ತಿಂಗಳು ತುಂಬಿದ ಸಿದ್ದು ಸರಕಾರಕ್ಕೆ ಡಿವಿ ಸೊನ್ನೆ ಅಂಕ!

ಬೆಂಗಳೂರು, ಜೂ. 19: ಪ್ರಸವ ವೇದನೆ ಮತ್ತು ಬಾಲಗ್ರಹ ಪೀಡೆಯಿಂದ ಬಳಲುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರಕಾರ ಹೆಚ್ಚುದಿನ ಬಾಳುವುದು ಕಷ್ಟಸಾಧ್ಯ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ ಭವಿಷ್ಯ ನುಡಿದಿದ್ದಾರೆ.

ಸುಮಾರು 9 ವರ್ಷಗಳ ನಂತರ ಅಧಿಕಾರ ಚುಕ್ಕಾಣಿ ಹಿಡಿದ ಕಾಂಗ್ರೆಸ್ ಪಕ್ಷ ಒಂದು ತಿಂಗಳು ಕಳೆಯುವುದರೊಳಗೆ ಸುಸ್ತಾಗಿದೆ. ಸೂಪರ್ ಫಾಸ್ಟ್ ವೇಗದಲ್ಲಿ ಎಲ್ಲವನ್ನೂ ಮಾಡಿ ಮುಗಿಸುವ ಆತುರದಲ್ಲಿರುವ ಸಿದ್ದರಾಮಯ್ಯ ಅವರ ಸರ್ಕಾರ ಅವನತಿ ಹಾದಿ ಹಿಡಿದಿದೆ ಎಂದು ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಅವರು ರಿಪೋರ್ಟ್ ಕಾರ್ಡ್ ನೀಡಿದ್ದಾರೆ.

Countdown has begun for Siddu's exit: DVS

ಸಿದ್ದರಾಮಯ್ಯ ಸರ್ಕಾರದ ಬಗ್ಗೆ ಸದಾನಂದ ಗೌಡರು ಹೇಳಿದ ಮುಖ್ಯಾಂಶಗಳು:
* ಮೂಲ ಕಾಂಗ್ರೆಸ್ಸಿಗರು ಹಾಗೂ ವಲಸೆ ಕಾಂಗ್ರೆಸ್ಸಿಗರು ದೂರ ದೂರ ಇದ್ದಾರೆ. ಸಿದ್ದರಾಮಯ್ಯ ಜೊತೆಗೆ ಜನತಾ ಪರಿವಾರದ ಐದಾರು ಸ್ನೇಹಿತರು ಮಾತ್ರ ಇದ್ದಾರೆ.
* ಸರ್ಕಾರದಲ್ಲಿ ತಾಳ ಮೇಳ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಹೇಳಿಕೆ ನೀಡಿದರೆ ಸಚಿವರುಗಳು ಅದಕ್ಕೆ ವಿರುದ್ಧ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುತ್ತಿದ್ದಾರೆ.
* ಉದಾಹರಣೆಗೆ : ಬೆಂಗಳೂರಿಗೆ ಉಗ್ರರು ನುಸುಳಿದ್ದಾರೆಂದು ಸಿಎಂ ಸಿದ್ದರಾಮಯ್ಯ ಹೇಳುತ್ತಾರೆ. ಆದರೆ, ಗೃಹ ಸಚಿವ ಕೆ.ಜೆ.ಜಾರ್ಜ್ ಈ ಬಗ್ಗೆ ಯಾವುದೇ ಮಾಹಿತಿ ಬಂದಿಲ್ಲವೆಂದು ಹೇಳುತ್ತಿದ್ದು, ಜನತೆ ಯಾರನ್ನು ನಂಬಬೇಕು.
* ರಾಜ್ಯದಲ್ಲಿ ಹೊಸ ತಾಲೂಕುಗಳ ರಚನೆಗೆ ಸಂಬಂಧ ಕಂದಾಯ ಸಚಿವ ವಿ. ಶ್ರೀನಿವಾಸ ಪ್ರಸಾದ್ ಒಂದು ಹೇಳಿಕೆ ನೀಡಿದರೆ, ಮುಖ್ಯಮಂತ್ರಿಗಳು ಈ ವಿಷಯ ಗೊತ್ತೇ ಇಲ್ಲ ಪರಿಶೀಲನೆ ಮಾಡುತ್ತೇನೆ ಎನ್ನುತ್ತಾರೆ.
* ಡಿಕೆ ಶಿವಕುಮಾರ್, ರಮೇಶ್ ಕುಮಾರ್ ಹಾಗೂ ಮೋಟಮ್ಮ ಅವರು ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಬಗ್ಗೆ ಬಹಿರಂಗವಾಗೇ ಅಪಸ್ವರ ಹಾಡಿದ್ದಾರೆ.
* 7 ಬಾರಿ ಬಜೆಟ್ ಮಂಡನೆ ಮಾಡಿದ್ದೇನೆ ಎಂದು ಟವೆಲ್ ಕೊಡವಿಕೊಂಡು ಏಳುವ ಸಿದ್ದರಾಮಯ್ಯ ಅವರು ಮತ್ತೊಮ್ಮೆ ಬಜೆಟ್ ಮಂಡನೆಗೆ ಇಳಿದಿರುವುದು ಅನವಶ್ಯಕ.
* ಎಪಿಎಲ್ ಕಾರ್ಡುದಾರರಿಗೆ ಅಕ್ಕಿ ನೀಡುವುದನ್ನು ನಿಲ್ಲಿಸಿ, ಮಧ್ಯಮ ವರ್ಗದ ಜನರ ಹೊಟ್ಟೆ ಮೇಲೆ ಹೊಡೆದಿದ್ದಲ್ಲದೆ ಸಮರ್ಥನೆ ಮಾಡಿಕೊಂಡಿದ್ದಾರೆ.
* ರುಪಾಯಿ ಅಪಮೌಲ್ಯದಿಂದ ಇಂಧನ ಬೆಲೆ ಎರಿಕೆ ಮಾಡಿರುವ ಕೇಂದ್ರ ಸರ್ಕಾರದ ತಾಳಕ್ಕೆ ತಕ್ಕಂತೆ ಕುಣಿದು ಇಲ್ಲೂ ಕೂಡಾ ಇಂಧನ ಬೆಲೆ ಏರಿಕೆ, ಬಸ್ ದರ ಏರಿಕೆ ಮಾಡಿರುವುದು ಎಷ್ಟು ಸರಿ? ಸ್ಥಳೀಯ ತೆರಿಗೆ ಕಡಿಮೆ ಮಾಡಿಲ್ಲ ಏಕೆ?
* ಹೊಸ ಮದ್ಯದಂಗಡಿಗೆ ಲೈಸನ್ ನೀಡಲ್ಲ ಎಂದು ಒಮ್ಮೆ ಹೇಳುತ್ತಾರೆ ಮತ್ತೊಮ್ಮೆ ಲೈಸನ್ಸ್ ನೀಡುವ ಬಗ್ಗೆ ಮಾತನಾಡುತ್ತಾರೆ.
* ಬೆಂಗಳೂರಿನಲ್ಲಿ ಲೈವ್ ಬ್ಯಾಂಡ್, ಬಾರ್, ಇಸ್ಲೀಟ್ ಕ್ಲಬ್, ಜೂಜು ಅಡ್ಡಗಳಲ್ಲಿ ಯಾವುದರ ಮೇಲೆ ನಿಷೇಧ ಹೇರಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ.
* ಬೆಂಗಳೂರು ವಿವಿ ವಿಭಜನೆ ಬಗ್ಗೆ ಸರ್ಕಾರ ಹಾಗೂ ರಾಜ್ಯಪಾಲರ ಆಟದಿಂದಾಗಿ ವಿದ್ಯಾರ್ಥಿಗಳ ಭವಿಷ್ಯ ಮಂಕಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+