ಏಕಾಂಗಿ ಯುವತಿ ರೇಪ್ ಯತ್ನ: ಪಿಜ್ಜಾ ಬಾಯ್ ಅರೆಸ್ಟ್

17 ವರ್ಷದ ಪಿಜ್ಜಾ ಬಾಯ್ ಈ ದುಸ್ಸಾಹಸಕ್ಕೆ ಕೈಹಾಕಿದ ಬಾಲಕ. ಮುಂಬೈ ವೊರ್ಲಿಯಲ್ಲಿರುವ ಷೊವಿಸನ್ ಪಿಜ್ಜಾ ಸೆಂಟರಿನ ಡೆಲಿವರಿ ಬಾಯ್ ಪಿಜ್ಜಾಗೆ ಆರ್ಡರ್ ಮಾಡಿದ್ದ ಮನೆಗೆ ಮಂಗಳವಾರ ಸಂಜೆ ತೆರಳಿದ್ದಾನೆ. ಅಲ್ಲಿ 22 ವರ್ಷದ ಯುವತಿ ಕಣ್ಣಿಗೆ ಬೀಳುತ್ತಿದ್ದಂತೆ ಆಕೆ ಏಕಾಂಗಿಯಾಗಿದ್ದಾಳೆಂದು ಭಾವಿಸಿ, ಸೀದಾ ಅಡುಗೆ ಮನೆಯೊಳಗೆ ಹೋಗಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ
ಅಡುಗೆ ಮನೆಯಲ್ಲಿದ್ದ ಯುವತಿಯು ಅತ್ಯಾಚಾರಕ್ಕೆ ಪ್ರತಿರೋಧವೊಡ್ಡಿದಾಗ ಪಿಜ್ಜಾ ಬಾಯ್ ಆಕೆಯ ಮೇಲೆ ಖಾರದ ಪುಡಿ ಎರಚಿ, ಚಾಕುವಿನಿಂದ ತಿವಿಯಲು ಯತ್ನಿಸಿದ್ದಾನೆ ಎಂದು ದೂರನ್ನು ಆಧರಿಸಿ ಪೊಲೀಸರು ತಿಳಿಸಿದ್ದಾರೆ.
ಆ ವೇಳೆ ಯುವತಿ ಜೋರಾಗಿ ಕೂಗಿಕೊಂಡಾಗ ಪಕ್ಕದ ಮನೆಯವರು ನೆರವಿಗೆ ಧಾವಿಸಿದ್ದಾರೆ. ಆ ಗಲಾಟೆಯಲ್ಲಿ ಡೆಲಿವರಿ ಬಾಯ್ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ತೀವ್ರವಾಗಿ ಗಾಯಗೊಂಡಿದ್ದ ಯುವತಿಯನ್ನು ನೆರೆಮನೆಯವರು ಆಸ್ಪತ್ರೆಗೆ ಸೇರಿಸಿ, ಆಕೆಯ ಪೋಷಕರಿಗೆ ಸುದ್ದಿ ಮುಟ್ಟಿಸಿದ್ದಾರೆ. ತನಿಖೆಗಿಳಿದ ಪೊಲೀಸರು ಸೀದಾ ಷೊವಿಸನ್ ಪಿಜ್ಜಾ ಸೆಂಟರಿಗೆ ಹೋಗಿ ವಿಚಾರಿಸಲಾಗಿ ಆರೋಪಿ ಸಿಕ್ಕಿಬಿದ್ದಿದ್ದಾನೆ.
ಲೋಕಲ್ ಟ್ರೈನಿನಲ್ಲಿ ಅತ್ಯಾಚಾರ:
ಮತ್ತೊಂದು ಪ್ರಕರಣದಲ್ಲಿ, 24 ವರ್ಷದ ಟೈಲರ್ ಒಬ್ಬ ಚಲಿಸುತ್ತಿದ್ದ ಮುಂಬೈ ಲೋಕಲ್ ಟ್ರೈನಿನಲ್ಲಿ ಬಾಲಕಿಯೊಬ್ಬಳ ಮೇಲೆ ಅತ್ಯಾಚಾರವೆಸಗಿದ್ದಾನೆ. ಆರೋಪಿ ಟೈಲರ್ ಸಯ್ಯದ್ ಅಷ್ಪಖ್ ತನ್ನ ಸಹೋದ್ಯೋಗಿಯ ಮಗಳನ್ನು ಅಪಹರಿಸಿ, ಆಕೆಯ ಮೇಲೆ ಟ್ರೈನಿನಲ್ಲಿ ಬಲಾತ್ಕಾರ ನಡೆಸಿದ್ದಾನೆ ಎಂದು ಆರೋಪಿಸಲಾಗಿದೆ.











Click it and Unblock the Notifications