ಸುಶಿಕ್ಷಿತ ರಾಜಧಾನಿಗಳೇ ಮಹಿಳೆಗೆ ಹೆಚ್ಚು ಅಸುರಕ್ಷಿತ!
ಬೆಂಗಳೂರು,
ಜೂನ್ 17: ಭಾರತದಲ್ಲಿ ಶಾಂತಿ-ಸೌಹಾರ್ಧತೆಗಳು ಮಾಯವಾಗಿವೆ. ನಮ್ಮ ದೇಶ ಶಾಂತಿರಹಿತ ದೇಶಗಳ ಪಟ್ಟಿಯಲ್ಲಿ 141 ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇದಕ್ಕೆ ತಕ್ಕಂತೆ ರಾಷ್ಟ್ರೀಯ ಕ್ರೈಂ ದಾಖಲೆ ಸಂಸ್ಥೆಯು ಕೋಲ್ಕೊತ್ತಾ ಸೇರಿದಂತೆ ಶಾಂತಿಪ್ರಿಯ ಬೆಂಗಳೂರೂ ಆಪಾಯಕಾರಿ ಎಂಬ ಆತಂಕಕಾರಿ ಅಂಧವನ್ನು ಬಹಿರಂಗಪಡಿಸಿತ್ತು. id="toptextpromo"> id='are-slot-1' class='oiad oi-axt oiadv'>ಇನ್ನು
ಮಹಿಳೆಯರ ದೃಷ್ಟಿಯಿಂದ ಹೇಳುವುದಾದರೆ ದೇಶದಲ್ಲಿ ಮಹಿಳೆಯರಿಗೆ ಹೆಚ್ಚು ಅಪಾಯಕಾರಿಯಾಗಿರುವ ನಗರಗಳೂ ಇವೆ. ಈ ನಗರಗಳಲ್ಲಿ ಮಹಿಳೆಯ ವಿರುದ್ಧ ಹಿಂಸಾಚಾರಗಳು ತಾಂಡವವಾಡುತ್ತಿವೆ. ಹಿಂದೆಂದಿಗಿಂತಲೂ ಗರಿಷ್ಠ ಪ್ರಕರಣಗಳು ಘಟಿಸುತ್ತಿವೆ. ಅದೂ ಹೆಚ್ಚು ಸುಶಿಕ್ಷಿತವೆನ್ನಬಹುದಾದ ರಾಜಧಾನಿ ನಗರಗಳಲ್ಲೇ ಮಹಿಳೆಯರಿಗೆ ಅಸುರಕ್ಷಿತವಾಗಿರುವುದು ಶೋಚನೀಯ. id='are-slot-2' class='oiad oi-axt oiadv'>ಹಾಗಾದರೆ
ಮಹಿಳೆಯರ ವಿರುದ್ಧ ಹೆಚ್ಚು ಹಿಂಸಾಚಾರಗಳು ನಡೆಯುತ್ತಿರುವ 10ಕ್ಕೂ ಹೆಚ್ಚು ನಗರಗಳು ಯಾವುವು ಅಂದರೆ... ಕಳೆದ ವರ್ಷದ (2012, ವಿಕ್ರಮ ನಾಮ ಸಂವತ್ಸರ ಕುಖ್ಯಾತಿಯ ವಿಕ್ರಮ ಸ್ಥಾಪಿತವಾಗಿದೆ) ಅಂಕಿ ಅಂಶಗಳನ್ನು ನೋಡಿದಾಗ ಅಪರಾಧ ಪ್ರಕರಣ ಸಂಖ್ಯೆಗಳನ್ನು ಆಧರಿಸಿ, ಶ್ರೇಣೀಕರಿಸಿದಾಗ
ದೆಹಲಿಗೆ ಅಗ್ರ ಸ್ಥಾನ
ರಾಜಧಾನಿ ದೆಹಲಿಗೆ ಅಗ್ರ ಸ್ಥಾನ ದಕ್ಕುತ್ತದೆ. ಕುಖ್ಯಾತ/ ಅಮಾನುಷ ನಿರ್ಭಯಾ ಪ್ರಕರಣ ಸೇರಿದಂತೆ 5,194 ಮಹಿಳಾ ಹಿಂಸಾಚಾರ ಪ್ರಕರಣಗಳು ರಾಜಧಾನಿ ದಿಲ್ಲಿಯಲ್ಲಿ ವರದಿಯಾಗಿವೆ.

ನಮ್ಮ ರಾಜಧಾನಿಯೂ ಮಹಿಳೆಯರಿಗೆ ಕಂಟಕ
ಬೆಂಗಳೂರು ಸಹ ಮಹಿಳೆಯರ ಸುರಕ್ಷತೆಗೆ ಕಂಟಕವಾಗಿದೆ. ಮಹಿಳೆಯರ ವಿರುದ್ಧ 2,263 ಅಪರಾಧ ಪ್ರಕರಣಗಳು ನಡೆದಿವೆ.

ಅಪರಾಧ ಪಟ್ಟಿಯಲ್ಲಿ ಕೋಲ್ಕೊತ್ತಾಗೆ 3ನೇ ಸ್ಥಾನ
ಪ್ರಮೀಳಾ ರಾಜ್ಯವಾದಕೋಲ್ಕೊತ್ತಾದಲ್ಲಿ ಮಹಿಳೆಯರ ವಿರುದ್ಧ 2,073 ಕ್ರೈಂ ಪ್ರಕರಣಗಳು ದಾಖಲಾಗಿವೆ.

ಆಂಧ್ರ ರಾಜಧಾನಿಯೂ ಸುರಕ್ಷಿತವಲ್ಲ
ಆಂಧ್ರ ರಾಜಧಾನಿ ಹೈದರಾಬಾದ್ ಸಹ ಅಸುರಕ್ಷಿತವೆನಿಸಿದೆ. ಇಲ್ಲಿ 1,899 ಪ್ರಕರಣಗಳು ದಾಖಲಾಗಿವೆ.

ಅಹಮದಾಬಾದಿಗೆ 5ನೆಯ ಸ್ಥಾನ
ಅಹಮದಾಬಾದ್ ಸಹ ಮಹಿಳೆಯರಿಗೆ ಕಂಟಕಪ್ರಾಯವಾಗಿದೆ. ಈ ಔದ್ಯಮಿಕ ನಗರಿಯಲ್ಲಿ ಮಹಿಳೆಯರ ವಿರುದ್ಧ ನಡೆದ ಅಪರಾಧ ಪ್ರಕರಣಗಳ ಸಂಖ್ಯೆ 1,805 ಆಗಿದೆ.

ಈ ನಗರಗಳೂ ಅಪಾಯಕಾರಿಯೇ
ನಂತರದ ಸ್ಥಾನಗಳಲ್ಲಿ ಮುಂಬೈ (1781 ಪ್ರಕರಣಗಳು), ಪಿಂಕಿ ಸಿಟಿ ಜೈಪುರ (1427 ಪ್ರಕರಣಗಳು), ಇಂದೋರ್ (922 ಪ್ರಕರಣಗಳು), ಚೆನ್ನೈ (832 ಪ್ರಕರಣಗಳು), ನವಾಬರ ಪಟ್ಟಣ ಲಖ್ನೋ (815 ಪ್ರಕರಣಗಳು), ಅತ್ಯಂತ ಹಳೆಯ ನಗರವಾದ ಪಾಟ್ನಾ (737 ಪ್ರಕರಣಗಳು), ಭೋಪಾಲ್ (641 ಪ್ರಕರಣಗಳು), ಪೂನಾ (636 ಪ್ರಕರಣಗಳು), ಕೊಲ್ಲಂ (617) ಸೇರಿದಂತೆ ಇನ್ನೂ ಹಲವಾರು ಪಟ್ಟಣ ಪ್ರದೇಶಗಳು ಮಹಿಳೆಯರಿಗೆ ಆತಂಕವನ್ನುಂಟುಮಾಡುವ ಪ್ರದೇಶಗಳಾಗಿವೆ.












Click it and Unblock the Notifications