ನಂದಿನಿ ಬ್ಲ್ಯೂ ಹಾಲು ಅರ್ಧ ಲೀಟರಿಗೆ 50 ಪೈಸೆ ಹೆಚ್ಚು

KMF
ಬೆಂಗಳೂರು, ಮೇ 30 : ಚಿಲ್ಲರೆ ಸಮಸ್ಯೆ ಬಗೆಹರಿಸಲು ಕೆಎಂಎಫ್ ಅರ್ಧ ಲೀಟರ್ ಬ್ಲೂ ನಂದಿನ ಹಾಲಿನ ಬೆಲೆಯನ್ನು ಐವತ್ತು ಪೈಸೆ ಹೆಚ್ಚಳ ಮಾಡಲು ನಿರ್ಧರಿಸಿದೆ. ದರ ಹೆಚ್ಚಳಕ್ಕೆ ಅನುಗುಣವಾಗಿ 20 ಎಂಎಲ್ ಹೆಚ್ಚಿನ ಹಾಲು ನೀಡಲಾಗುವುದು ಎಂದು ಕೆಎಂಎಫ್ ತೀರ್ಮಾನಿಸಿದೆ. ಜೂನ್ 1ರಿಂದ ನೂತನ ದರ ಅನ್ವಯವಾಗಲಿದೆ.

ನಂದಿನ ಬ್ಲೂ ಅರ್ಧ ಲೀಟರ್ ಹಾಲಿನ ಬೆಲೆ ಸದ್ಯ 13.50 ಪೈಸೆ ಇದೆ. ಗ್ರಾಹಕರಿಗೆ ಚಿಲ್ಲರೆ ನೀಡಲು ಸಾಧ್ಯವಾಗುತ್ತಿಲ್ಲ ಹಾಗೂ ಡೀಲರ್ ಗಳು ಸರಿಯಾರಿ ಕೆಎಂಎಫ್ ಗೆ ಲೆಕ್ಕ ನೀಡುತ್ತಿಲ್ಲ ಇದರಿಂದ ಸಂಸ್ಥೆಗೆ ನಷ್ಟ ಉಂಟಾಗುತ್ತಿದ್ದು, ದರ ಹೆಚ್ಚಿಸುವ ಮೂಲಕ ಚಿಲ್ಲರೆ ಸಮಸ್ಯೆ ಬಗೆಹರಿಸುವುದಾಗಿ ಕೆಎಂಎಫ್ ಪ್ರಕಟಣೆಯಲ್ಲಿ ತಿಳಿಸಿದೆ.

ಇದರ ಅನ್ವಯ ಜೂನ್ 1ರಿಂದ ನೂತನ ದರ ಜಾರಿಯಾಗಲಿದ್ದು, ಅರ್ಧ ಲೀಟರ್ ಬ್ಲೂ ಹಾಲು 14 ರೂಪಾಯಿ ಆಗಲಿದೆ. ಐವತ್ತು ಪೈಸೆ ದರ ಹೆಚ್ಚಿಸಿರುವುದರಿಂದ 20 ಎಂಎಲ್ ಹಾಲು ಹೆಚ್ಚಿಗೆ ನೀಡಲಿದೆ. ಆದ್ದರಿಂದ 520 ಎಂಎಲ್ ಹಾಲು ಗ್ರಾಹಕರಿಗೆ ದೊರೆಯಲಿದೆ.

ಹೆಚ್ಚಿನ ಹಾಲು ನೀಡುತ್ತಿರುವುದರಿಂದ ಗ್ರಾಹಕರು ದರ ಹೆಚ್ಚಳದ ಬಿಸಿ ತಟ್ಟುವುದಿಲ್ಲ ಎಂಬುದು ಕೆಎಂಎಫ್ ನಂಬಿಕೆ. ಜೂನ್ 1ರಿಂದ ಅರ್ಧ ಲೀಟರ್ ಹಾಲು ಖರೀದಿಸುವಾಗ 14 ರೂಪಾಯಿ ತೆಗೆದುಕೊಂಡು ಹೋಗಲು ಮರೆಯಬೇಡಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+