ಉಚಿತ ಎಂಬಿಬಿಎಸ್ ಸೀಟು ಇಲ್ಲಿ ಮಾತ್ರ ಲಭ್ಯ

ಹೌದು, ಪ್ರತಿಭಾವಂತ ವಿದ್ಯಾರ್ಥಿಗಳು ಉಚಿತವಾಗಿ ಎಂಬಿಬಿಎಸ್ ಸೀಟು ಪಡೆಯಲು ಇಲ್ಲಿ ಮಾತ್ರ ಸಾಧ್ಯ. ಬಿಎಲ್ ಡಿಇ ವಿಶ್ವವಿದ್ಯಾಲಯದ ನಿಯಮಗಳಿಗೆ ವಿದ್ಯಾರ್ಥಿ ವಿದ್ಯಾರ್ಹತೆ ಹೊಂದಾಣಿಕೆಯಾದರೆ ಈ ಸೌಲಭ್ಯ ಲಭ್ಯವಾಗಲಿದೆ.
ಅರ್ಹತೆ ಏನಿರಬೇಕು: ವಿದ್ಯಾರ್ಥಿ ಬಿಜಾಪುರ ಜಿಲ್ಲೆಯವರಾಗಿರಬೇಕು.
* ಬಿಜಾಪುರದಲ್ಲಿ ಕನಿಷ್ಠ 7 ವರ್ಷ ವ್ಯಾಸಂಗ ಮಾಡಿರಬೇಕು.
* ಕರ್ನಾಟಕ ಸಿಇಟಿ 2013ರಲ್ಲಿ ಮೆಡಿಕಲ್ ಶ್ರೇಯಾಂಕ 1500ರೊಳಗೆ ಬಂದಿರಬೇಕು.
* BLDEU-UGET-2013ರ ಪರೀಕ್ಷೆಯಲ್ಲಿ ಪಾಸಾಗಬೇಕು
ಈ ನಿಯಮಗಳಿಗೆ ಹೊಂದುವ ವಿದ್ಯಾರ್ಥಿಗಳಿಗೆ ಬೋಧನ ಶುಲ್ಕ, ಇತರೆ ಶುಲ್ಕ ವಿನಾಯಿತಿ ಸಿಗಲಿದೆ. ಹಾಸ್ಟೆಲ್ ಫೀ ನಲ್ಲಿ ಶೇ 50ರಷ್ಟು ರಿಯಾಯಿತಿ ಸಿಗಲಿದೆ. ಈ ಸೌಲಭ್ಯದ ಮೂಲಕ ಪ್ರವೇಶ ಪಡೆದ ಅಭ್ಯರ್ಥಿಗಳು ಮೆಡಿಕಲ್ ಕೋರ್ಸನ್ನು ನಾಲ್ಕೂವರೆ ವರ್ಷದಲ್ಲಿ ಪೂರೈಸುತ್ತಾರೆ ಎಂದು ಸಂಸ್ಥೆ ನಂಬಿರುತ್ತದೆ ಎಂದು ಬಿಎಲ್ ಡಿಇ ವಿವಿ ಪ್ರಕಟಿಸಿದೆ.
ಅರ್ಜಿ ಸಲ್ಲಿಕೆ ಹೇಗೆ?:
* ಉಚಿತ ಎಂಬಿಬಿಎಸ್ ಸೀಟು ಸೌಲಭ್ಯ ಪಡೆಯಲು ಇಚ್ಛಿಸುವ ಆಸಕ್ತ ಅಭ್ಯರ್ಥಿಗಳು ಪ್ರತ್ತ್ಯೇಕವಾಗಿ ಅರ್ಜಿ ಸಲ್ಲಿಸಬೇಕು.
* ಅರ್ಜಿ ನಮೂನೆ ಬಿಎಲ್ ಡಿಇ ವಿಶ್ವವಿದ್ಯಾಲಯದ ಅಧಿಕೃತ ವೆಬ್ ಸೈಟ್ ನಲ್ಲಿ ಅಥವಾ ಶ್ರೀಮತಿ ಬಂಗಾರಮ್ಮ ಸಜ್ಜನ್ ಕ್ಯಾಂಪಸ್, ಬಿಜಾಪುರದಲ್ಲಿರುವ ಕಚೇರಿ ಸಂಪರ್ಕಿಸಬಹುದು.
* ಎಂಬಿಬಿಎಸ್ ಉಚಿತ ಸೀಟು ಪಡೆಯಲು ಆನ್ ಲೈನ್ ಅರ್ಜಿ ಇಲ್ಲಿಂದ ಡೌನ್ ಲೋಡ್ ಮಾಡಿಕೊಳ್ಳಿ
* ತುಂಬಿದ ಅರ್ಜಿ ಸಲ್ಲಿಸಲು ಕೊನೆ ದಿನಾಂಕ ಜುಲೈ 20, 2013
* ಸೀಟು ಕೌನ್ಸಲಿಂಗ್ : ಜುಲೈ 25, 2013, ಬೆಳಗ್ಗೆ 10 ಗಂಟೆ
ಸಂಪರ್ಕ ವಿಳಾಸ:
ಬಿಎಲ್ ಡಿಇ ವಿಶ್ವವಿದ್ಯಾಲಯ
ಶ್ರೀಮತಿ ಬಂಗಾರಮ್ಮ ಸಜ್ಜನ್ ಕ್ಯಾಂಪಸ್
ಶೋಲಾಪುರ ರಸ್ತೆ
ಬಿಜಾಪುರ- 586103
ದೂರವಾಣಿ: 081352-262770
ಇ ಮೇಲ್: [email protected]
ವೆಬ್ ಸೈಟ್: http://www.bldeuniversity.org
ಇದನ್ನೂ ಓದಿ: ಹುಬ್ಬಳ್ಳಿಯ ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿ (ಕೆಎಲ್ಇ)ಗೆ ಸೇರಿದ ಎರಡು ಕಾಲೇಜುಗಳಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷ 10 ಸೀಟುಗಳನ್ನು ಮೀಸಲಿಡಲಾಗುತ್ತದೆ. ಹಾಗೂ ಕೇವಲ 10 ರು ಪಡೆದು ಅವರಿಗೆ ವರ್ಷವಿಡಿ ಚಿಂತೆ ಇಲ್ಲದೆ ಓದುವ ಅವಕಾಶವನ್ನು ಕಲ್ಪಿಸುತ್ತದೆ. ಹೆಚ್ಚಿನ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications