ಮಹಾರಾಷ್ಟ್ರ ಬ್ಯಾಂಕ್ ATM ಕದ್ದೊಯ್ದ ಖದೀಮರು

ಆದರೆ ಅತ್ತ ಬೆಂಗಳೂರು ಗ್ರಾಮಾಂತರದಲ್ಲಿ ಅಂದರೆ ಆನೇಕಲ್ ತಾಲೂಕಿನ ಇಗ್ಗಲೂರಿನಲ್ಲಿ ಮಂಗಳವಾರ ರಾತ್ರಿ ಕಳ್ಳರು ATM ಯಂತ್ರವನ್ನು ಕದ್ದೊಯ್ದಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಅಂದಹಾಗೆ ಈ ATM ಬ್ಯಾಂಕ್ ಆಫ್ ಮಹಾರಾಷ್ಟ್ರದ ಆನೇಕಲ್ ಶಾಖೆಗೆ ಸೇರಿದ್ದಾಗಿದೆ.
ಎಟಿಎಂ ಕೇಂದ್ರಕ್ಕೆ ಸೆಕ್ಯುರಿಟಿ ಗಾರ್ಡ್ ಇರಲಿಲ್ಲ. ಮಂಗಳವಾರ ರಾತ್ರಿ 2 ಗಂಟೆಯಲ್ಲಿ ಕಳ್ಳತನವಾಗಿರುವ ಸಾಧ್ಯತೆಯಿದೆ. ಸಿಸಿಟಿವಿ ಕ್ಯಾಮೆರಾದಲ್ಲಿ ಕಳ್ಳತನದ ದೃಶ್ಯಗಳು ದಾಖಲಾಗಿದೆ ಎಂದು ತಿಳಿದುಬಂದಿದೆ.
ಉಳಿದಂತೆ - ATMನಲ್ಲಿ ಹಣ ಎಷ್ಟಿತ್ತು? ಕದ್ದೊಯ್ದಿರುವವರು ಯಾರು? ಹೇಗೆ ಕದ್ದೊಯ್ದಿದ್ದಾರೆ ಎಂಬುದನ್ನು ತಿಳಿಯಲು ಹೆಬ್ಬಗೋಡಿ ಠಾಣೆ ಪೊಲೀಸರು ಈಗ ಬ್ಯಾಂಕ್ ಆಫ್ ಮಹಾರಾಷ್ಟ್ರದ ಎಟಿಎಂ ಕೇಂದ್ರಕ್ಕೆ ಭೇಟಿ ನೀಡಿ, ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರು : ಎಟಿಎಂ ಯಂತ್ರವನ್ನೇ ಕದ್ದ ಕಳ್ಳರು!












Click it and Unblock the Notifications