವನ್ನೂ ಕ್ಯಾಮರಾ ಕಣ್ಣಿನಲ್ಲಿ ದಾಖಲಿಸುತ್ತಿದ್ದಾರೆ.

niticentral ವೆಬ್ ಸೈಟಿನಲ್ಲಿ

niticentral ವೆಬ್ ಸೈಟಿನಲ್ಲಿ

niticentral ವೆಬ್ ಸೈಟ್ ಈ ಬಗ್ಗೆ ವಿಸ್ಮೃತ ವರದಿ ಪ್ರಕಟಿಸಿದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.
http://www.niticentral.com/2013/06/28/women-who-defend-gujarats-wildlife-96459.html

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+