ಶಿಕ್ಷಕನನ್ನು ಬೆಂಕಿಗೆ ಹಾಕಿ ಸುಟ್ಟ ಸಹ ಶಿಕ್ಷಕರು

ಪೊರ್ನಿಯಾ ಜಿಲ್ಲೆಯ ಮಾರಾಂಗ ಪೊಲೀಸ್ ಠಾಣೆ ವ್ಯಾಪ್ತಿಯ ಶಾಲೆಯೊಂದರಲ್ಲಿ ಪ್ರಿನ್ಸಿಪಾಲ್ ಹಾಗೂ ಶಿಕ್ಷಕರು ತಮ್ಮ ಸಹೋದ್ಯೋಗಿ ರಂಜಿತ್ ಕುಮಾರ್ (40) ಅವರನ್ನು ಶೌಚಾಲಯಕ್ಕೆ ಎಳೆದೊಯ್ದು, ಕೈ-ಕಾಲು ಕಟ್ಟಿ, ಅವರ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿತೆಂದು ಸ್ಥಳೀಯರು ನೀಡಿದ ಮಾಹಿತಿಯನ್ನಾಧರಿಸಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕಿಮ್ ತಿಳಿಸಿದ್ದಾರೆ.
ಸೋಮವಾರ ಬೆಳಗ್ಗೆ ವಿದ್ಯಾರ್ಥಿಗಳು ಶಾಲೆಗೆ ಆಗಮಿಸುವ ಮುನ್ನವೇ ಈ ಬರ್ಬರ ಘಟನೆ ನಡೆದಿರುವುದಾಗಿ ಅವರು ಹೇಳಿದ್ದಾರೆ. ಜೀವಂತವಾಗಿ ದಹಿಸಲ್ಪಟ್ಟ ಶಿಕ್ಷಕನ ಆಕ್ರಂದನ ಕೇಳಿದ ನೆರೆಹೊರೆಯವರು ಸ್ಥಳಕ್ಕೆ ಧಾವಿಸಿ, ಅತನನ್ನು ರಕ್ಷಿಸಿ ಕಟಿಹಾರ್ ಜಿಲ್ಲಾಸ್ಪತ್ರೆಗೆ ಕೊಂಡೊಯ್ದರು. ಆದರೆ ಗಂಭೀರ ಸುಟ್ಟಗಾಯಗಳಿಂದ ಶಿಕ್ಷಕ ರಂಜಿತ್ ಕೊನೆಯುಸಿರೆಳೆದರೆಂದು ಎಸ್‌ಪಿ ಕಿಮ್ ತಿಳಿಸಿದ್ದಾರೆ.
ಈ ಘಟನೆಗೆ ಕಾರಣವೇನೆಂಬುದು ಇನ್ನೂ ತಿಳಿದುಬಂದಿಲ್ಲ. ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಶೋಧ ಕಾರ್ಯವನ್ನು ನಡೆಸಿದ್ದಾರೆ.












Click it and Unblock the Notifications