ಲೈಂಗಿಕ ಕಿರುಕುಳ ಆರೋಪಿ ಜಗನ್ನಾಥ್ ಬೆಂಗಳೂರಿಗೆ ವರ್ಗ?

ಎಸಿಪಿ ಜಗನ್ನಾಥ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪದ ಬಗ್ಗೆ 2 ಪ್ರತ್ಯೇಕ ಸಂಸ್ಥೆಗಳಿಂದ ತನಿಖೆ ನಡೆಯುತ್ತಿರುವ ಸಂದರ್ಭದಲ್ಲೇ ಜಗನ್ನಾಥರನ್ನು ಬೆಂಗಳೂರಿಗೆ ವರ್ಗ ಮಾಡಿರುವುದಾಗಿ ವರದಿಯಾಗಿದೆ.
ಪಾಂಡೇಶ್ವರ ಠಾಣೆಯ ಹಿರಿಯ ಎಎಸ್ಸೈ ಶ್ರೀಕಲಾ ಅವರು ಹಿರಿಯ ಅಧಿಕಾರಿ ಜಗನ್ನಾಥ್ ಮಾನಸಿಕವಾಗಿ ಮತ್ತು ಲೈಂಗಿಕವಾಗಿ ನನಗೆ ಕಿರುಕುಳ ನೀಡುತ್ತಿದ್ದಾರೆ. ಜತೆಗೆ ನನಗೆ ರಜೆ ನೀಡುತ್ತಿಲ್ಲ. ನನಗೆ ಕೆಲಸ ಮಾಡಲು ಸಾಧ್ಯವಾಗದಂತಹ ವಾತಾವರಣ ಎದುರಿಸುತ್ತಿದ್ದೇನೆ ಎಂದು ಮಂಗಳೂರು ಪೊಲೀಸ್ ಆಯುಕ್ತ ಮನೀಶ್ ಕರ್ಬೀಕರ್ ಅವರಿಗೆ ದೂರು ನೀಡಿದ್ದರು.
ಈ ಮಧ್ಯೆ, ಅನೇಕ ಸಂಘ ಸಂಸ್ಥೆಗಳು ಆರೋಪಿ ಎಸಿಪಿ ವಿರುದ್ಧ ಪ್ರತಿಭಟನೆ, ಧರಣಿಗಳನ್ನು ನಡೆಸಿ ಅವರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದ್ದವು. ಇದೇ ವೇಳೆ, ದೂರು ವಾಪಸ್ ಪಡೆಯುವಂತೆ ಶ್ರೀಕಲಾ ಮೇಲೆ ಒತ್ತಡ ಹೇರಲಾಗಿತ್ತು. ಅಲ್ಲದೆ ಅವರ ವಿರುದ್ಧ ವಂಚನೆ ಪ್ರಕರಣ ದಾಖಲಿಸಲಾಗಿತ್ತು.












Click it and Unblock the Notifications