10 ರು ನೀಡಿ ಕಾಲೇಜು ಸೀಟು ಪಡೆಯಿರಿ!

ಇದರಲ್ಲಿ ಪೋಷಕರ ತಪ್ಪೇನಿಲ್ಲ, ಆರ್ಥಿಕ ಪರಿಸ್ಥಿತಿ ಸುಧಾರಣೆಗೊಳ್ಳದೆ ಮಕ್ಕಳನ್ನು ಓದಿಸುವುದಾದರೂ ಹೇಗೆ? ಇಂಥ ಎಷ್ಟೋ ಸಂಕಷ್ಟ ಕುಟುಂಬಗಳಿಗೆ ಹುಬ್ಬಳ್ಳಿಯ ಕಾಲೇಜೊಂದು ಆಸರೆಯಾಗಿದೆ.
ಹುಬ್ಬಳ್ಳಿಯ ಕರ್ನಾಟಕ ಲಿಂಗಾಯತ ಎಜುಕೇಷನ್ ಸೊಸೈಟಿ (ಕೆಎಲ್ಇ)ಗೆ ಸೇರಿದ ಎರಡು ಕಾಲೇಜುಗಳಲ್ಲಿ ಆರ್ಥಿಕವಾಗಿ ದುರ್ಬಲರಾಗಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗಾಗಿ ಪ್ರತಿ ವರ್ಷ 10 ಸೀಟುಗಳನ್ನು ಮೀಸಲಿಡಲಾಗುತ್ತದೆ. ಹಾಗೂ ಕೇವಲ 10 ರು ಪಡೆದು ಅವರಿಗೆ ವರ್ಷವಿಡಿ ಚಿಂತೆ ಇಲ್ಲದೆ ಓದುವ ಅವಕಾಶವನ್ನು ಕಲ್ಪಿಸುತ್ತದೆ.
ಹುಬ್ಬಳ್ಳಿಯ ಪಿಸಿ ಜಬಿನ್ ಪಿಯು ವಿಜ್ಞಾನ ಕಾಳೇಜು ಹಾಗೂ ಎಚ್ ಎಸ್ ಕೋತಾಂಬ್ರಿ ಪಿಯು ವಿಜ್ಞಾನ ಕಾಲೇಜುಗಳು ಈ ಸೌಲಭ್ಯವನ್ನು ಒದಗಿಸುತ್ತಿವೆ. ಪದವಿ ಪೂರ್ವ ಶಿಕ್ಷಣ ಮಂಡಳಿ ಬೋಧನ ಶುಲ್ಕವಾಗಿ 3000 ರು ವಿಧಿಸುತ್ತಿದೆ. ಇದನ್ನು ಸ್ಥಳೀಯ ಕಾಲೇಜು ಆಡಳಿತ ಮಂಡಳಿಗಳು ಭರಿಸುತ್ತಿದ್ದು, ಪ್ರತಿಭಾವಂತರಿಗೆ ನೆರವಾಗುತ್ತಿದ್ದಾರೆ.
ಈ ರೀತಿ ಪ್ರತಿಭಾವಂತರಿಗೆ ಅವಕಾಶ ನೀಡುವ ಶುಲ್ಕ ಸಬ್ಸಿಡಿ ಯೋಜನೆ ಆರಂಭವಾಗಿ ಮೂರು ವರ್ಷಗಳಾಗಿದೆ. ಸುಮಾರು 40 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ನಾವು ಸದ್ಯಕ್ಕೆ 10 ಸೀಟುಗಳನ್ನು ಈ ಯೋಜನೆಯಡಿಯಲ್ಲಿ ಸೇರಿಸಿದೇವೆ.
ಆದರೆ, ಇನ್ನಷ್ಟು ಸೀಟು ಸೇರಿಸುವಂತೆ ಬೇಡಿಕೆ ಹೆಚ್ಚಾಗಿದೆ. ಪರಿಸ್ಥಿತಿ ನೋಡಿಕೊಂಡು ಮ್ಯಾನೇಜ್ಮೆಂಟ್ ಅನುಮತಿ ದೊರೆದರೆ ಹೆಚ್ಚಿನ ಪ್ರಮಾಣದಲ್ಲಿ ವಿದ್ಯಾರ್ಥಿಗಳಿಗೆ ನೆರವಾಗಲು ನಾವು ಸಿದ್ಧ ಎಂದು ಪಿಸಿ ಜಬೀನ್ ಪಿಯು ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಎಸ್ ಹಿರೇಮಠ ಡಿಎನ್ ಎ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಆರ್ಥಿಕವಾಗಿ ಹಿಂದುಳಿದು, ಸಾಮಾನ್ಯ ವರ್ಗಕ್ಕೆ ಸೇರಿದ್ ಎಷ್ಟೋ ಪ್ರತಿಭಾವಂತ ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ನಂತರ ಮುಂದೆ ಓದಲು ಆಗದೆ ಕಷ್ಟಪಡುವುದನ್ನು ಕಾಣುತ್ತೇವೆ. 3000 ರು ಫೀ ಕಟ್ಟಲು ಆಗದೆ ಕಾಲೇಜು ಮೆಟ್ಟಿಲೇರಲು ಕಷ್ಟಪಡುವ ವಿದ್ಯಾರ್ಥಿಗಳಿಗೆ ಈ ಯೋಜನೆ ಆಸರೆಯಾಗಿದೆ.
ಕೆಎಲ್ ಇ ವಿದ್ಯಾಸಂಸ್ಥೆ ಅಡಿಯಲ್ಲಿರುವ ಇನ್ನೂ ಕೆಲವು ಕಾಲೇಜುಗಳಲ್ಲಿ ಈ ರೀತಿ ಶುಲ್ಕ ವಿನಾಯಿತಿ ಸೌಲಭ್ಯ ಲಭ್ಯವಿದೆ. ಆದರೆ, ಕಾಲೇಜಿನಿಂದ ಕಾಲೇಜಿಗೆ ಕಟ್ ಆಫ್ ಪರ್ಸಂಟೇಜ್ ಬದಲಾಗತ್ತದೆ ಎಂದು ಹಿರೇಮಠ್ ಹೇಳಿದರು.












Click it and Unblock the Notifications