ಪ್ರಮೀಳಾ ರಾಜ್ಯದಲ್ಲೇ ಮಹಿಳೆ ವಿರುದ್ಧ ಹೆಚ್ಚು ಅಪರಾಧ

west-bengal-tops-crime-chart-against-women-ncrb
ಬೆಂಗಳೂರು, ಜೂನ್ 13: ಶಾಂತಿರಹಿತ ದೇಶಗಳ ಪಟ್ಟಿಯಲ್ಲಿ ಭಾರತ 141 ಸ್ಥಾನದಲ್ಲಿ ಕಾಣಿಸಿಕೊಂಡಿತ್ತು. ಇದಕ್ಕೆ ಇಂಬು ನೀಡುವಂತೆ ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆಯು ತನ್ನ ತಾಜಾ ವರದಿಯನ್ನು ಬಿಡುಗಡೆ ಮಾಡಿದೆ. ಅದು ಶಾಂತಿಪ್ರಿಯ ಬೆಂಗಳೂರಿಗರಿಗೆ ಆತಂಕಕಾರಿಯಾಗಿದೆ.

ಏನಪಾ ಅಂದರೆ 2012ನೇ ಸಾಲಿನಲ್ಲಿ ದೇಶದಲ್ಲಿ 2ನೇ ಅಸುರಕ್ಷಿತ ನಗರ ಎನ್ನುವ ಕುಖ್ಯಾತಿಗೆ ಬೆಂಗಳೂರು ಪಾತ್ರವಾಗಿದೆ. ಅಸುರಕ್ಷಿತ ನಗರಗಳ ಸಾಲಿನಲ್ಲಿ ದೆಹಲಿ ಅಗ್ರ ಸ್ಥಾನದಲ್ಲಿ ಮತ್ತು ಕೋಲ್ಕತಾ 3ನೇ ಸ್ಥಾನದಲ್ಲಿ ಇದೆ. ಗಮನಿಸಿ ಇವು ಅಧಿಕೃತವಾಗಿ ಬೆಳಕಿಗೆ ಬಂದ/ ದಾಖಲಾದ ಪ್ರಕರಣಗಳು. ಇನ್ನು ಬಹಿರಂಗವಾಗದ ಪ್ರಕರಣಗಳು ಅವೆಷ್ಟೋ.

ಪ್ರಮೀಳಾ ರಾಜ್ಯದಲ್ಲಿಯೇ ಮಹಿಳೆಯರ ವಿರುದ್ಧ:
ದಾಖಲೆಗಳ ಪ್ರಕಾರ ಪಶ್ಚಿಮ ಬಂಗಾಳದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಹಿಳೆಯರ ವಿರುದ್ಧ ಅಪರಾಧ ಪ್ರಕರಣಗಳು ನಡೆದಿವೆ. ಈ ರಾಜ್ಯದಲ್ಲಿ ಮಹಿಳೆಯರ ವಿರುದ್ಧ 30,942 ಪ್ರಕರಣಗಳು ನಡೆದಿದ್ದು, ದೇಶದಲ್ಲಿಯೇ ಅತ್ಯಧಿಕವಾಗಿದೆ ಎಂದು NCRB ಬಿಡುಗಡೆ ಮಾಡಿರುವ ದಾಖಲೆ ತಿಳಿಸಿದೆ.

ಪಶ್ಚಿಮ ಬಂಗಾಳ ಒಂದರಲ್ಲಿಯೇ 2012ರಲ್ಲಿ 2,000ಕ್ಕೂ ಹೆಚ್ಚು ಅತ್ಯಾಚಾರ ಪ್ರಕರಣಗಳು ವರದಿಯಾಗಿವೆ. ಅಮ್ಮ, ಭೂತಾಯಿ, ಮಾನವ ಸಂಕುಲ (Ma, Mati, Manush) ಘೋಷವಾಕ್ಯದಡಿ ಅಧಿಕಾರಕ್ಕೆ ಬಂದ ಮಮತಾ ಬ್ಯಾನರ್ಜಿ ಅವರ ಪ್ರಮೀಳಾ ರಾಜ್ಯದಲ್ಲಿಯೇ ಮಹಿಳೆಯರ ವಿರುದ್ಧ ಹೆಚ್ಚು ಅಪರಾಧಗಳು ನಡೆದಿವೆ.

ಅದಾದನಂತರ ಆಂಧ್ರ ಪ್ರದೇಶದಲ್ಲಿ 28,171 ಮತ್ತು ರಾಮ ರಾಜ್ಯ ಉತ್ತರ ಪ್ರದೇಶದಲ್ಲಿ 23,569 ಅಪರಾಧ ಪ್ರಕರಣಗಳು ದಾಖಲಾಗಿವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+