ಚಲಿಸುವ ಬಸ್ಸಿನಲ್ಲಿ ಮತ್ತೊಂದು ರೇಪ್, ಯುವಕನ ಸೆರೆ

25 ವರ್ಷದ ಸುಶಾಂತ್ ಹೇಮಬ್ರಮ ಬಂಧಿತ ಆರೋಪಿ. ಇವನು ಎಂಥಾ ಪಾತಿಕಿಯೆಂದರೆ ಬಸ್ಸಿನಲ್ಲಿ ಸ್ಲೀಪರ್ ಕೋಚಿನಲ್ಲಿ ನಿದ್ರೆಯಲ್ಲಿದ್ದ ಮಹಿಳೆಯ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸ್ ಅಧಿಕಾರಿ ಸುಜಾತಾ ಜೇನಾ ತಿಳಿಸಿದ್ದಾರೆ.
ಸೋಮವಾರ ಬೆಳಗಿನ ವೇಳೆ ಈ ಘಟನೆ ನಡೆದಿದೆ. ಸದರಿ ಸ್ಲೀಪರ್ ಕೋಚ್ ಬಸ್ ಮಯೂರ್ ಭಂಜ್ ನಿಂದ ಕಟಕ್ ನಗರದತ್ತ ಹೊರಟಿತ್ತು. ಬಸ್ಸಿನಲ್ಲಿ ಸುಮಾರು 10-12 ಮಂದಿಯಿದ್ದರೂ ಆರೋಪಿ ಸುಶಾಂತ್ ಅವರನ್ನೆಲ್ಲಾ ಯಾಮಾರಿಸಿ, ಮಹಿಳೆ ಸಹಾಯಕ್ಕೂ ಕಿರುಚಿಕೊಳ್ಳಲು ಆಗದಂತೆ ಬಾಯಿಗೆ ಅಡ್ಡಗಟ್ಟಿ ರೇಪ್ ಮಾಡಿದ್ದಾನೆ.
ಅತ್ಯಾಚಾರ ನಡೆಸಿದ ನಂತರ ಘಟನೆಯ ಬಗ್ಗೆ ಯಾರಿಗಾದರೂ ದೂರು ನೀಡಿದರೆ ಸಾಯಿಸಿಬಿಡುವುದಾಗಿ ಪಾತಕಿ ಬೆದರಿಸಿದ್ದಾನೆ. ಆದರೆ ಕಟಕ್ ನಗರದಲ್ಲಿ ಬಸ್ ಇಳಿಯುವಾಗ ಮಹಿಳೆ ಅಳುತ್ತಿರುವುದನ್ನು ಕಂಡು ಸಹ ಪ್ರಯಾಣಿಕರು ವಿಚಾರಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಲಾಗಿದೆ.
ದೂರು ಸ್ವೀಕರಿಸಿದ ಪೊಲೀಸರು ಕಾರ್ಚಾರಣೆಗಿಳಿದು ಬಸ್ ಕ್ಲೀನರನನ್ನು ಬಂಧಿಸಿದ್ದಾರೆ. ಆರೋಪಿ ತಪ್ಪೊಪ್ಪಿಕೊಂಡಿದ್ದಾನೆ. ಬಾಧಿತ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸದರಿ ಮಹಿಳೆಯು ಒರಿಸ್ಸಾ ರಾಜಧಾನಿ ಭುವನೇಶ್ವರದಿಂದ 250 ಕಿಮೀ ದೂರದಲ್ಲಿರುವ ಮಯೂರ್ ಭಂಜ್ ನಿವಾಸಿ ಎಂದು ತಿಳಿದುಬಂದಿದೆ. [ಚಲಿಸುತ್ತಿದ್ದ ವಾಹನದಲ್ಲಿ ನಡೆದ 10 ಅತ್ಯಾಚಾರ]












Click it and Unblock the Notifications