ಸಿಂಗಪುರ ತುಂಬಾ ಹೊಗೆ, ಉಸಿರಾಟಕ್ಕೆ ಪರದಾಟ
ಸಿಂಗಪುರ, ಜೂ.20: ಜಗತ್ತಿನ ಸ್ವಚ್ಛ ನಗರಗಳಲ್ಲಿ ಒಂದಾದ ಸಿಂಗಪುರ ಶುಕ್ರವಾರ ಅಕ್ಷರಶಃ ಮುಸುಕಿನಲ್ಲಿ ಸಿಲುಕಿದೆ. ಪಕ್ಕದ ಇಂಡೋನೇಷಿಯಾದಲ್ಲಿ ಬಿದ್ದ ಬೆಂಕಿ ಎಬ್ಬಿಸಿರುವ ಹೊಗೆ ಸಿಂಗಪುರದ ಜನರನ್ನು ದಿಕ್ಕು ತೋಚದಂತೆ ಮಾಡಿದೆ. ಸಿಂಗಪುರದಲ್ಲಿ ಅಘೋಷಿತ ಎಮರ್ಜೆನ್ಸಿ ಪರಿಸ್ಥಿತಿ ಇದ್ದರೂ ಇಂಡೋನೇಷಿಯಾ ಉದಾಸೀನತೆ ತೋರುತ್ತಿದೆ.
ಇಷ್ಟಕ್ಕೂ ಇಂಡೋನೇಷಿಯಾದಲ್ಲಿ ಬೆಂಕಿ ಬಿದ್ದರೆ ಸಿಂಗಪುರದ ಜನ ಜೀವನ ಏಕೆ ಸ್ತಬ್ಧವಾಗಬೇಕು? ಸುಮಾತ್ರ ಸೇರಿದಂತೆ ಇಂಡೋನೇಷಿಯಾದ ಕಾಡುಗಳಲ್ಲಿನ ನೂರಾರು ಎಕರೆ ಮರಗಳನ್ನು ಸುಡಲಾಗುತ್ತಿದೆ. ಇದರಿಂದ ಹಬ್ಬಿರುವ ಇಂಗಾಲದ ಗಾಳಿ ಸಿಂಗಪುರದ ಪರಿಸರವನ್ನು ನಾಶ ಮಾಡಿದೆ.

ರಸ್ತೆಗಿಳಿದರೆ ದಾರಿ ಕಾಣದ ಪರಿಸ್ಥಿತಿ ಕಂಡು ಬಂದಿದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಗೂ ಹೀಗೂ ಕಚೇರಿ ತಲುಪಿದರೂ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ ಕೆಲಸ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
Pollutant Standards Index ಆಪಾಯದ ಮಟ್ಟ ತೋರಿಸುತ್ತಿದೆ. ಕಳೆದ 24 ಗಂಟೆ ಅವಧಿಯಲ್ಲಿ 400 ದಾಟಿತ್ತು. ಇದು ಜೀವ ಹಾನಿಕಾರಕ, ವೃದ್ಧರು, ಮಕ್ಕಳು ರೋಗಿಗಳಿಗೆ ಮಾರಕ ಎಂದು ಸರ್ಕಾರಿ ಮೂಲಗಳು ಸ್ಪಷ್ಟಪಡಿಸಿವೆ.
ಕಳೆದ ಎರಡು ದಿನಗಳಿಂದ ಮಾಲಿನ್ಯ ಸೂಚ್ಯಂಕ 226 ಆಸುಪಾಸಿನಲ್ಲಿತ್ತು. 1997ರಲ್ಲಿ ಒಮ್ಮೆ ಮಾಲಿನ್ಯದ ಸಮಸ್ಯೆಗೆ ಒಳಗಾಗಿದ್ದ ಸಿಂಗಪುರಕ್ಕೆ ಈಗ ಮತ್ತೊಮ್ಮೆ ಅನಗತ್ಯ ವಿಕೋಪದಿಂದ ಬಚಾವಾಗಲು ಹೆಣಗಾಡುವ ಪರಿಸ್ಥಿತಿ ತೋರಿದೆ.
ಫಾಸ್ಟ್ ಫುಡ್ ಹೋಟೆಲ್ ಗಳು, ಆರ್ಮಿ ತರಬೇತಿ ಸೇರಿದಂತೆ ಅನೇಕ ನಿತ್ಯದ ಕಾಯಕಗಳನ್ನು ನಿಲ್ಲಿಸಲಾಗಿದೆ. ಸಿಂಗಪುರದ ಪರಿಸರ ಸಚಿವ ವಿವಿಯನ್ ಬಾಲಕೃಷ್ಣನ್ ಕೋರಿಕೆ ಮೇರೆಗೆ ಕೊನೆಗೂ ಇಂಡೋನೇಷಿಯಾ ಕ್ರಮ ಕೈಗೊಂಡಿದೆ.
ಹೆಲಿಕಾಪ್ಟರ್ ಗಳನ್ನು ಕಳುಹಿಸಿ ಕೃತಕ ಮಳೆ ಸೃಷ್ಟಿಸಿ ಸಿಂಗಪುರದ ಆಗಸವನ್ನು ಕವಿದಿರುವ ಮಾಲಿನ್ಯಕಾರಕ ಹೊಗೆ ವಾತಾವಾರಣ ತಿಳಿಗೊಳಿಸುವ ಭರವಸೆ ಸಿಕ್ಕಿದೆ.ಸಿಂಗಪುರದ ಸ್ಥಿತಿ ಗತಿಗಳ ಬಗ್ಗೆ ನೇರ ವರದಿ
Singapore smog hits new high, danger to ill and elderly http://t.co/n8MtIqKhk2
— Alzheimers Lady (@AlzheimersLady) June 21, 2013
They should build an air conditioned dome around Singapore with the exception of changi airport, I'm sure it could be done
— Vishnu Rama (@Vishvicious) June 21, 2013
Give loads of respect to the bangladeshi workers, working to make Singapore a beautiful country despite the thick haze.
— Sofian Ishak (@YanEnola) June 21, 2013












Click it and Unblock the Notifications