'ಇಡಿ' ಪಾಲಾದ ಜಗನ್ ಮಾಧ್ಯಮ ಸಂಸ್ಥೆ ಆಸ್ತಿ

ಹೈದರಾಬಾದ್, ಜೂ.1: ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ವೈಎಸ್ಸಾರ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರಿಗೆ ಜಾರಿ ನಿರ್ದೇಶನಾಲಯ ಮತ್ತೊಮ್ಮೆ ಶಾಕ್ ನೀಡಿದೆ. ಜಗನ್ ಗೆ ಸೇರಿದ ಮಾಧ್ಯಮ ಸಂಸ್ಥೆಗಳ ಆಸ್ತಿ ಪಾಸ್ತಿ ಮುಟ್ಟುಗೋಲು ಪ್ರಕ್ರಿಯೆಯನ್ನು ಶುಕ್ರವಾರದಿಂದ ಜಾರಿ ನಿರ್ದೇಶನಾಲಯ(ಇಡಿ) ಆರಂಭಿಸಿದೆ.

ಜಗನ್ ಅವರ ಒಡೆತನದ ಸಾಕ್ಷಿ ಸಂಸ್ಥೆಗೆ ಸೇರಿದ 34.66 ಕೋಟಿ ರು ಗಳನ್ನು ಇಡಿ ವಶಪಡಿಸಿಕೊಂಡಿದೆ. ಜುಬುಲಿ ಹಿಲ್ಸ್ ನಲ್ಲಿರುವ ಓರಿಯಂಟಲ್ ಬ್ಯಾಂಕ್ ಆಫ್ ಕಾಮರ್ಸ್ ನಲ್ಲಿದ್ದ 34.66 ಕೋಟಿ ರು ಠೇವಣಿಯನ್ನು ಇಡಿ ವಶಕ್ಕೆ ತೆಗೆದುಕೊಂಡಿದೆ.

ಜಗತಿ ಪಬ್ಲಿಕೇಷನ್ ನಲಿ ದಂಡಮೂಡಿ, ಟಿ.ಆರ್ ಕನ್ನನ್, ಮಾಧವ್ ರಾಮಚಂದ್ರನ್ ಅವರು ಅಕ್ರಮವಾಗಿ ಬಂಡವಾಳ ಹೂಡಿಕೆ ಮಾಡಿದ್ದಾರೆ ಎಂದು ಇಡಿ ಆರೋಪಿಸಿದೆ. ಈ ಹಿಂದೆ ಜಗನ್ ಅವರ ಆಸ್ತಿಯನ್ನು ಮೂರು ಬಾರಿ ಇಡಿ ವಶಕ್ಕೆ ಪಡೆದುಕೊಂಡಿತ್ತು. ಒಮ್ಮೆ 51 ಕೋಟಿ ರು, ಇನ್ನೊಮ್ಮೆ 71 ಕೋಟಿ ಹಾಗೂ 143.74 ಕೋಟಿ ರು ಆಸ್ತಿಯನ್ನು ಜಪ್ತಿ ಮಾಡಿಕೊಂಡಿತ್ತು.

ED freezes Rs 34 cr in FDs of Jagan media firm

ಒಟ್ಟ್ಟು ನಾಲ್ಕು ಬಾರಿ ಆಸ್ತಿ ಮುಟ್ಟುಗೋಲು ಆದೇಶ ಹೊರಬಿದ್ದಿದೆ. ಸುಮಾರು 300 ಕೋಟಿ ರು.ಗೂ ಅಧಿಕ ಮೊತ್ತದ ಆಸ್ತಿ ಪಾಸ್ತಿಯನ್ನು ಇಡಿ ಹಾಗೂ ಸಿಬಿಐ ವಶಕ್ಕೆ ತೆಗೆದುಕೊಂಡಿದೆ.

ಸಾಕ್ಷಿ ಪತ್ರಿಕೆ ಬ್ಯಾಂಕ್ ಖಾತೆ ಸ್ಥಗಿತಗೊಳಿಸಿರುವುದನ್ನು ಆಂಧ್ರಪ್ರದೇಶ ಪತ್ರಕರ್ತರ ಒಕ್ಕೂಟ ಖಂಡಿಸಿತ್ತು. ಸಾಕ್ಷಿ ಪತ್ರಿಕೆಗೆ ಸರ್ಕಾರಿ ಜಾಹೀರಾತುಗಳನ್ನು ನೀಡುವುದನ್ನು ನಿಲ್ಲಿಸಿರುವುದನ್ನು ಸಹ ಒಕ್ಕೂಟ ವಿರೋಧಿಸಿತ್ತು.

ಇದು ಪತ್ರಿಕಾ ಸ್ವಾತಂತ್ರ್ಯದ ಮೇಲಿನ ಆಕ್ರಮಣ. ದೇಶದ್ರೋಹ, ಕಾನೂನುಬಾಹಿರ ಚಟುವಟಿಕೆಗಳಲ್ಲಿ ಸಂಸ್ಥೆ ತೊಡಗಿಲ್ಲ. ಪತ್ರಿಕೆ ಪ್ರತಿದಿನ ಸುಮಾರು 15 ದಶಲಕ್ಷ ಮನೆಗಳು ತಲುಪುತ್ತದೆ. ಒಂದು ಮಾಧ್ಯಮ ಸಂಸ್ಥೆ ಗುರಿಯಾಗಿಸುವುದು ತಪ್ಪು.

ಇದು ಪ್ರಜಾಪ್ರಭುತ್ವದ ಚರಿತ್ರೆಯಲ್ಲಿ ಕಪ್ಪು ದಿನ ಎಂದು ಸಾಕ್ಷಿ ಪತ್ರಿಕೆ ಫೇಸ್ ಬುಕ್ ಸೇರಿದಂತೆ ಹಲವು ಸಾಮಾಜಿಕ ಜಾಲ ತಾಣಗಳಲ್ಲಿ ಪ್ರತಿಭಟನೆ ನಡೆಸಿತ್ತು. Support Sakshi - Save Democracy ಅಭಿಯಾನಕ್ಕೆ ಫೇಸ್ ಬುಕ್ ನಲ್ಲಿ 10,816ಕ್ಕೂ ಅಧಿಕ ಹಿಂಬಾಲಕರಿದ್ದಾರೆ.

ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಜೈಲುವಾಸ ಅನುಭವಿಸುತ್ತಿರುವ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಜಗನ್ ಮೋಹನ್ ರೆಡ್ಡಿ ಅವರು ಇತ್ತೀಚೆಗೆ ಒಂದು ವರ್ಷ ಅವಧಿಯ ಜೈಲುವಾಸ ಅನುಭವಿಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ, ಅಧಿಕಾರ ದುರ್ಬಳಕೆ, ವಂಚನೆ ಹಾಗೂ ಮನಿಲಾಂಡ್ರಿಂಗ್ ಸೇರಿದಂತೆ ಅನೇಕ ಆರೋಪಗಳು ಜಗನ್ ಮೇಲಿದೆ.

ಜಗನ್ ಮೇಲಿನ ಕೇಸುಗಳನ್ನು ನಾಲ್ಕು ತಿಂಗಳಿನಲ್ಲಿ ಮುಕ್ತಾಯಗೊಳಿಸುವಂತೆ ಸಿಬಿಐ ತಂಡಕ್ಕೆ ಸುಪ್ರೀಂಕೊರ್ಟ್ ಗುರುವಾರ(ಮೇ.9, 2013) ಆದೇಶಿಸಿತ್ತು.

ಜಗನ್ ಒಡೆತನದ ಫಾರ್ಮಾ ಕಂಪನಿಗಳ ಕುರಿತಾದ ಮಹತ್ವದ ದಾಖಲೆಗಳನ್ನು ಸಿಬಿಐ ಒಟ್ಟುಗೂಡಿಸಿದ್ದು, ಪೂರಕ ದೋಷಾರೋಪಣ ಪಟ್ಟಿ ಸಲ್ಲಿಸಲು ಮುಂದಾಗಿದೆ. ಈವರೆಗೂ ಒಟ್ಟು ನಾಲ್ಕು ಚಾರ್ಚ್ ಶೀಟ್ ಸಲ್ಲಿಸಲಾಗಿದೆ. ಭ್ರಷ್ಟಾಚಾರ, ಅಕ್ರಮ ಆಸ್ತಿ ಗಳಿಕೆ ಆರೋಪದ ಮೇಲೆ ಮೇ27, 2012ರಂದು ಜಗನ್ ಅವರನ್ನು ಬಂಧಿಸಲಾಗಿತ್ತು.

ಬಾಕಿ ಉಳಿದಿರುವ 7 ಪ್ರಕರಣಗಳ ಮೊತ್ತ ಸುಮಾರು 3000 ಕೋಟಿ ರು ದಾಟುತ್ತದೆ ಎಂದು ಸಿಬಿಐ ಹೇಳಿದೆ. ಹಾಗಾದರೆ ಸಮಸ್ತ ಆಸ್ತಿ ಲೆಕ್ಕಾಚಾರ ಇನ್ನೂ ಬಹಿರಂಗಗೊಂಡಿಲ್ಲ. ಹೀಗಾಗಿ ತನಿಖೆ ಬಾಕಿ ಇರುವುದರಿಂದ ಜಗನ್ ಗೆ ಬೇಲ್ ಸಿಗುವುದು ಕಷ್ಟಕರವಾಗಿದೆ. ಸುಮಾರು 7 ಪ್ರಕರಣಗಳಲ್ಲಿ ಸೇರಿಸಿ ಚಾರ್ಚ್ ಶೀಟ್ ಹಾಕಬೇಕಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+