ಗೋವಾ: ಪ್ರಚಾರ ಸಮಿತಿ ಅಧ್ಯಕ್ಷರಾಗಿ ನರೇಂದ್ರ ಮೋದಿ

ಪಣಜಿ, ಜೂ.9: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ನೀಡುವ ವಿಚಾರದಲ್ಲಿ ಬಿಜೆಪಿಯಲ್ಲಿ ಮೂಡಿರುವ ಒಡಕು ತಿಳಿಕೊಂಡಿದ್ದು, ಹ್ಯಾಪಿ ಎಂಡಿಂಗ್ ನೀಡುತ್ತೇವೆ ಎಂದಿದ್ದ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ಪ್ರಚಾರ ಸಮಿತಿ ಅಧ್ಯಕ್ಷರಾಗಿ ನರೇಂದ್ರ ಮೋದಿಯನ್ನು ಘೋಷಿಸಿದ್ದಾರೆ.

ಕಾರ್ಯಕಾರಣಿ ಸಭೆಯಲ್ಲಿ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಅವರಿಗೆ ಲೋಕಸಭೆ ಚುನಾವಣೆಯ ಪ್ರಚಾರ ಸಮಿತಿಯ ಸಾರಥ್ಯ ವಹಿಸುವುದಕ್ಕೆ ಅಡ್ವಾಣಿ ವಿರೋಧ ವ್ಯಕ್ತಪಡಿಸಿದ್ದರು. ಎರಡು ದಿನಗಳ ಕಾರ್ಯಕಾರಣಿಗೆ ಗೈರು ಹಾಜರಾಗುವ ಮೂಲಕ ಅವರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

ಗುಜರಾತ್, ದೆಹಲಿಯಲ್ಲಿ ಮೋದಿ ಮಾಡಿದ್ದ ನರೇಂದ್ರ ಮೋದಿ ಪಣಜಿಯಲ್ಲೂ ತಮ್ಮ ಜಾದೂ ಮುಂದುವರೆಸಿದ್ದಾರೆ. ಮೋದಿ ಪರವಾದ ನಾಯಕರು ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನ ಅವರಿಗೆ ನೀಡಬೇಕು, ಜೊತೆಗೆ ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಬೇಕು ಎಂಬ ಬೇಡಿಕೆ ಮುಂದಿಟ್ಟಿತ್ತು.

ಲೋಕಸಭೆ ಚುನಾವಣೆಗೆ ಸಮಯಾಕಾಶವಿದೆ. ಆದ್ದರಿಂದ, ತರಾತುರಿಯಲ್ಲಿ ಮೋದಿಯವರನ್ನು ಚುನಾವಣಾ ಸಮಿತಿಯ ಸಾರಥಿಯನ್ನಾಗಿ ನೇಮಿಸುವುದು ಬೇಡ ಎಂದು ಮೋದಿ ವಿರೋಧಿ ಬಣ ಬೇಡಿಕೆ ಮುಂದಿಟ್ಟಿದೆ. ಆದ್ದರಿಂದಲೇ ಕಾರ್ಯಕಾರಣಿ ಸಭೆಯಲ್ಲಿ ಮೋದಿಗೆ ಪಟ್ಟಕಟ್ಟುವ ನಿರ್ಧಾರ ತಗೆದುಕೊಳ್ಳಬಾರದು ಎಂದು ಮೋದಿ ವಿರೋಧಿ ಬಣ ಒತ್ತಡ ಹೇರುತ್ತಿದೆ. ಮೋದಿಗೆ ಪ್ರಚಾರ ಸಮಿತಿಯ ಸಂಚಾಲಕ ಹುದ್ದೆ ನೀಡಿದರೆ ಸಾಕು ಎಂದು ಬಣ ಅಭಿಪ್ರಾಯಪಟ್ಟಿದೆ.

Narendra Modi set to derail Advani Protest Express

ಗೋವಾ ಸಭೆ ಮುಖ್ಯಾಂಶ ಅಪ್ಡೇಟ್ ಕಾಲಕಾಲಕ್ಕೆ:

ಸಮಯ 13.55 : ಮೋದಿ ನೇತೃತ್ವದಲ್ಲಿ ಬಿಜೆಪಿ ಚುನಾವಣೆ ಎದುರಿಸಲಿದೆ
* ಪ್ರಚಾರ ಸಮಿತಿ ಅಧ್ಯಕ್ಷರಾಗಿ ನರೇಂದ್ರ ಮೋದಿ ಹೆಸರು ಘೋಷಿಸಿದ ಅಧ್ಯಕ್ಷ ರಾಜನಾಥ್ ಸಿಂಗ್

ಸಮಯ 13.45: ಮೋದಿಗೆ ಸುಷ್ಮಾ ಸ್ವರಾಜ್ ಬೆಂಬಲ ಘೋಷಣೆ, ರಾಜನಾಥ್ ಸಿಂಗ್ ಭಾಷಣ ಆರಂಭ.
* ಬೆಳಗ್ಗೆ ಹಿರಿಯ ನಾಯಕ ಎಲ್ ಕೆ ಅಡ್ವಾಣಿಗೆ ಕರೆ ಮಾಡಿದ್ದ ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್, ಆರೋಗ್ಯ ವಿಚಾರಣೆಗಾಗಿ ಕರೆ ಅಷ್ಟೇ ಎಂದು ಹೇಳಿಕೆ
* ಆನಾರೋಗ್ಯ ಪೀಡಿತರಾಗಿದ್ದರೂ ಅಡ್ವಾಣಿ ಅವರು ಹಿಂದಿ ಚಿತ್ರ ನೋಡಿ ತಮ್ಮ ಬ್ಲಾಗ್ ಅಪ್ಡೇಡ್ ಮಾಡಿ ಅಚ್ಚರಿ ಮೂಡಿಸಿದ್ದಾರೆ.
ಸಮಯ 12.45: ಕಾಂಗ್ರೆಸ್ ಮುಕ್ತ, ಭ್ರಷ್ಟಾಚಾರ ಮುಕ್ತ ಭಾರತ ನಮ್ಮ ಗುರಿ: ಮೋದಿ
* ಕಾರ್ಯಕಾರಿ ಸಭೆಯಲ್ಲಿ ಮಾತನಾಡಿದ ಮೋದಿ, ಕಾಂಗ್ರೆಸ್ ವಿರುದ್ಧ ಜನ ಸಿಡಿದೆದ್ದಿದ್ದಾರೆ. ಸೋನಿಯಾ ಗಾಂಧಿ ಹಾಗೂ ಮನಮೋಹನ್ ಸಿಂಗ್ ನಡುವಿನ ಭಿನ್ನಮತದಿಂದ ಭಾರತದ ಅಭಿವೃದ್ಧಿ ಕುಂಠಿತವಾಗಿದೆ.
* ಲಿಬರ್ಟಿ ಪ್ರತಿಮೆಯಂತೆ ಸರ್ದಾರ್ ಪಟೇಲ್ ಸ್ಥಾಪನೆ ಅಗತ್ಯವಿದೆ.
ಸಮಯ 12.15: ಬಿಜೆಪಿ ಶಹನವಾಜ್ ಹುಸೇನ್ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ವಿರುದ್ಧ ಹರಿಹಾಯ್ದಿದ್ದಾರೆ.
* ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಕಂಡರೆ ಕಾಂಗ್ರೆಸಿಗೆ ಭಯ ಶುರುವಾಗಿದೆ. ಇದರ ಲಾಭ ಪಡೆಯುತ್ತೇವೆ
* ಜನ ಹಾಗೂ ಕಾರ್ಯಕರ್ತರು ಬಯಸಿದಂತೆ ಮೋದಿಗೆ ಸೂಕ್ತ ಸ್ಥಾನ ಸಿಗಲಿದೆ.
* ಒಂದು ಸಮಿತಿ, ಒಬ್ಬ ನಾಯಕ ಎಂಬ ಪ್ರಸ್ತಾವನೆಗೆ ಸಮಿತಿಯಲ್ಲಿ ಒಪ್ಪಿಗೆ

ಸಮಯ : 12.30
* ಮೋದಿಗೆ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಅಥವಾ ಸಂಚಾಲಕ ಸ್ಥಾನ ನೀಡುವುದು ನಿಚ್ಚಳವಾಗಿದೆ.
* ಆಡ್ವಾಣಿ ಇರಲಿ ಅಥವಾ ಬಿಡಲಿ ಭಾನುವಾರವೇ ಮೋದಿ ಅವರನ್ನು ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ಮಾಡಿ ಬಿಡಿ ಎಂದು ಆರ್‌ಎಸ್‌ಎಸ್ ಬಿಜೆಪಿ ಅಧ್ಯಕ್ಷರಿಗೆ ಸೂಚನೆ ನೀಡಿದೆ
* ನರೇಂದ್ರ ಮೋದಿ ಭಾಷಣ ಹಾಗೂ ರಾಜನಾಥ್ ಸಿಂಗ್ ಅವರ ಭಾಷಣ ನಂತರ ಅಂತಿಮ ಘೋಷಣೆಯಾಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+