ಸದ್ಯಕ್ಕೆ ಸಿಂಗಪುರಕ್ಕೆ ಬರಬೇಡಿ.. ಪ್ಲೀಸ್

ಜಗತ್ತಿನ ಬಹುತೇಕ ಕಾಗದ ಬಳಕೆ ಬೇಡಿಕೆಯನ್ನು ಈಡೇರಿಸುವ ಇಂಡೋನೇಷಿಯಾದ ಅರಣ್ಯದ ಒಡಲು ಮತ್ತೆ ಬರಿದಾಗಿದೆ. ಸಾವಿರಾರು ಹೆಕ್ಟೇರು ಅರಣ್ಯ ಪ್ರದೇಶಕ್ಕೆ ಮತ್ತೆ ಬೆಂಕಿ ಹಚ್ಚಲಾಗಿದೆ. ಇಂಡೋನೇಷಿಯಾದಲ್ಲಿ ಸಾಮೂಹಿಕ ಅರಣ್ಯ ನಾಶ ಇದೇ ಮೊದಲಲ್ಲ. ಬೇಡಿಕೆಗೆ ತಕ್ಕಂತೆ ಅರಣ್ಯದಲ್ಲಿ ಬೆಳೆ ಹಾಗೂ ಕೊಡಲಿ ಎರಡೂ ಕಾಣಿಸಿಕೊಳ್ಳಲಾಗುತ್ತದೆ.

ಆದರೆ, ಈ ಬಾರಿ ಇಂಡೋನೇಷಿಯಾದ ಅರಣ್ಯ ನಾಶ ಪಕ್ಕದ ಸಿಂಗಪುರದ ಮೇಲೆ ದೊಡ್ಡ ಪರಿಣಾಮವನ್ನೇ ಬೀರಿದೆ. ಸಿಂಗಪುರದ ಶುಭ್ರ ವಾತಾವರಣದಲ್ಲಿ ಇಂಡೋನೇಷಿಯಾದಿಂದ ಬೀಸಿರುವ ವಿಷಗಾಳಿ ಜನಜೀವನವನ್ನು ಹಾಳು ಮಾಡಿದೆ. ಪರಿಸರ ಮಾಲಿನ್ಯ ಸೂಚ್ಯಂಕ ಅಪಾಯದ ಮಟ್ಟ ತೋರಿಸುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ. ಸಿಂಗಪುರದಲ್ಲಿ ಉದ್ಯೋಗ ನಿರತರಾಗಿರುವ ಕನ್ನಡಿಗ ಗಿರೀಶ್ ಅಂದಲಗಿ ಅವರು ತಮ್ಮ ಅನುಭವವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

"ತಾನಷ್ಟೇ ಚೆನ್ನಾಗಿದ್ರೆ ಸಾಕಾಗಲ್ಲ ಅಕ್ಕ ಪಕ್ಕದವರೂ ಚೆನ್ನಾಗಿರಬೇಕು ಎನ್ನುವ ಮಾತು ಈ ದಿನಗಳಲ್ಲಿ ಸಿಂಗಪುರಕ್ಕೆ ಅಕ್ಷರಶಃ ಅನ್ವಯವಾಗುತ್ತದೆ. ತನ್ನದಲ್ಲದ ತಪ್ಪಿಗೆ ಅದು ಈಗ ಬೆಲೆ ಕಟ್ಟುತ್ತಾ ಇದೆ."

ಪಕ್ಕದ ಇಂಡೋನೇಷಿಯಾ ದೇಶದ ಸುಮಾತ್ರ ದ್ವೀಪಗಳಲ್ಲಿ ತಾಳೆ ಮರಗಳ ತೋಟಗಳು ಬಹಳ ಇದೆ. ನಮ್ಮಲ್ಲಿ ತೆಂಗು ಬೆಳೆದಂತೆ ಅಲ್ಲಿ ಹೆಕ್ಟೇರುಗಟ್ಟಲೇ ತಾಳೆ ಮರಗಳನ್ನು ಬೆಳೆಯಲಾಗುತ್ತದೆ. ಇದರ ಜೊತೆಗೆ ಅಕೇಶಿಯಾ ಕೂಡಾ ಇಂಡೋನೇಷಿಯಾದಲ್ಲಿ ಪ್ರಮುಖವಾಗಿ ಬೆಳೆಯಲಾಗುತ್ತದೆ.

ಇದೆಲ್ಲವೂ ನೈಸರ್ಗಿಕವಾಗಿ ಬೆಳೆದರೂ ವಾಣಿಜ್ಯ ಉದ್ದೇಶದಿಂದ ಕಾಲಕಾಲಕ್ಕೆ ಇದರ ಆರೈಕೆ ಜೊತೆಗೆ ಕಟಾವು ಕಾರ್ಯ ಕೂಡಾ ಇಂಡೋನೇಷಿಯಾ ಜನರ ಪಾಲಿಗೆ ಮಾಮೂಲಿ. ತೆಂಗಿನ ಮರಗಳಂತೆ ತಾಳೆ ಮರಗಳು ಕೂಡಾ ಫಸಲು ಕೊಡುವುದನ್ನು ನಿಲ್ಲಿಸುತ್ತದೆ.. ಮುಂದೇನಾಗುತ್ತದೆ ಚಿತ್ರ ಸರಣಿಯಲ್ಲಿ ನೋಡಿ...

ಸಿಂಗಪುರದಲ್ಲಿ ಹೊಗೆ

ಸಿಂಗಪುರದಲ್ಲಿ ಹೊಗೆ

ತಾಳೆ ಮರಗಳು ಫಸಲು ಕೊಡುವುದನ್ನು ನಿಲ್ಲಿಸಿದಾಗ ಅದನ್ನು ಬೆಂಕಿ ಹಾಕಿ ಕಾಡ್ಗಿಚ್ಚಿನಂತೆ ಹಬ್ಬಿಸಲಾಗುತ್ತದೆ. ಸಾವಿರಾರು ಎಕರೆ ಅರಣ್ಯ ಇದರಿಂದ ನಾಶವಾಗುತ್ತದೆ.

ಹೊಗೆ ದಟ್ಟವಾಗಿ ಸಿಂಗಪುರ ಹಾಗೂ ಮಲೇಶಿಯಾಗೆ ಹಬ್ಬುತ್ತದೆ. ಇಂಗಾಲ ತುಂಬಿದ ಈ ಹೊಗೆ ಸೇವನೆ ಅತ್ಯಂತ ಅಪಾಯಕಾರಿ. ಮಾಲಿನ್ಯ ಸೂಚ್ಯಂಕ 400 ಎಂದು ತೋರಿಸುತ್ತಿರುವುದು ಆತಂಕಕಾರಿ.ಚಿತ್ರದಲ್ಲಿ : ನಾಸಾ ಬಿಡುಗಡೆ ಮಾಡಿರುವ ಹೊಗೆ ಆವರಿಸಿರುವ ಚಿತ್ರ
 ಅರಣ್ಯ ನಾಶಕ್ಕೆ ಕಾರಣ

ಅರಣ್ಯ ನಾಶಕ್ಕೆ ಕಾರಣ

ಮರಮಟ್ಟು ಹಾಗೂ ತಾಳೆ ಎಣ್ಣೆಗೆ ಜಾಗತಿಕ ಬೇಡಿಕೆ ಹುಟ್ಟಿ ಕೊಂಡಂತೆ ಅಕೇಶಿಯಾ ಮರಗಳು ಹಾಗೂ ಕಾಗದ ಬೇಡಿಕೆ ಅಮೆರಿಕದ ಕಂಪನಿಗಳಿಂದ ಹೆಚ್ಚಾಗಿದೆ. ಸ್ಟಪ್ಲಸ್, ಡಿಸ್ನಿ ಸೇರಿದಂತೆ ಅನೇಕ ಯುಎಸ್ ಕಾರ್ಪೋರೆಟ್ ಸಂಸ್ಥೆಗಳಿಗೆ ಕಾಗದ ಪೂರೈಕೆ ಇಂಡೋನೇಶಿಯಾದಿಂದ ಆಗುತ್ತಿದೆ. ಅರಣ್ಯ ನಾಶಕ್ಕೆ ಇದು ಮುಖ್ಯ ಕಾರಣ

ಅರಣ್ಯ ಭೂಮಿ ನಾಶ

ಅರಣ್ಯ ಭೂಮಿ ನಾಶ

ಸುಮಾರು 4 ಮಿಲಿಯನ್ ಮಂದಿಗೆ ತಾಳೆ ಎಣ್ಣೆ ಕಾರ್ಖಾನೆಗಳು ತಾಳೆ ಮರದ ತೋಟಗಳು ಉದ್ಯೋಗ ಆಸರೆ ನೀಡುತ್ತಿವೆ. ಆದರೆ, ಸುಮಾರು 5 ವರ್ಷಗಳಲ್ಲಿ 10 ಮಿಲಿಯನ್ ಹೆಕ್ಟೇರ್ ಗಳಷ್ಟು ಅರಣ್ಯ ಭೂಮಿ ನಾಶವಾಗುತ್ತಿದೆ. ಜೊತೆಗೆ ಅಕ್ಕ ಪಕ್ಕದ ದೇಶಗಳಿಗೂ ವಿಷಕಾರಿ ಅನಿಲ ಹಬ್ಬುತ್ತಿದೆ. ಶೇ 80 ರಷ್ಟು ಟಿಂಬರ್ ವ್ಯವಹಾರ ಅಕ್ರಮವಾಗಿದೆ.

ಚಿತ್ರದಲ್ಲಿ : ಸಿಂಗಪುರದ ಪರಿಸ್ಥಿತಿಗೆ ಇಂಡೋನೇಷಿಯಾ ಸಚಿವರ ಉದಾಸೀನ ಉತ್ತರ
ಇದು ಪರರಿಗೂ ವಿನಾಶ

ಇದು ಪರರಿಗೂ ವಿನಾಶ

ಇಂಡೋನೇಶಿಯಾದಲ್ಲಿ ಸಾಮೂಹಿಕ ಮರಗಳ ಮಾರಣ ಹೋಮದಿಂದಾಗಿ ಸುಮಾತ್ರದ ಹುಲಿಗಳು, ಒರಾಂಗಟೋನ್ ನಶಿಸಿವೆ. ಇನ್ನಷ್ಟು ಜೀವ ಜಂತುಗಳು ವಿನಾಶದ ಅಂಚಿನಲ್ಲಿದೆ. ವಾಣಿಜ್ಯ ಉದ್ದೇಶ ಮಾತ್ರ ಈಡೇರುತ್ತಿದ್ದು, ಬಹುರಾಷ್ಟ್ರೀಯ ಕಂಪನಿಗಳ ಹೂಡಿಕೆ ಇಲ್ಲಿ ಆಟವಾಡಿಸುತ್ತಿದೆ.
ಚಿತ್ರಕೃಪೆ: @nycjim Jim Roberts

ಸಿಂಗಪುರದಲ್ಲಿ ಅಲರ್ಟ್

ಸಿಂಗಪುರದಲ್ಲಿ ಅಲರ್ಟ್

ಸಿಂಗಪುರದ ಮೌಂಟ್ ಎಲಿಜಬೆತ್ ಆಸ್ಪತ್ರೆ ಸೇರಿದಂತೆ ಹಲವು ಕಡೆ ಹೈ ಅಲರ್ಟ್ ಘೋಷಿಸಲಾಗಿದೆ.

ಪ್ರವಾಸಿಗರಿಗೆ ಸಲಹೆ

ಪ್ರವಾಸಿಗರಿಗೆ ಸಲಹೆ

ಸಿಂಗಪುರದ ಆಗಸದಲ್ಲಿ ಒಳ್ಳೆ ಮೋಡ ಕಾಣಿಸಿಕೊಳ್ಳುವವರೆಗೂ ಪರಿಸರ ಮಾಲಿನ್ಯ ಸೂಚ್ಯಂಕ 250ಕ್ಕಿಂತ ಕೆಳಗಿಳಿಯುವವರೆಗೂ ದಯವಿಟ್ಟು ಯಾರು ಸಿಂಗಪುರ ಪ್ರವಾಸ ಕೈಗೊಳ್ಳುವ ಸಾಹಸ ಮಾಡಬೇಡಿ. ಇಲ್ಲಿ ಮಾಸ್ಕ್ ಸಿಗದೇ ನಾವೇ ಒದ್ದಾಡುತ್ತಿದ್ದೇವೆ. ವರ್ಕ್ ಫ್ರಂ ಹೋಮ್ ಸೌಲಭ್ಯ ಬಳಕೆ ಇದ್ದರೂ ಬಂಧನದಲ್ಲಿ ಕೆಲಸ ಮಾಡುವಂತಾಗಿದೆ ಎಂದು ಗಿರೀಶ್ ಅವರು ಬರೆದು ಕಳಿಸಿದ್ದಾರೆ.

 ಸಿಂಗಪುರದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯ..

ಸಿಂಗಪುರದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯ..

ಸಿಂಗಪುರದಲ್ಲಿ ಶುಕ್ರವಾರ ಕಂಡು ಬಂದ ದೃಶ್ಯ..

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+