ಅಬ್ಬಬ್ಬಾ! ಇಲ್ಲಿದೆ ನೋಡಿ ಅಪ್ಪಟ ಚಿನ್ನದ ಟಾಯ್ಲೆಟ್

'ಅವರು ಬಿಡಪ್ಪಾ ಹುಟ್ಟುತ್ತಾನೆ ಚಿನ್ನದ ಚಮಯವನ್ನು ಬಾಯಲ್ಲಿಟ್ಟುಕೊಂಡು ಹುಟ್ಟಿದ್ದಾರೆ' ಎಂಬ ಮಾತು ಕೇಳಿದ್ದೇವೆ. ಆದರೆ ಇದಕ್ಕೇನನ್ನನುತ್ತೀರಿ!? ಇಲ್ಲಿ ಕಕ್ಕ ಮಾಡಕ್ಕೂ ಚಿನ್ನದ ಟಾಯ್ಲೆಟ್ ಇದೆ. ತಮಾಷೆಗೆ ಹೀಗೆ ಕೇಳಿದ್ದಕ್ಕೆ ನಮ್ಮ ಹಳ್ಳಿ ರೈತನೊಬ್ಬ ಹೇಳಿದ್ದು ಮಾರ್ಮಿಕವಾಗಿದೆ, ಕೇಳಿ. ಚಿನ್ನದ ಟಾಯ್ಲೆಟ್ ಮೇಲೆ ಕುಳಿತರೆ ಬರುತ್ತಿರುವ ಕಕ್ಕನು ನಿಂತುಹೋಗುತ್ತದೆ!

ನಾವು ಬಿಡಿ ಇರೋ 30x30 ಮನೆಯನ್ನು ಅತ್ಯಗತ್ಯ ಅಲಂಕಾರಿಕ ಸಾಮಗ್ರಿಗಳೊಂದಿಗೆ ಅಗತ್ಯಗಳನ್ನು ಪೂರೈಸಿಕೊಂಡು ಧನ್ಯತಾಭಾವ ಅನುಭವಿಸುತ್ತೇವೆ. ಆದರೆ ಉಳ್ಳವರು ಶಿವಾಲಯವ ಕಟ್ಟುವರಯ್ಯಾ ಅನ್ನುವಂತೆ ದುಡ್ಡು ಇರುವ ಧನಿಕರು ಚಿನ್ನದ ಟಾಯ್ಲೆಟ್, ಬಾತ್ ರೂಂ ಕಟ್ಟಿಸುತ್ತಾರೆ.

hong-kong-commode-toilet-made-of-solid-gold-jewels

ಸದ್ದಾಂ ಹುಸೇನ್ ಗೊತ್ತಲ್ಲಾ? ಇರಾಕ್ ಸರ್ವಾಧಿಕಾರಿ ಸದ್ದಾಂ ಬರೀ ಟಾಯ್ಲೆಟ್ ಅಷ್ಟೇ ಅಲ್ಲ. ಚಿನ್ನದ ಮಂಚವನ್ನೂ ಮಾಡಿಸಿಕೊಂಡಿದ್ದ. ಟಾಯ್ಲೆಟ್ ಮತ್ತು ಮಂಚವನ್ನು ಚಿನ್ನದಿಂದ ಮಾಡಿಸಿಕೊಂಡಿದ್ದ ಅಂದಮೇಲೆ ತನ್ನ ವಿಕೃತ ಮನಸನ್ನು ಇನ್ನೂ ಏನೆಲ್ಲಾ ಐಷಾರಾಮಿ ಜಗತ್ತಿಗೆ ಒಗ್ಗಿಕೊಂಡಿದ್ದನೋ ನೀವೇ ಊಹಿಸಿ. ಆದರೆ ಅದು ಇರಾಕಿನ ಬಡ ಜನತೆಯ ಹಣ ಎಂಬುದು ಮನಸಿಗೆ ಖೇದ ತರುವಂತಹುದು.

Daily Mail ವರದಿ ಪ್ರಕಾರ Hong Kong ನಲ್ಲಿ 30 ಲಕ್ಷ ಪೌಂಡ್ ವೆಚ್ಚ ಮಾಡಿ ನಾಜೂಕಾಗಿ ಗಟ್ಟಿ ಚಿನ್ನದಲ್ಲಿ ಚಿನ್ನದ ಟಾಯ್ಲೆಟ್ ನಿರ್ಮಿಸಿದ್ದಾರೆ. ಅಸಂಖ್ಯಾತ ಚಿನ್ನಾಭರಣಗಳು ಟಾಯ್ಲೆಟ್ ಗೋಡೆಗಳಲ್ಲಿ ನೇತಾಡುತ್ತಿವೆ.

ಇಷ್ಟೇ ಅಲ್ಲ. ಇನ್ನೂ ಚಿತ್ರವಿಚಿತ್ರ ದುಬಾರಿ ಐಷಾರಾಮಿ ಟಾಯ್ಲೆಟುಗಳು ನಾನಾ ದೇಶಗಳಲ್ಲಿವೆ. ಲಂಡನ್, ಮೆಕ್ಸಿಕೋ, ಟೋಕಿಯೋ ಅವುಗಳತ್ತ ಒಂದು ಸುತ್ತು ಹೋಗಿ ಬರಲು ಇಲ್ಲಿ ಕ್ಲಿಕ್ ಮಾಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+