1.5 ಲಕ್ಷ ಕೋಟಿ ಹೂಡಿಕೆಗೆ ಅಂಬಾನಿ ಸಜ್ಜು

ಗುರುವಾರ ನಡೆದ ಸರ್ವ ಸದಸ್ಯರ 39ನೇ ಸಭೆ(AGM) ನಲ್ಲಿ ಷೇರುದಾರರನ್ನು ಉದ್ದೇಶಿಸಿ ಮುಖೇಶ್ ಅಂಬಾನಿ ಅವರು ಸುಮಾರು 40 ನಿಮಿಷಗಳ ಕಾಲ ಮಾತನಾಡಿದರು. ವಿಶ್ವದ ಟಾಪ್ 3 ರಿಫೈನರಿಗಳ ಪೈಕಿ ರಿಲಯನ್ಸ್ ಕೂಡಾ ಒಂದೆನಿಸಲಿದೆ. ಗ್ರಾಹಕರು ಟೆಲಿಕಾಂ ಕ್ಷೇತ್ರದಲ್ಲಿ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಬಹುದು ಎಂದರು.
ಪೂರ್ವ ಕರಾವಳಿಯಲ್ಲಿ ಅನಿಲ ಉತ್ಪಾದನೆಗೆ ಒತ್ತು ನೀಡಲು ಸಂಸ್ಥೆ ನಿರ್ಣಯಿಸಿದ್ದು 2015ರ ವೇಳೆಗೆ ಕಾರ್ಯಗತವಾಗಲಿದೆ ಎಂದರು. ರೀಟೈಲ್ ವ್ಯವಹಾರ 10,000 ಕೋಟಿ ರು ಮುಟ್ಟುವ ನಿರೀಕ್ಷೆ ಇದೆ. ಒಟ್ಟಾರೆ ಶೇ 50 ರಷ್ಟು ಪ್ರಗತಿ ಕಾಣುವ ಯೋಜನೆ ಹಾಕಿಕೊಳ್ಳಲಾಗಿದೆ ಎಂದು ಮುಖೇಶ್ ಹೇಳಿದರು.
ಷೇರುಪೇಟೆಯಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಕೊಂಚ ಡಲ್ ಹೊಡೆದಿತ್ತು. ದಿನ ಮುಕ್ತಾಯಕ್ಕೆ ಬಿಎಸ್ ಇನಲ್ಲಿ 792.30 ರು ನಂತೆ ಶೇ 1.03 ರಷ್ತು ಕುಸಿದಿತ್ತು. ಇದೇ ವೇಳೆ ಎನ್ ಎಸ್ ಇನಲ್ಲಿ 792.00 ರು ನಂತೆ ಶೇ 1.25 ರಷ್ಟು ಇಳಿಮುಖವಾಗಿದೆ.












Click it and Unblock the Notifications