ಅತ್ತೆಗೆ ಅಶ್ಲೀಲ ಎಸ್ಎಂಎಸ್ ಕಳಿಸುತ್ತಿದ್ದ ಅಳಿಯ!

sms
ಹೈದರಾಬಾದ್, ಜೂ.19 : ತನ್ನ ಅತ್ತೆಗೆ ಅಶ್ಲೀಲ ಮತ್ತು ಬೆದರಿಕೆಯ ಎಸ್ಎಂಸ್ ಕಳಿಸುತ್ತಿದ್ದ ಬಿಟೆಕ್ ವಿದ್ಯಾರ್ಥಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಅತ್ತೆಗೆ ಸಂದೇಶ ಕಳುಹಿಸುತ್ತಿದ್ದ ಈ ಹಣ ನೀಡುವಂತೆ ಬೇಡಿಕೆ ಇಡುತ್ತಿದ್ದ ಎಂದು ತನಿಖೆಯಿಂದ ತಿಳಿದು ಬಂದಿದೆ.

ಬಿಟೆಕ್ ವಿದ್ಯಾರ್ಥಿ ಸಮೀರ್ ಅವರನ್ನು ಆಂಧ್ರ ಪ್ರದೇಶದ ಪೊಲೀಸರು ವಿಜಯವಾಡದ ನಿವಾಸದಲ್ಲಿ ಬಂಧಿಸಿದ್ದಾರೆ. ಆರೋಪಿಯಿಂದ ಮೊಬೈಲ್, ಸಿಮ್ ಕಾರ್ಡ್ ವಶಪಡಿಸಿಕೊಂಡಿದ್ದಾರೆ. ಸಮೀರ್ ನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಘಟನೆ ಏನು : ಹೈದರಾಬಾದ್ ನಲ್ಲಿನ 50 ವರ್ಷದ ಗೃಹಿಣಿಗೆ ಹಲವು ದಿನಗಳಿಂದ ಬೆದರಿಕೆ ಮತ್ತು ಅಶ್ಲೀಲ ಎಸ್ಎಂಎಸ್ ಗಳು ಹಲವಾರು ಹೊಸ ನಂಬರ್ ಗಳಿಂದ ಬರುತ್ತಿದ್ದವು. ಇದರ ಬಗ್ಗೆ ಆಕೆ, ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪೊಲೀಸರು ಅವರ ಅಳಿಯ ಸಮೀರ್ ನನ್ನು ಬಂಧಿಸಿದ್ದಾರೆ. ಬಂಧಿತ ಆರೋಪಿಯಿಂದ ಮೂರು ಮೊಬೈಲ್ ಮತ್ತು ಎಂಟು ಸಿಮ್ ಕಾರ್ಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಪ್ರೇಮ ಪುರಾಣ : ಬಿಟೆಕ್ ಓದುತ್ತಿದ್ದ ಸಮೀರ್ ಯುವತಿಯನ್ನು ಪ್ರೀತಿಸಿ ಮದುವೆಯಾದ. ಆದರೆ, ಆಕೆ ಬೇರೆ ಜಾತಿಗೆ ಸೇರಿದವಳಾಗಿದ್ದಳು. ಇದರಿಂದ ಕೋಪಗೊಂಡ ಯುವತಿ ಮನೆಯವರು ಸಮೀರ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದರು.

ಮದುವೆಯಾದ ಕೆಲವು ದಿನಗಳ ಬಳಿಕ ಯುವತಿ ಮನೆಯವರಿಗೆ ಕರೆ ಮಾಡಿ, ಸಮೀರ್ ವರದಕ್ಷಿಣೆ ನೀಡುವಂತೆ ಪೀಡಿಸಲು ಪ್ರಾರಂಭಿಸಿದ್ದಾನೆ. ಯುವತಿ ಕುಟುಂಬದವರು ನಿರಾಕರಿಸಿದಾಗ, ಅತ್ತೆಯ ಮೊಬೈಲ್ ನಂಬರ್ ಪಡೆದುಕೊಂಡ ಈತ ಎಸ್ಎಂಎಸ್ ಮಾಡಲು ಪ್ರಾರಂಭಿಸಿದ್ದಾನೆ.

ಹಣ ಕೇಳಿ, ಕುಟುಂಬದವರಿಗೆ ಅಶ್ಲೀಲ ಶಬ್ದಗಳಿಂದ ಬೈದು ಸಮೀರ್ ಬೇರೆ-ಬೇರೆ ನಂಬರ್ ಗಳಿಂದ ಸಂದೇಶ ಕಳುಹಿಸುತ್ತಿದ್ದ. ಸುಮಾರು ಆರು ತಿಂಗಳ ಕಾಲ, ಸಮೀರ್ ಮೊಬೈಲ್ ಕರೆ ಮತ್ತು ಸಂದೇಶಗಳ ತನಿಖೆ ನಡೆಸಿದ ಪೊಲೀಸರು ಕೊನೆಗೂ ಆತನನ್ನು ಬಂಧಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+