ಫೋರ್ಬ್ಸ್: ಗೂಗಲ್ ಹಿಂದಿಕ್ಕಿದ ಕಾಂಗ್ನಿಜೆಂಟ್
ನ್ಯೂಯಾರ್ಕ್, ಜೂ.7: ನ್ಯೂಜೆರ್ಸಿ ಮೂಲದ ಕಾಂಗ್ನಿಜೆಂಟ್ ಟೆಕ್ನಾಲಜಿ ಸಲ್ಯೂಷನ್ಸ್ ಫೋರ್ಬ್ಸ್ ಪಟ್ಟಿಯಲ್ಲಿ 12ನೇ ಸ್ಥಾನ ಪಡೆದು ಗೂಗಲ್ ಸಂಸ್ಥೆಯನ್ನು ಹಿಂದಿಕ್ಕಿದೆ. ಅಮೆರಿಕದ ಟಾಪ್ ಕಂಪನಿಗಳ ಪೈಕಿ ಲಿಂಕಡ್ ಇನ್ ಮೊದಲ ಸ್ಥಾನ ಪಡೆದಿದೆ.
ಫೋರ್ಬ್ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ ಬಿಸಿನೆಸ್ ನೆಟ್ವರ್ಕಿಂಗ್ ಕಂಪನಿ ಲಿಂಕ್ಡ್ ಇನ್ ಮೊದಲ ಸ್ಥಾನ ಪಡೆದಿದೆ. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಎರಡನೇ ಸ್ಥಾನ ಗಳಿಸಿದೆ ನಂತರದ ಸ್ಥಾನದಲ್ಲಿ ಐಟಿ ದಿಗಜ ಆಪಲ್ ಕಂಪನಿ ಇದೆ.
ನಾಸ್ಡಾಕ್ ನ ಪಟ್ಟಿಯಲ್ಲಿರುವ ಕಾಂಗ್ನಿಜೆಂಟ್ ಸಂಸ್ಥೆ ಇತ್ತೀಚೆಗೆ ಭಾರತದ ಅಗ್ರಗಣ್ಯ ಐಟಿ ಸಂಸ್ಥೆ ಇನ್ಫೋಸಿಸ್ ಅನ್ನು ಹಿಂದಿಕ್ಕಿ ಎರಡನೇ ಅತಿ ದೊಡ್ಡ ಸಾಫ್ಟ್ ವೇರ್ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಕಾಂಗ್ನಿಜೆಂಟ್ ಅಮೆರಿಕ ಮೂಲದ ಕಂಪನಿಯಾದರೂ ಹೆಚ್ಚಿನ ಸಂಖ್ಯೆಯ ಉದ್ಯೋಗಿಗಳು ಭಾರತದಲ್ಲಿರುವುದರಿಂದ ಹೊರ ಗುತ್ತಿಗೆ ಕಂಪನಿಯಾಗೇ ನೋಡಲಾಗುತ್ತದೆ. ಭಾರತದಲ್ಲಿ ಎರಡನೇ ಸ್ಥಾನ ಪಡೆದಿರುವ ಕಾಂಗ್ನಿಜೆಂಟ್ ಅಮೆರಿಕದಲ್ಲಿ ಈಗ 12ನೇ ಸ್ಥಾನಕ್ಖೇರಿದೆ.
ಉಳಿದಂತೆ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಸಂಸ್ಥಗಳು ಸೇರಿದಂತೆ ಪ್ರಮುಖ ಸಂಸ್ಥೆಗಳು ಇಂತಿದೆ. ಫೋರ್ಬ್ ಪಟ್ಟಿ ಸೇರಲು ಕನಿಷ್ಠ ಆದಾಯ 150 ಮಿಲಿಯನ್ ಯುಎಸ್ ಡಾಲರ್ ಆಗಿರಬೇಕು ಹಾಗೂ ಮಾರುಕಟ್ಟೆ ಮೌಲ್ಯ 500 ಮಿಲಿಯನ್ ಡಾಲರ್ ನಷ್ಟಿರಬೇಕು.
1. ಲಿಂಕ್ಡ್ ಇನ್
2. ಫೇಸ್ ಬುಕ್
3. ಆಪಲ್
4. 3ಡಿ ಸಿಸ್ಟಮ್ಸ್
5. ಐಪಿಜಿ ಫೋಟೊನಿಕ್ಸ್
6. ಇಪಿಎ ಎಂ ಸಿಸ್ಟಮ್ಸ್
7. ಶಟರ್ ಸ್ಟಾಕ್ಸ್
8. ಇನ್ ವೆನ್ ಸೆನ್ಸ್
9. ಶಟರ್ ಫ್ಲೈ
10. ಓಪನ್ ಟ್ಯೂಬ್
ಉಳಿದಂತೆ
ಸೋಲಾರ್ ವಿಂಡ್ಸ್ (11), ಅಥೇನಾ ಹೆಲ್ತ್(13), ಐಕ್ಸಿಯಾ(14), ಈಕ್ವಿನಿಕ್ಸ್ (15), ಜಾಗತಿಕ ಸರ್ಚ್ಚ್ ಇಂಜಿನ್ ದಿಗ್ಗಜ ಗೂಗಲ್ 17ನೇ ಸ್ಥಾನ ಪಡೆದಿದೆ.(ಪಿಟಿಐ)












Click it and Unblock the Notifications