ಮಣಿಪಾಲ್ ರೇಪ್: ಯೋಗೀಶ್, ಹರೀಶ್ ಬಂಧನ

ಬಂಧಿತ ಇಬ್ಬರು ಯೋಗೀಶ್ ಮತ್ತು ಹರೀಶ್. ಇವರಿಬ್ಬರೂ ಆಟೋ ಚಾಲಕರು. ಈ ಆರೋಪಿಗಳು ಅತ್ಯಾಚಾರ ಕೃತ್ಯವನ್ನು ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಣವನ್ನೂ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳ ಪೈಕಿ ಯೋಗೀಶ್ ತನ್ನ ಬಂಧನದ ಸುಳಿವು ತಿಳಿಯುತ್ತಿದ್ದಂತೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ತೀವ್ರವಾಗಿ ಅಸ್ವಸ್ಥಗೊಂಡ ಯೋಗೀಶನನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಯೋಗೀಶನಿಗೆ ಕ್ರಮಿನಲ್ ಹಿನ್ನೆಲೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕುಕೃತ್ಯಕ್ಕೆ ಬಳಿಸಿದ್ದ ಆಟೋವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಸ್ಥಳೀಯ ಯುವಕರು. ಮತ್ತೊಬ್ಬ ಆರೋಪಿ ಆನಂದನ ಬಂಧನಕ್ಕೆ ಪೊಲೀಸ್ ತಂಡ ಗೋವಾಕ್ಕೆ ತೆರಳಿದೆ ಎಂದು ಪೊಲೀಸರು ತಿಳಿಸಿದ್ದಾರೆ.












Click it and Unblock the Notifications