ವಿದ್ಯಾರ್ಥಿಗಳಿಗೆ ಬಸ್ ಪಾಸ್ ಯಾವಾಗ ಸಿಗಲಿದೆ?
ಬೆಂಗಳೂರು, ಜೂ.4: ಬೆಂಗಳೂರು ಮಹಾನಗರ ಪಾಲಿಕೆ(ಬಿಎಂಟಿಸಿ) 2013-14ನೇ ಸಾಲಿನ ಬಸ್ ಪಾಸ್ ವಿತರಣೆಗೆ ಸಜ್ಜಾಗಿದೆ. ಜೂ.5ರಿಂದ 12ರೊಳಗೆ ಹೈಸ್ಕೂಲ್, ಕಾಲೇಜು ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳಿದ್ದಾರೆ.
ಶಾಲೆ, ಕಾಲೇಜು, ವೃತ್ತಿಪರ ಕೋರ್ಸ್, ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತ್ಯೇಕ ದಿನಾಂಕಗಳಂದು ಬಸ್ ವಿತರಣೆ ಮಾಡಲಾಗುತ್ತದೆ. ಹಾಗೂ ಬಸ್ ಪಾಸ್ ದರ ಕೂಡಾ ವಿವಿಧ ಶ್ರೇಣಿಯಲ್ಲಿದೆ. ಕನಿಷ್ಠ 5 ತಿಂಗಳಿನಿಂದ 12 ತಿಂಗಳ ತನಕ ಪಾಸ್ ಪಡೆಯಬಹುದಾಗಿದೆ.
* ಜೂನ್ 5, 2013: ಪದವಿ ಕಾಲೇಜು, ಪಿಜಿ, ಇಂಜಿನಿಯರಿಂಗ್, ಐಟಿಐ, ಮೆಡಿಕಲ್ ಹಾಗೂ ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ ಪಾಸ್ ವಿತರಿಸಲಾಗುತ್ತದೆ.
* ಜೂನ್ 6, 8 ಹಾಗೂ 9 : ಪ್ರಾಥಮಿಕ, ಮಾಧ್ಯಮಿಕ ಹಾಗೂ ಹೈಸ್ಕೂಲ್ ವಿದ್ಯಾರ್ಥಿಗಳಿಗೆ
* ಜೂ 12 : ಪ್ರಥಮ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ
ಬಸ್ ಪಾಸ್ ಅರ್ಜಿ ಯನ್ನು ಇಲ್ಲಿ ಡೌನ್ ಲೋಡ್ ಮಾಡಿಕೊಳ್ಳಿ. ಪಾಸ್ ವಿತರಣೆ ಕೇಂದ್ರಗಳು ಬೆಳಗ್ಗೆ 8 ಗಂಟೆಯಿಂದ 5 ಗಂಟೆ ತನಕ ಕಾರ್ಯ ನಿರ್ವಹಿಸಲಿದೆ. ಭಾನುವಾರ ಮತ್ತು ಸಾರ್ವತ್ರಿಕ ರಜಾ ದಿನಗಳಂದು ಮುಚ್ಚಿರುತ್ತಿದೆ. ಹೆಚ್ಚಿನ ವಿವರಗಳನ್ನು ಮೈ ಬಿಎಂಟಿಸಿ ವೆಬ್ ತಾಣದಲ್ಲಿ ಪಡೆಯಬಹುದು.
ಚಿತ್ರಸರಣಿಯಲ್ಲಿ ನೋಡಿ ಪಾಸ್ ಪಡೆಯುವ ವಿಧಾನ ಹಾಗೂ ಪಾಸ್ ವಿತರಣೆ ಕೇಂದ್ರ ವಿವರ ನೋಡಿ

ಹೈಸ್ಕೂಲ್ ವಿದ್ಯಾರ್ಥಿಗಳಿಗೆ
* ಹುಡುಗರಿಗೆ : 600 ರು
* ಹುಡುಗಿಯರಿಗೆ: 400 ರು

ಪಿಯು ವಿದ್ಯಾರ್ಥಿಗಳಿಗೆ
* ಪಿಯು ವಿದ್ಯಾರ್ಥಿಗಳಿಗೆ : 900 ರು (ಹುಡುಗ ಹಾಗೂ ಹುಡುಗಿಯರಿಗೆ ಇಬ್ಬರಿಗೂ ಒಂದೇ ದರ)
ಕಾಲೇಜು ವಿದ್ಯಾರ್ಥಿಗಳಿಗೆ:
* 12 ತಿಂಗಳಿಗೆ : 1100 ರು
* 10 ತಿಂಗಳಿಗೆ : 900 ರು
* 5 ತಿಂಗಳಿಗೆ : 450 ರು

ವೃತ್ತಿಪರ ವಿದ್ಯಾರ್ಥಿಗಳಿಗೆ
* 12 ತಿಂಗಳಿಗೆ : 1150 ರು
* 6 ತಿಂಗಳಿಗೆ : 575 ರು

ಹಾಗೂ ಮೆಡಿಕಲ್ ವಿದ್ಯಾರ್ಥಿಗಳಿಗೆ
* 12 ತಿಂಗಳಿಗೆ : 1680 ರು
* 10 ತಿಂಗಳಿಗೆ : 1000 ರು
* 5 ತಿಂಗಳಿಗೆ : 700 ರು

ಸಂಜೆ ಕಾಲೇಜು ವಿದ್ಯಾರ್ಥಿಗಳಿಗೆ
* 12 ತಿಂಗಳಿಗೆ 1480 ರು
* 10 ತಿಂಗಳಿಗೆ : 1200 ರು
* 5 ತಿಂಗಳಿಗೆ : 600 ರು

ಪಾಸ್ ಪಡೆಯುವ ವಿಧಾನ
* ಅರ್ಜಿಯನ್ನು ತುಂಬಿ ನಿಮ್ಮ ವಿದ್ಯಾಸಂಸ್ಥೆ ಮುಖ್ಯಸ್ಥರ ಸಹಿ ಹಾಕಿಸಿ. ಬೋಧನ ಶುಲ್ಕ ರಸೀತಿ ಪಡೆಯಿರಿ
* ಎಲ್ಲಿಂದ ಎಲ್ಲಿಗೆ ಹಾಗೂ ಚೇಂಜ್ ಮಾಡುವುದು ಎಲ್ಲಿ ಸ್ಪಷ್ಟವಾಗಿ ತಿಳಿಸಿ
* ಪ್ರಸಕ್ತ ವರ್ಷದ ಟ್ಯೂಷನ್ ಫೀ ರಸೀತಿ, ಐಡಿ ಕಾರ್ಡ್ ಕಡ್ಡಾಯ
* ಪಾಸ್ ಶುಲ್ಕ ನಗದು ರೂಪದಲ್ಲಿ ಮಾತ್ರ ಸ್ವೀಕೃತ. ಚೆಕ್/ಡಿಡಿ ಸ್ವೀಕರಿಸುವುದಿಲ್ಲ
* ಪಾಸ್ ನವೀಕರಿಸುವಾಗಲು ಇದೇ ವಿಧಾನ ಅನುಸರಿಸಬೇಕು.

ಪಾಸ್ ವಿತರಣೆ ಕೇಂದ್ರ
36 ಕೇಂದ್ರಗಳಲ್ಲಿ ಪಾಸ್ ನೀಡಲಾಗುತ್ತದೆ: ಕೆಂಪೇಗೌಡ ಬಸ್ ನಿಲ್ದಾಣ, ಶಿವಾಜಿನಗರ, ಶಾಂತಿನಗರ, ಇಂದಿರಾನಗರ, ದೊಮ್ಮಲೂರು, ಜೀವನ್ ಭೀಮಾ ನಗರ, ಕೆಆರ್ ಪುರಂ, ಕಲ್ಯಾಣ ನಗರ, ಕಾವಲ್ ಭೈರಸಂದ್ರ, ಬಸವೇಶ್ವರ ನಗರ, ವಿಜಯನಗರ, ಚಂದ್ರಾ ಲೇಔಟ್, ಕುಮಾರಸ್ವಾಮಿ ಲೇಔಟ್, ಕೆಂಗೇರಿ ಟಿಟಿಎಂಸಿ, ಎಂಸಿಟಿಸಿ,
ಹಂಪಿ ನಗರ, ನಂದಿನಿ ಲೇಔಟ್, ನೀಲ ಸಂದ್ರ, ಮತ್ತಿಕೆರೆ, ವಿದ್ಯಾರಣ್ಯಪುರ, ಯಲಹಂಕ 5ನೇ ಹಂತ, ರಾಜಾಜಿನಗರ 1ನೇ ಬ್ಲಾಕ್, ಮಲ್ಲೇಶ್ವರಂ, ಜಯನಗರ, ಚೆನ್ನಮ್ಮನಕೆರೆ ಅಚ್ಚುಕಟ್ಟು, ಬಿಟಿಎಂ ಲೇಔಟ್, ಎಲೆಕ್ಟ್ರಾನಿಕ್ ಸಿಟೀ, ಯಶವಂತಪುರ, ಕಾಡುಗೋಡಿ, ಬನಶಂಕರಿ, ಕೋರಮಂಗಲ, ಕೆಆರ್ ಮಾರುಕಟ್ಟೆ, ಉತ್ತರಹಳ್ಳಿ, ಚಂದಾಪುರ, ಬನ್ನೇರುಘಟ್ಟ











Click it and Unblock the Notifications