ಬ್ರೆಜಿಲ್ ಭೂಪ ಈಗ 'ನಾಯಿ ಮನುಷ್ಯ'!

ಬ್ರೆಜಿಲ್ ಭೂಪ ಈಗ 'ನಾಯಿ ಮನುಷ್ಯ'!:
ಹೇಳಿದಂಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ಬ್ರೆಜಿಲ್ ಭೂಪ ಈಗ 'ನಾಯಿ ಮನುಷ್ಯ' ಎಂದು ಗುರುತಿಸಲ್ಪಟ್ಟಿದ್ದಾನೆ. ಅದಕ್ಕಾಗಿ ಅಪಾರ ಹಣ ತೆತ್ತಿದ್ದಾನೆ. ಆದರೆ ನೋವಿನ ಸಂಗತಿಯೆಂದರೆ ತನ್ನ ತೆವಲು ತೀರಿಸಿಕೊಳ್ಳಲು ಆ ನಾಯಿಯನ್ನು ಹತ್ಯೆ ಮಾಡಿದ್ದಾನೆ. ಇವನ ಹುಚ್ಚಾಟ/ಪಾಪದ ಕೃತ್ಯವನ್ನು ಕಂಡು 'ಪೇಟಾ' ಕಟ್ಟಿಕೊಂಡವರು ಯಾರೂ ಇನ್ನೂ ಅವನ ಮೇಲೆ ಮುಗಿಬಿದ್ದಿಲ್ಲ.
ಸೌಂದರ್ಯದ ಬಗ್ಗೆ ನಮ್ಮ ಕಲ್ಪನೆಗಳನ್ನೆಲ್ಲಾ ತಲೆಕೆಳಗೆ ಮಾಡಿರುವ ಬ್ರೆಜಿಲಿನ ಈ ಭೂಪ ಅಪಾರ ನೋವು ತಿನ್ನುತ್ತಲೇ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು 'ನಾಯಿ ಮನುಷ್ಯ'ನಾಗಿದ್ದಾನೆ.
ಇವನೋ ಇವನ ಅವತಾರವೋ/ಅವಾಂತರವೋ. ಥೂ ನಾಯಿ ಮುಂಡೇದಾ ಎಂದು ಜನ ಅವವನ್ನು ಹಚ್ಚಾ ಅಂದಿದ್ದಾರಾ? ಗೊತ್ತಿಲ್ಲ. ಅಂದಹಾಗೆ ಚಿತ್ರದಲ್ಲಿರುವುದು ಕಂಪ್ಯೂಟರ್ ಗ್ರಾಫಿಕ್ ಡಿಸೈನ್.












Click it and Unblock the Notifications