ವಿಪ್ರೋಗೆ 816 ಕೋಟಿ 'ಐಟಿ' ನೋಟಿಸ್

ಯುಎಸ್ ಸೆಕ್ಯುರಿಟೀಸ್ ಹಾಗೂ ಎಕ್ಸ್ ಚೇಂಜ್ ಕಮಿಷನ್(ಎಸ್ ಇಸಿ) ಗೆ ವಿಪ್ರೋ ಸಂಸ್ಥೆ ನೀಡಿರುವ ಹೇಳಿಕೆ ಪ್ರಕಾರ ಮಾರ್ಚ್ 2013ಕ್ಕೆ ಅನುಗುಣವಾಗಿ 816 ಕೋಟಿ ರು ಬಾಕಿ(84.8 ಕೋಟಿ ಬಡ್ಡಿ) ಉಳಿಸಿಕೊಳ್ಳಲಾಗಿದೆ.
1961ರ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 10 ಎ ಅಡಿಯಲ್ಲಿ ವಿನಾಯತಿ ಪಡೆದ ಕಾರಣ ಈ ಬಾಕಿ ಮೊತ್ತ ಈ ಪರಿ ಬೆಳೆದಿದೆ. ವಿಪ್ರೋ ಸಂಸ್ಥೆ ಲಾಭದ ನಡುವೆಯೂ ತೆರಿಗೆ ನೋಟಿಸ್ ಹೊರೆ ಹೊತ್ತಿದೆ.
ದೇಶದ ಮೂರನೇ ಅತಿದೊಡ್ಡ ಸಂಸ್ಥೆ ವಿಪ್ರೋ ಸಂಸ್ಥೆ ಷೇರುಗಳು ಶುಕ್ರವಾರ ಉತ್ತಮ ಆರಂಭ ಪಡೆಯುವಲ್ಲಿ ವಿಫಲವಾಗಿದೆ. ಮೊದಲ ಅವಧಿಯಲ್ಲೇ ಶೇ 2 ರಷ್ಟು ಕುಸಿತ ಕಂಡಿದೆ.
ಶುಕ್ರವಾರ(ಜೂ.14) ಬೆಳಗ್ಗೆ 11.30 ರ ಸುಮಾರಿಗೆ ಬಿಎಸ್ ಇಯಲ್ಲಿ 334.00 ರು ನಂತೆ ಶೇ 1.78 ರಷ್ಟು ಕುಸಿದಿದೆ. ಇದೇ ವೇಳೆಯಲ್ಲಿ 334.00 ಶೇ 1.76ರಷ್ಟು ಇಳಿಮುಖವಾಗಿದೆ.
ವಿಪ್ರೋ ಸಂಸ್ಥೆ ನೋಟಿಸ್ ಪಡೆಯುವುದಕ್ಕೂ ಮುನ್ನ ಇನ್ಫೋಸಿಸ್, ಐಗೇಟ್ ಹಾಗೂ ಡಬ್ಲ್ಯೂಎನ್ ಎಸ್ ಸಂಸ್ಥೆಗಳಿಗೂ ಇದೇ ರೀತಿ ಆದಾಯ ತೆರಿಗೆ ಬಾಕಿ ನೋಟಿಸ್ ನೀಡಲಾಗಿತ್ತು ಎಂಬುದನ್ನು ಇಲ್ಲಿ ಸ್ಮರಿಸಬಹುದು.
ಇದಲ್ಲದೆ ಮಾರ್ಚ್ 31, 2001 ರಿಂದ ಮಾರ್ಚ್ 31, 2008ರ ಅವಧಿಯಲ್ಲೂ ವಿಪ್ರೋ ಸಂಸ್ಥೆ ಬಾಕಿ ಮೊತ್ತ ಉಳಿಸಿಕೊಂಡಿದೆ. ಬೆಂಗಳೂರಿನ ಸಾಫ್ಟ್ ವೇರ್ ಟೆಕ್ನಾಲಜಿ ಪಾರ್ಕ್ ನಲ್ಲಿರುವ ವಿಪ್ರೋ ಸಂಸ್ಥೆ ಲಾಭ ಗಳಿಸಿದರೂ ಅದಕ್ಕೆ ತಕ್ಕ ತೆರಿಗೆ ವಿಧಿಸಿಲ್ಲ ಎಂಬ ಆರೋಪವಿದೆ.
ಆದಾಯ ತೆರಿಗೆ ಕಾಯ್ದೆ 1961ರ ಸೆಕ್ಷನ್ 10 ಎ ಅಡಿಯಲ್ಲಿ ವಿನಾಯತಿಯನ್ನು ವಿಪ್ರೋ ಸಂಸ್ಥೆ ಬಯಸಿದೆ. ಆದರೆ, ವಿನಾಯತಿ ಸಿಗದ ಕಾರಣ 3,936 ಕೋಟಿ(ಬಡ್ಡಿ ಸಹಿತ) ತೆರಿಗೆ ಬಾಕಿ ಈಗ ವಿಪ್ರೋ ತಲೆ ಮೇಲಿದೆ.












Click it and Unblock the Notifications