ಟಿಸಿಎಸ್ ಟೆಕ್ಕಿಗಳಿಗೆ ಪಿಂಕ್ ಸ್ಲಿಪ್: ತೀವ್ರ ಪ್ರತಿರೋಧ

ಈ ಬೆಳವಣಿಗಳ ನಂತರ ಟಿಸಿಎಸ್ ತನ್ನ ಫಿನ್ ಲ್ಯಾಂಡ್ ಕೆಲಸ ಕಾರ್ಯಗಳನ್ನು ಬೆಂಗಳೂರಿಗೆ ವರ್ಗಾಯಿಸುವತ್ತಲೂ ಆಲೋಚಿಸುತ್ತಿದೆ ಎಂದು ಮೂಲಗಳು ತಿಳಿಸಿವೆ. TCS-Finland ಕಚೇರಿಯಲ್ಲಿ ಒಟ್ಟು 800 ಮಂದಿ ಉದ್ಯೋಗಿಗಳು ಇದ್ದಾರೆ. ಆದರೆ Union of Professional Engineers in Finland ಕಂಪನಿಯ ಈ ಕ್ರಮಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸಿದೆ.
ಫಿನ್ ಲ್ಯಾಂಡ್ ನಲ್ಲಿ ಕಾರ್ಮಿಕ ಸಂಘಟನೆಗಳು ಬಲಿಷ್ಠವಾಗಿದ್ದು, ಸರಕಾರವೂ ಸಹ ಈ ಸಂಘಟನೆಗಳಿಗೆ ನೀರೆರೆಯುತ್ತಿವೆ. ಹಾಗಾಗಿ ನೌಕರರನ್ನು ಮನೆಗೆ ಕಳಿಸುವ TCS ಪ್ರಯತ್ನಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚಾಗಿದೆ.
TCS - Helsinki Finland ಕಚೇರಿಯಲ್ಲಿ ಮೊನ್ನೆ ಏಪ್ರಿಲ್ ತಿಂಗಳಲ್ಲಿ ಸುಮಾರು 160 ಉದ್ಯೋಗಿಗಳು ಉದ್ಯೋಗ ಕಡಿತಕ್ಕೆ ವಿರೋಧ ವ್ಯಕ್ತಪಡಿಸುತ್ತಾ ವಾಕ್ ಔಟ್ ಪ್ರತಿಭಟನೆ ವ್ಯಕ್ತಪಡಿಸಿದ್ದರು. ಮಾರ್ಚ್ ತಿಂಗಳಲ್ಲಿ ನೋಕಿಯಾ ಕಂಪನಿಯಿಂದ ಈ ಉದ್ಯೋಗಿಗಳು ಹೊರಗುತ್ತಿಗೆ ಆಧಾರದ ಮೇಲೆ ಟಿಸಿಎಸ್ ಕಂಪನಿಗೆ ಸೇರ್ಪಡೆಯಾಗಿದ್ದರು.
ಅಂದಹಾಗೆ ನೋಕಿಯಾ ಕಂಪನಿ ಕ್ಯಾಂಪಸ್ಸಿನಲ್ಲಿಯೇ ಟಿಸಿಎಸ್ ಕಚೇರಿಯಿದೆ. ಇದೇ ವೇಳೆ ನೋಕಿಯಾದ ಇನ್ನೂ 230 ಉದ್ಯೋಗಿಗಳು HCLಗೆ ಸೇರ್ಪಡೆಯಾಗಿದ್ದರು. ಇದರ ಹೊರತಾಗಿ ನೋಕಿಯಾ ನೇರವಾಗಿ ಇನ್ನೂ 300 ಉದ್ಯೋಗಿಗಳನ್ನು ಮನೆಗೆ ಕಳಿಸಿದೆ.
ಇದರ ಹೊರತಾಗಿ TCS ವಿಶ್ವದಾದ್ಯಂತ 45,000 ಮಂದಿ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದಾಗಿ ತಿಳಿಸಿದೆ. 2013ರ ಮಾರ್ಚ್ 31ರ ಅನ್ವಯ TCS ಕಂಪನಿ 2,76,196 ಉದ್ಯೋಗಿಗಳನ್ನು ಹೊಂದಿದೆ.












Click it and Unblock the Notifications