ಮನಾಲಿ: ಟ್ರಕ್ಕಿನಲ್ಲಿ ಅಮೆರಿಕ ಮಹಿಳೆಯ ಗ್ಯಾಂಗ್ ರೇಪ್

america-woman-gang-raped-moving-truck-manali
ಮನಾಲಿ, ಜೂನ್ 4: ಪ್ರವಾಸಿಗರ ಸ್ವರ್ಗವೆಸಿರುವ ಮನಾಲಿಯಲ್ಲಿ ಪ್ರವಾಸಿ ಮಹಿಳೆಗೆ ನರಕ ದರ್ಶನ ಮಾಡಿಸಲಾಗಿದೆ. ಅಮೆರಿಕ ಮೂಲದ ಪ್ರವಾಸಿ ಮಹಿಳೆಯ ಮೇಲೆ ಟ್ರಕ್ ಡ್ರೈವರುಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು Yeh Jawani Hai Deewani ಸಿನಿಮಾ ರಿಲೀಸ್ ಆಗಿರುವ ಸಂದರ್ಭದಲ್ಲೇ ಪ್ರವಾಸಿ ಮಹಿಳೆಯ ಮೇಲೆ ಕಾಮುಕರು ಮುಗಿಬಿದ್ದಿರುವುದು ಶೋಚನೀಯವಾಗಿದೆ.

ಚಲಿಸುತ್ತಿದ್ದ ಟ್ರಕ್ಕಿನಲ್ಲಿ ಚಾಲಕ ಮತ್ತು ಆತನ ಇಬ್ಬರು ಸಹಾಯಕರು 31 ವರ್ಷದ ಅಮೆರಿಕದ ಮಹಿಳೆಯ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ರಸ್ತೆ ಬದಿ ಬಿಸಾಡಿಹೋಗಿದ್ದಾರೆ.

ಬಾಧಿತ ಮಹಿಳೆ ನೀಡಿರುವ ದೂರಿನ ಅನ್ವಯ ಸೋಮವಾರ ಬೆಳಗ್ಗೆ ಆಕೆ ಮನಾಲಿಗೆ ಬಂದಿದ್ದರು. ಸಂಜೆ ಸಮಯದಲ್ಲಿ ಆಕೆ ಹಳ್ಳಿಯತ್ತ ಹೊರಟಿದ್ದಳು. ಆದರೆ ವಾಪಸಾಗುವುದು ವಿಳಂವಾಗಿದೆ. ಕತ್ತಲಾದ ಮೇಲೆ ಹಳ್ಳಿಯಿಂದ ವಾಪಸಾಗುತ್ತಿದ್ದ ಸದರಿ ಮಹಿಳೆಯನ್ನು ಕಂಡ ಟ್ರಕ್ ಜನ, ಆಕೆಗೆ ಲಿಫ್ಟ್ ಕೊಡುವ ಮನಸು ಮಾಡಿದ್ದಾರೆ. ಹಾಗೆಂದೇ ಆಕೆಗೆ ತಿಳಿಸಿ, ಟ್ರಕ್ಕಿಗೆ ಹತ್ತಿಸಿಕೊಂಡಿದ್ದಾರೆ.

ಆಮೇಲಿನದು ಆಕೆಯ ನರಳಾಟ... ಸ್ವತಃ ಟ್ರಕ್ ಚಾಲಕನೇ ಆಕೆಯ ಮೇಲೆ ಮುಗಿಬಿದ್ದಿದ್ದಾನೆ. ನಂತರ ಅವನ ಇಬ್ಬರು ಸಹಾಯಕರೂ ಆಕೆಯ ಮೇಲೆ ಗ್ಯಾಂಗ್ ರೇಪ್ ಮಾಡಿದ್ದಾರೆ. ಮಹಿಳೆಯ ದೂರಿನ ಮೇರೆಗೆ ಮನಾಲಿ ಪೊಲೀಸರು ಮೂವರು ಆಗುಂತಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ಮಹಿಳಾ ಪೊಲೀಸರನ್ನು ಆಕೆಯ ನೆರವಿಗೆ ನಿಯೋಜಿಸಲಾಗಿದೆ. ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಆದೇಶಿಲಾಗಿದೆ. ಅಮೆರಿಕದ ರಾಯಭಾರ ಕಚೇರಿ ಅಧಿಕಾರಿಗಳು ಶೀಘ್ರವೇ ಮನಾಲಿಗೆ ಧಾವಿಸಲಿದ್ದಾರೆ ಎಂದು ಹಿಮಾಚಲ ಡಿಜಿಪಿ ಕಮಲ್ ಕುಮಾರ್ ತಿಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+