Mallನಲ್ಲಿ ವೇಶ್ಯಾವಾಟಿಕೆ: 6 ಯುವತಿಯರ ಬಂಧನ

ಖಚಿತ ಸುಳಿವನ್ನಾಧರಿಸಿ ಕಾರ್ಯಾಚರಣೆಗಿಳಿದ ಪೊಲೀಸರು ಬುಧವಾರ ರಾತ್ರಿ ಸೆಲಬ್ರೇಷನ್ ಮಾಲ್ ನಲ್ಲಿ ಮೂರನೆಯ ಅಂತಸ್ತಿನಲ್ಲಿರುವ RDX ಪಬ್ ಮೇಲೆ ದಾಳಿ ನಡೆಸಿದ್ದಾರೆ. ಅಲ್ಲಿ ಬಂಧಿತ ಯುವಕರು ಜೂಜಾಟದಲ್ಲಿಯೂ ತೊಡಗಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಬಾಜಿಗೆ ಇಟ್ಟಿದ್ದ 6 ಲಕ್ಷ ರೂ. ಹಣವನ್ನು ವಶಪಡಿಸಿಕೊಳ್ಳಲಾಗಿದೆ. high-tech gambling machine ಜಫ್ತಿ ಮಾಡಲಾಗಿದೆ. ಬಂಧಿತ ಯುವಕರ ಪೈಕಿ ಬಹಳಷ್ಟು ಮಂದಿ ದೆಹಲಿ ನಿವಾಸಿಗಳು. ಇವರ ಪೈಕಿ ನವೀನ್ ಎಂಬ ಯುವಕ ಬಂಧಿತ ಯುವತಿಯರನ್ನು ದೆಹಲಿಯಿಂದಲೇ ಕರೆತಂದಿದ್ದ ಎಂದು crime investigation agency (CIA) ಪೊಲೀಸರು ತಿಳಿಸಿದ್ದಾರೆ.
ಪಬ್ ಮಾಲೀಕ ಪ್ರೀತಂ, ಮ್ಯಾನೇಜರ್ ಮತ್ತಿತರ ಉದ್ಯೋಗಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. Gambling Act and the Immoral Traffic (Prevention) Act ಕಾಯಿದೆಯಡಿ ಬಂಧಿಸಲ್ಪಟ್ಟವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಅವರನ್ನೆಲ್ಲ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.












Click it and Unblock the Notifications