ರಾಸಲೀಲೆ ವಿಡಿಯೋ: ಅತಿಥಿಗೃಹ ನೌಕರನ ಬಂಧನ

jaipur-guesthouse-employee-secretly-films-couples-held
ಜೈಪುರ, ಜೂನ್ 15: ಆ ಯುವಕ ವೃತ್ತಿಯಿಂದ ಅತಿಥಿಗೃಹದ ಮೇಲ್ವಿಚಾರಕ. ಆದರೆ ಅವನು ಕೆಟ್ಟಚಾಳಿ ಅಂಟಿಸಿಕೊಂಡಿದ್ದ. ತನ್ನ ಗೆಸ್ಟ್ ಹೌಸಿಗೆ ಬರುವ ದಂಪತಿಗಳು ಲೈಂಗಿಕ ಚಟುವಟಿಕೆಯಲ್ಲಿ ತೊಡಗಿದರೆ ಅವರ ಅರಿವೆ ಬಾರದಂತೆ ಅಷ್ಟೂ ಕ್ರಿಯೆಯನ್ನು ವಿಡಿಯೋ ಮಾಡುತ್ತಿದ್ದ. ಹಾಗಾಗಿ ಪೊಲೀಸರು ಅವನನ್ನು ಈಗ ಬಂಧಿಸಿದ್ದಾರೆ.

ಇಲ್ಲಿನ ಜವಾಹರ್ ಸರ್ಕಲಿನಲ್ಲಿರುವ ರಾಯಲ್ ಸಿಟಿ ಗೆಸ್ಟ್ ಹೌಸ್ ಖ್ಯಾತ ಅತಿಥಿಗೃಹವೊಂದರ ಮೇಲ್ವಿಚಾರಕ ದಿಲೀಪ್ ಚೌಧರಿ (23) ಬಂಧಿತ ಆರೋಪಿ. ಈ ಅತಿಥಿಗೃಹಕ್ಕೆ ಹೆಚ್ಚಾಗಿ ನವದಂಪತಿಗಳು ಹನಿಮೂನಿಗೆಂದು ಇಲ್ಲಿಗೆ ಬರುತ್ತಿದ್ದರು. ಆದರೆ ಈ ವಿಕೃತ ಆಸಾಮಿ ಟಿವಿ ಸೆಟ್ ಟಾಪ್ ಬಾಕ್ಸ್ ಒಳಗಡೆ ಸಪೈ ಕ್ಯಾಮರಾವೊಂದನ್ನು ಸಿಕ್ಕಿಸಿ, ಸಾದ್ಯಂತವಾಗಿ ನೂತನ ದಂಪತಿಗಳ ಅಷ್ಟೂ ಲೈಂಗಿಕ ಕ್ರಿಯೆಯನ್ನು ಚಿತ್ರೀಕರಿಸುತ್ತಿದ್ದ.

ಸುಮಾರು 256 ದಂಪತಿಗಳ ರಾಸಲೀಲೆಯನ್ನು ಈತ ಚಿತ್ರೀಕರಣ ಮಾಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಟಿವಿಯಲ್ಲಿ ಬರುವ ಜಾಹೀರಾತೊಂದನ್ನು ವೀಕ್ಷಿಸಿ, ಅದರಂತೆ ಸ್ಪೈ ಕ್ಯಾಮರಾ ಖರೀದಿ, ದಿಲೀಪ್ ಚೌಧರಿ ಈ ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ.

ದಿಲೀಪ್ ಚೌಧರಿ ಹೀಗೆ ಚಿತ್ರೀಕರಿಸಿದ್ದ ವಿಡಿಯೋಗಳು ಮೆಮರಿ ಕಾರ್ಡುಗಳನಲ್ಲಿ ದಾಖಲಾಗಿತ್ತು. ಅದಷ್ಟನ್ನೂ ಮುಂದೆ ಅಂತರ್ಜಾಲದಲ್ಲಿ ಹರಿಯಬಿಡಲು ಸಿದ್ಧತೆ ನಡೆಸಿದ್ದ. ಈ ವಿಡಿಯೋಗಳನ್ನು ಮುಂದಿಟ್ಟುಕೊಂಡು ದಿಲೀಪ್ ಚೌಧರಿ ಗೆಸ್ಟ್ ಹೌಸಿನ ಮಾಲೀಕ ವಿಮಲ್ ಜೈನ್ ಅವರನ್ನು ಬೆದರಿಸುತ್ತಿದ್ದ/ ಬ್ಲ್ಯಾಕ್ ಮೇಲ್ ಮಾಡುತ್ತಿದ್ದ ಎಂದು ಪೊಲೀಸರು ಹೇಳಿದ್ದಾರೆ.

ಮಾಲೀಕ ವಿಮಲ್ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬಯಲಿಗೆ ಬಂದಿದೆ. ಪಾಪಿ ದಿಲೀಪ್ ಕುಮಾರ 15 ಕೊಠಡಿಗಳ ರಾಯಲ್ ಸಿಟಿ ಗೆಸ್ಟ್ ಹೌಸಿನಲ್ಲಿ ಒಟ್ಟು 8 ಕೊಠಡಿಗಳಲ್ಲಿ ಸ್ಪೈ ಕ್ಯಾಮರಾ ಸ್ಥಾಪಿಸಿ, ತನ್ನ ಕೈಚಳಕ ತೋರಿದ್ದ.

ಗಮನಾರ್ಹವೆಂದರೆ ಗೆಸ್ಟ್ ಹೌಸಿನ ಇನ್ನೂ ಇಬ್ಬರಿಗೆ ದಿಲೀಪ್ ಚೌಧರಿಯ ಕುಕೃತ್ಯದ ಬಗ್ಗೆ ಅರಿವಿತ್ತು. ಉತ್ತರ ಪ್ರದೇಶ ಬಸ್ತಿ ಮೂಲದ ದಿಲೀಪ್ 8 ತಿಂಗಳ ಹಿಂದೆ ಇಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+