ರಷ್ಯಾ ಅಧ್ಯಕ್ಷರು ವಜ್ರದ ಉಂಗುರ ಕದ್ದಿದ್ದಾರಂತೆ!

ಈ ಆರೋಪವನ್ನು ತಳ್ಳಿ ಹಾಕಿರುವ ವ್ಲಾಡಿಮಿರ್ ಪುಟಿನ್ ಕಚೇರಿಯ ವಕ್ತಾರರು, ರಾಬರ್ಟ್ ಕ್ರಾಫ್ಟ್ ಅವರಿಗೆ ಶೀಘ್ರವೇ ಪುಟಿನ್ ಬೇರೊಂದು ಉಂಗುರ ಕಳುಹಿಸಿ ಕೊಡಲಿದ್ದಾರೆ ಎಂದು ಸ್ಪಷ್ಟನೆ ನೀಡಿ ವಿವಾದ ಬಗೆಹರಿಸಿದ್ದಾರೆ.
ಆರೋಪವೇನು : ರಾಬರ್ಟ್ ಕ್ರಾಫ್ಟ್ ಅವರು ಪುಟಿನ್ ಅವರ ಮೇಲೆ ಆರೋಪ ಮಾಡುತ್ತಾ, 2005ರಲ್ಲಿ ಅಮೆರಿಕದಲ್ಲಿ ನಡೆದ ಉದ್ಯಮಿಗಳ ಔತಣ ಕೂಟದಲ್ಲಿ ವ್ಲಾದಿಮಿರ್ ಪುಟಿನ್ ಭಾಗವಹಿಸಿದ್ದರು.
ಈ ವೇಳೆ ನಾನು ನ್ಯಾಷನಲ್ ಫುಟ್ಬಾಲ್ ಚಾಂಪಿಯನ್ ಶಿಪ್ ಗೆದ್ದಾಗ ನೀಡಿದ್ದ ವಜ್ರದ ಸೂಪರ್ ಬೌಲ್ ರಿಂಗ್ ಉಂಗುರವನ್ನು ಪುಟಿನ್ ಅವರಿಗೆ ತೋರಿಸಿದ್ದೆ. ಉಂಗುರವನ್ನು ನೋಡಿದ ಪುಟಿನ್ ತಕ್ಷಣ ಅದನ್ನು ಜೇಬಿಗಿಳಿಸಿಕೊಂಡು, ಅಲ್ಲಿಂದ ತೆರಳಿದರು ಎಂದು ಹೇಳಿದ್ದಾರೆ.
ಶ್ವೇತಭವನದ ಅಧಿಕಾರಿಗಳಿಗೆ ನಾನು ಈ ಕುರಿತು ಮಾಹಿತಿ ನೀಡಿದೆ. ಆದರೆ, ಅವರು ಇದು ರಾಜತಾಂತ್ರಿಕ ವಿಷಯ. ಉಂಗುರವನ್ನು ಉಡುಗೊರೆಯಾಗಿ ಕೊಟ್ಟೆ ಎಂದು ತಿಳಿದುಬಿಡು ಎಂದು ಸೂಚಿಸಿದ್ದರು ಎಂದು ಆರೋಪದಲ್ಲಿ ಹೇಳಿದ್ದಾರೆ.
ವರ್ಷಗಳ ಹಿಂದಿನ ಪ್ರಕರಣವನ್ನು ಕ್ರಾಫ್ಟ್ ಸಮಾರಂಭದವೊಂದರಲ್ಲಿ ಭಾನುವಾರ ರಾತ್ರಿ ಬಹಿರಂಗವಾಗಿ ಹೇಳಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೆ ಒಳಗಾಗಿರುವ ಪುಟಿನ್ ಅವರ ಕಾರ್ಯಾಲಯದ ಅಧಿಕಾರಿಗಳು, ಶೀಘ್ರವೇ ಪುಟಿನ್ ಬೇರೊಂದು ಉಂಗುರವನ್ನು ಕಳುಹಿಸಿ ಕೊಡಲಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD











Click it and Unblock the Notifications