ಅಧಿವೇಶನ: ಕುಮಾರಸ್ವಾಮಿಗೆ 3 ದಿನ ಬಲವಂತದ ರಜೆ

ಪರಿಸ್ಥಿತಿ ಹೀಗಿರುವಾಗ ಎಚ್‌ಡಿಕೆ 3 ದಿನ ಬಲವಂತದ ರಜೆಯಲ್ಲಿದ್ದಾರಂತೆ ಎಂಬ ಮಾತು ವಿಧಾನಸಭೆ ಮೊಗಸಾಲೆಯಿಂದ ಕೇಳಿಬಂದಿದೆ. ಬಿಜೆಪಿ ಮತ್ತು ಜೆಡಿಎಸ್ ಫಾರ್ಟಿ-ಫಾರ್ಟಿ 40 ಸ್ಥಾನ ಗಳಿಸಿ, ಟೈ ಆಗಿವೆ.
ಆದರೆ ಹಿಂದಿನ ಆಚರಣೆಯಂತೆ ಮತ ಗಳಿಕೆ ಪ್ರಮಾಣದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿರುವುದರಿಂದ ಜೆಡಿಎಸ್ ಪಕ್ಷದ ಶಾಸಕಾಂಗ ನಾಯಕನಿಗೆ ಪ್ರತಿಪಕ್ಷ ನಾಯಕ ಸ್ಥಾನ ಪ್ರಾಪ್ತಿಯಾಗಿದೆ. JDSಗೆ 62,69,907 (20.09%) ಮತ ಬಿದ್ದಿದ್ದರೆ BJPಗೆ 62,32,597 (19.97%) ಮತ ದಕ್ಕಿದೆ.
ರಾಮನಗರ ಕ್ಷೇತ್ರದಿಂದ ವಿಧಾಸನಭೆಗೆ ಆರಿಸಿ ಬಂದಿರುವ ಎಚ್‌ಡಿ ಕುಮಾರಸ್ವಾಮಿ ಅವರು ಹತ್ತು ದಿನಗಳ ಹಿಂದೆಯೇ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕನಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದರು. ಆದರೂ ಮೊದಲ ದಿನ ಕುಮಾರಸ್ವಾಮಿ ಗೈರು ಹಾಜರಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ.
ಮೂಲಕ ಪ್ರಕಾರ ಕುಮಾರಸ್ವಾಮಿ ಅವರು ಇನ್ನೂ 3 ದಿನ ಕಾಲ ಅಧಿವೇಶನದಲ್ಲಿ ಪಾಲ್ಗೊಳ್ಳುವುದಿಲ್ಲ. ಏಕೆಂದರೆ, ಒಂದು ವೇಳೆ ನಾಳಿದ್ದು ಶುಕ್ರವಾರ ಪಿರಿಯಾಪಟ್ಟಣ ವಿಧಾಸನಭಾ ಕ್ಷೇತ್ರದ ಚುನಾವಣಾ ಫಲಿತಾಂಶ ಹೊರಬಿದ್ದು ಅದರಲ್ಲಿ ಬಿಜೆಪಿ ಅಭ್ಯರ್ಥಿ ಜಯಶಾಲಿಯಾದರೆ ತಾವು ತೀವ್ರ ಮುಜುಗರಕ್ಕೀಡಾಗಬೇಕಾಗುತ್ತದೆ ಎಂದು ಆಲೋಚಿಸಿರುವ ಎಚ್‌ಡಿಕೆ ಅದರಿಂದ ಪಾರಾಗಲು ಮೂರು ದಿನ ವಿಧಾನಸೌಧದತ್ತ ತಲೆಹಾಕದಿರಲು ನಿರ್ಧರಿಸಿದ್ದಾರೆ.












Click it and Unblock the Notifications