ಹೊಸ ಮಾರ್ಗಗಳಲ್ಲಿ ಬಿಎಂಟಿಸಿ ಬಸ್ ಸಂಚಾರ

ಬೆಂಗಳೂರು, ಜೂ.3 : ನಗರದ ಸಂಚಾರ ದಟ್ಟಣೆಯಿಂದ ಮುಕ್ತಿ ಹೊಂದಲು ಬಿಎಂಟಿಸಿ ಹೊಸ ಪ್ರಯತ್ನಕ್ಕೆ ಕೈ ಹಾಕಿದೆ. ಶಾರ್ಟ್ ಟ್ರಿಪ್ ಪ್ರಯೋಗ ನಡೆಸುವ ಮೂಲಕ ಪ್ರಯಾಣದ ಅವಧಿ ಕಡಿಮೆಗೊಳಿಸಲಿದೆ. ನಗರದ ಪ್ರಯಾಣಿಕರಿಗಾಗಿ ನೂತನವಾದ ಕೆಲವ ಮಾರ್ಗಗಳನ್ನು ಪ್ರಾರಂಭಿಸಿದೆ.

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಇದಕ್ಕಾಗಿ 'ಶಾರ್ಟ್‌ ಟ್ರಿಪ್‌' ಯೋಜನೆಯನ್ನು ಶ್ರೀಘ್ರವೇ ಜಾರಿಗೆ ತರಲಿದೆ. ಅತ್ಯಧಿಕ ಸಂಚಾರದಟ್ಟಣೆ ಇರುವ ಸ್ಥಳದಿಂದ ಶಾರ್ಟ್‌ ಟ್ರಿಪ್‌ಗಳನ್ನು ಪರಿಚಯಿಸಿ, ಪ್ರಯಾಣಿಕರಿಗೆ ಸಮಯ ಉಳಿತಾಯದ ಮಾಡುವ ಜೊತೆಗೆ ತನ್ನ ಸೇವಾ ಮಟ್ಟವನ್ನು ಮತ್ತಷ್ಟು ಉತ್ತಮಪಡಿಸಲು ಚಿಂತನೆ ನಡೆಸಿದೆ.

ಪ್ರಾಯೋಗಿಕವಾಗಿ ಈ ಯೋಜನೆ ಮೆಜೆಸ್ಟಿಕ್‌, ಶಾಂತಿನಗರ, ಕೆ.ಆರ್‌. ಮಾರುಕಟ್ಟೆ ಸೇರಿದಂತೆ ಪ್ರಮುಖ ನಿಲ್ದಾಣಗಳಿಂದ ದೂರದ ಮಾರ್ಗಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಗಳಲ್ಲಿ ಅನುಷ್ಠಾನಗೊಳ್ಳಲಿದೆ. ಸಂಚಾರದಟ್ಟಣೆ ಹೆಚ್ಚಿರುವ ಸ್ಥಳಗಳಿಗೆ ಟ್ರಿಪ್‌ಗಳನ್ನು ಸೀಮಿತಗೊಳಿಸಿ, ಅಲ್ಲಿಂದ ಗರಿಷ್ಠ 8ರಿಂದ 10 ಕಿ.ಮೀ. ವ್ಯಾಪ್ತಿಯಲ್ಲಿ ಅಕ್ಕ-ಪಕ್ಕದ ಮಾರ್ಗಗಳಿಗೆ ಪ್ರತ್ಯೇಕ ಬಸ್‌ ಸೇವೆ ಕಲ್ಪಿಸಲು ಉದ್ದೇಶಿಸಿದೆ.

ಜೊತೆಗೆ 16 ನೂತನ ಮಾರ್ಗಗಳನ್ನು ಪರಿಚಯಿಸಿದ್ದು ಈ ಮಾರ್ಗಗಳಲ್ಲಿ ಬಸ್ ಸಂಚಾರ ಮಂಗಳವಾರದಿಂದ ಆರಂಭವಾಗಲಿದೆ. ಹೊಸ ಮಾರ್ಗಗಳಿಂದ ಪ್ರಯಾಣಿಕರಿಗೆ ಹೆಚ್ಚಿನ ಉಪಯೋಗವಾಗಲಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ. ನೂತನ ಮಾರ್ಗಗಳ ಪಟ್ಟಿ ಹೀಗಿದೆ.

ಕೆಂಪೇಗೌಡ ಬಸ್ ನಿಲ್ದಾಣದಿಂದ ನೂತನ ಮಾರ್ಗಗಳು

ಕೆಂಪೇಗೌಡ ಬಸ್ ನಿಲ್ದಾಣದಿಂದ ನೂತನ ಮಾರ್ಗಗಳು

223 ಪಿಎ - ಕೆಂಪೇಗೌಡ ಬಸ್ ನಿಲ್ದಾಣ - ಭವಾನಿನಗರ
250 ಆರ್ ಜಿ - ಕೆಂಪೇಗೌಡ ಬಸ್ ನಿಲ್ದಾಣ - ರಾಘವೇಂದ್ರ ಬಡಾವಣೆ
293 ಎಸ್ - ಕೆಂಪೇಗೌಡ ಬಸ್ ನಿಲ್ದಾಣ - ಬಾಗಲೂರು
228 ಕೆ - ಕೆಂಪೇಗೌಡ ಬಸ್ ನಿಲ್ದಾಣ - ತಿಪ್ಪೂರು

ಯಶವಂತಪುರದಿಂದ ನೂತನ ಮಾರ್ಗ

ಯಶವಂತಪುರದಿಂದ ನೂತನ ಮಾರ್ಗ

356 ಸಿಆರ್ - ಯಶವಂತಪುರ - ಎಲೆಕ್ಟ್ರಾನಿಕ್ ಸಿಟಿ
331ಜಿ - ಯಶವಂತಪುರ - ವೈಟ್ ಫೀಲ್ಡ್

ಕೆಂಗೇರಿ ಕಡೆಯಿಂದ ನೂತನ ಮಾರ್ಗ

ಕೆಂಗೇರಿ ಕಡೆಯಿಂದ ನೂತನ ಮಾರ್ಗ

500 ಕೆಇ - ಕೆಂಗೇರಿ ಹೌಸಿಂಗ್ ಬೋರ್ಡ್ ಬಡಾವಣೆ - ಶ್ರೀ ಸತ್ಯಸಾಯಿ ಆಸ್ಪತ್ರೆ
501 ಜಿಎ - ಅಗರ ಜಂಕ್ಷನ್ - ಕೆಂಗೇರಿ ಟಿಟಿಎಂಸಿ

ಮತ್ತೊಂದು ನೂತನ ಮಾರ್ಗ

ಮತ್ತೊಂದು ನೂತನ ಮಾರ್ಗ

220ಎ - ಕೆ.ಆರ್.ಮಾರುಕಟ್ಟೆ - ಆರ್.ವಿ.ಕಾಲೇಜು
258 - ಬಿಎನ್ - ಕುವೆಂಪು ನಗರ ಬಸ್ ನಿಲ್ದಾಣ - ನೆಲಮಂಗಲ
13 ಎಸ್ - ಜೆಎಸ್ ಬಿಸಿಎಸ್ ಬಡಾವಣೆ - ಸುಲ್ತಾನ್ ಪಾಳ್ಯ

ಕೆಲವು ಹೊಸ ಮಾರ್ಗಗಳು

ಕೆಲವು ಹೊಸ ಮಾರ್ಗಗಳು

507ಎ - ಚಿಕ್ಕಬಾಣಾವರ - ಕೆ.ಆರ್.ಪುರ
500 ಎಲ್ - ಬನಶಂಕರಿ - ಟಿನ್ ಫ್ಯಾಕ್ಟರಿ
238 ಎಸ್ - ಕೆ.ಆರ್.ಮಾರುಕಟ್ಟೆ - ಅನ್ನಪೂರ್ಣೇಶ್ವರಿ ನಗರ
600 ಸಿಎ - ಬನಶಂಕರಿ - ಆನೇಕಲ್
374 ಎನ್ - ತಾವರೆಕೆರೆ - ನೆಲಮಂಗಲ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+