ಸೌದಿ ಅರೇಬಿಯಾ : ಭಾರತೀಯ ವಿದ್ಯಾರ್ಥಿ ಆತ್ಮಹತ್ಯೆ

ಹೈದರಾಬಾದ್ ಮೂಲದವನಾದ ಮಿರ್ ಅಮೀರ್ ಅನ್ಸಾರಿ (18) ಸೌದಿ ಅರೇಬಿಯಾದ ಪಶ್ಚಿಮ ಭಾಗದ, ದಮಾಮ್ ಪ್ರದೇಶದ ಮನೆಯಲ್ಲಿ ಅನ್ಸಾರಿ ನೇಣಿಗೆ ಶರಣಾಗಿದ್ದಾರೆ ಎಂದು ಸ್ಥಳೀಯ ವಾಹಿನಿಗಳು ವರದಿ ಮಾಡಿವೆ.
ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಆದರೆ, ಸೋಮವಾರ ಪ್ರಕಟವಾದ ಸಿಬಿಎಸ್ ಇ ಫಲಿತಾಂಶದಲ್ಲಿ ಅನ್ಸಾರಿ ಗಣಿತ ವಿಷಯದಲ್ಲಿ ಫೇಲ್ ಆಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ದಮಾಮ್ ಸೆಂಟ್ರಲ್ ಆಸ್ಪತ್ರೆಯಲ್ಲಿ ಅನ್ಸಾರಿ ಶವವನ್ನು ಇಡಲಾಗಿದೆ.
ಅನ್ಸಾರಿ ಸಾವಿಗೆ ಸೌದಿಯಲ್ಲಿ ನೆಲೆಸಿರುವ ಭಾರತೀಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಕುಟುಂಬದವರಿಗೆ ದುಖಃ ತಡೆದುಕೊಳ್ಳುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದ್ದಾರೆ. ಹೈದರಾಬಾದ್ ನಲ್ಲಿರುವ ಅನ್ಸಾರಿ ಪೋಷಕರು ಸುದ್ದಿ ತಿಳಿದು ಆತಂಕಗೊಂಡಿದ್ದಾರೆ.
ಒಳ್ಳೆಯ ಅಂಕ : ಅನ್ಸಾರಿ ಚೆನ್ನಾಗಿ ಓದುತ್ತಿದ್ದ ಸಿಬಿಎಸ್ ಇ ಪರೀಕ್ಷೆಯಲ್ಲಿ ಇಂಗ್ಲಿಷ್ ವಿಷಯದಲ್ಲಿ 73 ಅಂಕ ಗಳಿಸಿದ್ದ. ಆದರೆ, ಗಣಿತ ವಿಷಯದಲ್ಲಿ 100ಕ್ಕೆ ಕೇವಲ 17 ಅಂಕಗಳಿಸಿದ್ದ. ಆದ್ದರಿಂದ ಮನನೊಂದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಪೊಲೀಸರು ಪ್ರಾಥಮಿಕ ತನಿಖೆ ಮೂಲಕ ತಿಳಿಸಿದ್ದಾರೆ. (ಸಿ.ಬಿ.ಎಸ್.ಇ ಫಲಿತಾಂಶ ಪ್ರಕಟ)
ಹೈದರಾಬಾದ್ ನಲ್ಲಿರುವ ರಾಯಭಾರಿ ಕಚೇರಿ ಸಂಪರ್ಕಿಸಿರುವ ಅನ್ಸಾರಿ ಕುಟುಂಬದವರು ಮೃತದೇಹವನ್ನು ತರಿಸಲು ಸಹಾಯಮಾಡುವಂತೆ ಮನವಿ ಮಾಡಿದ್ದಾರೆ. ಸೌದಿ ಅರೇಬಿಯಾದಲ್ಲಿರುವ ರಾಯಭಾರಿ ಕಚೇರಿ ಜೊತೆ ಮಾತುಕತೆಡ ನಡೆಸಿರುವ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಿದ್ದಾರೆ.












Click it and Unblock the Notifications