ಫೋನ್ ಟ್ಯಾಪಿಂಗ್ : ಸಮರ್ಥನೆ ನೀಡಿದ ಒಬಾಮಾ

Barack Obama
ವಾಷಿಂಗ್ಟನ್, ಜೂ. 8 : ನಾಗರಿಕರ ದೂರವಾಣಿ ಕರೆಗಳ ಮಾಹಿತಿ ಸಂಗ್ರಹ ಕಾರ್ಯ ತಪ್ಪಲ್ಲ ಎಂದು ಅಮೆರಿಕಾ ಅಧ್ಯಕ್ಷರು ಸಮರ್ಥನೆ ನೀಡಿದ್ದಾರೆ. ಭಯೋತ್ಪಾದನೆಯಿಂದ ನಾಗರೀಕರನ್ನು ರಕ್ಷಿಸುವ ಸಲುವಾಗಿ ಸರ್ಕಾರ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ, ಎಂದು ಹೇಳಿಕೆ ನೀಡುವ ಮೂಲಕ ಅಮೆರಿಕಾ ತನ್ನ ಕಾರ್ಯವನ್ನು ಸಮರ್ಥಿಸಿಕೊಂಡಿದೆ.

ರಾಷ್ಟ್ರೀಯ ಭದ್ರತಾ ಸಂಸ್ಥೆಯು ಮೈಕ್ರೊಸಾಫ್ಟ್, ಗೂಗಲ್, ಫೇಸ್‌ಬುಕ್, ಆಪಲ್‌ಗಳ ಸರ್ವರ್ ಗಳನ್ನು ಕೂಡ ಟ್ಯಾಪ್ ಮಾಡುತ್ತಿದ್ದು, ವೀಡಿಯೊ, ಇ - ಮೇಲ್‌ಗಳ ಮಾಹಿತಿಯನ್ನು ರಹಸ್ಯವಾಗಿ ಸಂಗ್ರಹಿಸುತ್ತಿದೆ ಎಂದು 'ವಾಷಿಂಗ್ಟನ್ ಪೋಸ್ಟ್' ಮತ್ತು ಬ್ರಿಟನ್‌ನ 'ಗಾರ್ಡಿಯನ್' ಪತ್ರಿಕೆ ವರದಿ ಮಾಡಿದ್ದವು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಅಮೆರಿಕಾ ಅಧ್ಯಕ್ಷ ಬಾರಕ್ ಒಬಾಮಾ, ರಾಷ್ಟ್ರೀಯ ಗುಪ್ತದಳದ ಈ ಕಾರ್ಯಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ. ನಾಗರಿಕರ ಹಕ್ಕುಗಳ ರಕ್ಷಣೆ ಮತ್ತು ಭಯೋತ್ಪಾದನೆ ಬೆದರಿಕೆ ಎದುರಿಸಲು ಈ ಕ್ರಮ ಅನಿವಾರ್ಯ ಎಂದು ವಿಶ್ಲೇಷಿಸಿದ್ದಾರೆ.

ನಾಗರಿಕ ಹಕ್ಕುಗಳ ಸಂಘಟನೆ ಅಮೆರಿಕಾದ ಸರ್ಕಾರದ ಕ್ರಮವನ್ನು ಸರ್ವಾಧಿಕಾರಿ ಧೋರಣೆ ಎಂದು ಟೀಕಿಸಿದ್ದವು. ಫೆಡರಲ್ ತನಿಖಾ ಸಂಸ್ಥೆ ನಾಗರಿಕರ ದೂರವಾಣಿ ಕರೆಗಳ ಮಾಹಿತಿ ಸಂಗ್ರಹಿಸುತ್ತಿರುವುದು ದೇಶದಲ್ಲಿ ತೀವ್ರ ರಾಜಕೀಯ ಕೋಲಾಹಲ ಮೂಡಿಸಿತ್ತು.

ರಾಷ್ಟ್ರೀಯ ಭದ್ರತೆಯೇ ಅಧ್ಯಕ್ಷರ ಮೊದಲ ಆದ್ಯತೆ. ಆದ್ದರಿಂದ ಸರ್ಕಾರ ನಾಗರೀಕರ ದೂರವಾಣಿ ಕರೆಗಳ ಮಾಹಿತಿ ಸಂಗ್ರಹಿಸಿದೆ. ಈ ಬಗ್ಗೆ ದೇಶದಲ್ಲಿ ಬಹಿರಂಗವಾದ ಚರ್ಚೆ ನಡೆಯುತ್ತಿರುವುದನ್ನು ನಾನು ಸ್ವಾಗತಿಸುತ್ತೇನೆ ಎಂದು ಒಬಾಮಾ ಹೇಳಿದ್ದಾರೆ.

ಶ್ವೇತ ಭವನ ಸ್ಪಷ್ಟನೆ : ಭಯೋತ್ಪಾದಕರ ಬೆದರಿಕೆ ಎದುರಿಸಲು ಅಗತ್ಯವಿರುವ ಕರೆಗಳ ಮಾಹಿತಿ ಸಂಗ್ರಹ ಮಾಡಲಾಗುತ್ತಿದೆ. ಇದರು ಸರ್ಕಾರದ ಸರ್ವಾಧಿಕಾರಿ ಧೋರಣೆಯಲ್ಲ, ನಾಗರೀಕರ ರಕ್ಷಣೆಗಾಗಿ ತೆಗೆದುಕೊಂಡಿರುವ ಕ್ರಮ ಎಂದು ಶ್ವೇತಭವನದ ವಕ್ತಾರರಾದ ಜೋಶ್ ಅರ್ನೆಸ್ಟ್ ಸ್ಪಷ್ಟನೆ ನೀಡಿದ್ದಾರೆ.

ನಾಗರೀಕರ ತೀವ್ರ ವಿರೋಧದ ನಡುವೆಯೂ ಅಮೆರಿಕಾ ಸರ್ಕಾರ ತನ್ನ ಕಾರ್ಯವನ್ನು ಸರಿಯಾಗಿಯೇ ಸಮರ್ಥಿಸಿಕೊಂಡಿದೆ. ಮಾಹಿತಿ ಸಂಗ್ರಹಿಸುವ ಕಾರ್ಯವನ್ನು ದೇಶದ ರಕ್ಷಣೆಗಾಗಿ ಮಾಡಲಾಗುತ್ತಿದೆ ಎಂದು ಹೇಳಿದೆ. ಇದನ್ನು ಜನರು ಒಪ್ಪುತ್ತಾರೆಯೇ ಕಾದು ನೋಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+