ಈ ಬಾರಿ ಪೆಟ್ರೋಲ್ ಬೆಲೆ ಹೆಚ್ಚಳ: ಯಾಕೆ ಗೊತ್ತಾ?

ಆದರೆ ಈ ಬಾರಿ ಪೆಟ್ರೋಲ್ ವಿತರಣೆ ಕಂಪನಿಗಳು ಬೆಲೆ ಹೆಚ್ಚಿಸುತ್ತಿಲ್ಲ. ಬದಲಿಗೆ ಕೆಂದ್ರ ಸರಕಾರ ಹೊಸ ಕ್ರಮವೊಂದನ್ನು ಅಳವಡಿಸಲು ನಿರ್ಧರಿಸಿರುವುದರಿಂದ ಬೆಲೆ ಏರಿಕೆ ಅನಿವಾರ್ಯ ಎಂಬಂತಾಗಿದೆ.
ಏನಪ್ಪಾ ಅಂದರೆ ಇಂಧನದ ಜತೆಗೆ ಶೇ. 5ರಷ್ಟು ಎಥೆನಾಲ್ ಮಿಶ್ರಣ ಮಾಡಿ ಮಾರಾಟ ಮಾಡಬೇಕಾಗಿದೆ. ಇದರಿಂದ ಪೆಟ್ರೋಲ್ ವಿತರಣೆ ಕಂಪನಿಗಳು ಹೆಚ್ಚುವರಿ ವೆಚ್ಚ ಭರಿಸಬೇಕಾಗಿದ್ದು, ಅದನ್ನು ನೇರವಾಗಿ ಗ್ರಾಹಕರ ಮೇಲೆ ಹೊರಿಸಲು ಕಂಪನಿಗಳು ನಿರ್ಧರಿಸಿವೆ. ಇದು ಜೂನ್ 1ರಿಂದಲೇ ಜಾರಿಗೆ ಬರಲಿದೆ. ಏಕೆಂದರೆ ಕಳೆದ ನವೆಂಬರಿನಲ್ಲಿಯೇ ಕೇಂದ್ರವು ಈ ಸಂಬಂಧ ನಿರ್ಧಾರ ತೆಗೆದುಕೊಂಡಾಗಿದೆ.
ಈ ಒಂದು ಬಾಬತ್ತಿನಿಂದಲೇ ಪೆಟ್ರೋಲ್ ಬೆಲೆ ಏಕ್ದಂ 5 ರೂ ಏರಲಿದೆ. ಗಮನಿಸಿ. ಇದರ ಜತೆಗೆ ಕಂಪನಿಗಳು ಜೂನ್ 1ಕ್ಕೆ ಅನ್ವಯವಾಗುವಂತೆ ಇಂಧನ ಧನ ನಿಷ್ಕರ್ಶೆ ಮಾಡಬೇಕಾಗಿದೆ. ಆ ಬಾಬತ್ತಿನಲ್ಲೂ ಪೆಟ್ರೋಲ್ ಬೆಲೆ ಏರಿದರೆ (ಅಂದಾಜು 2 ರೂ ಏರುವ ಸಾಧ್ಯತೆಯಿದೆ) ಆ ಭಗವಂತನೇ ಕಾಪಾಡಬೇಕು ಶ್ರೀಸಾಮಾನ್ಯನನ್ನು!
ಎಥನಾಲ್ ಫ್ಯಾಕ್ಟರ್: ಪೆಟ್ರೋಲ್ ಆಮದು ಪ್ರಮಾಣವನ್ನು ಕಡಿಮೆ ಮಾಡಿಕೊಳ್ಳಲು ಕೇಂದ್ರ ಸರಕಾರವು ಕಬ್ಬಿನ ಉಪ ಉತ್ಪನ್ನವಾದ ಎಥೆನಾಲ್ ಬಳಕೆಯ ಮಾರ್ಗವನ್ನು ಕಂಡುಕೊಂಡಿದೆ. ಇದಕ್ಕೆ ಪರಿಸರ-ಸ್ನೇಹಿ ಎಂಬ ಟ್ಯಾಗ್ ಸಹ ಅಂಟಿಕೊಂಡಿದೆ. ಶೇ. 5ರಷ್ಟು ಎಥೆನಾಲ್ ಮಿಶ್ರಣದ ಪೆಟ್ರೋಲ್ ಉರಿಸುವುದರಿಂದ ಶೇ. 15ರಷ್ಟು ಕಾರ್ಬನ್ ಡೈ ಆಕ್ಸೈಡ್ ಮತ್ತು ಕಾರ್ಬನ್ ಮೋನಾಕ್ಸೈಡ್ ಹೊರಸೂಸುವುದು ತಗ್ಗುತ್ತದೆ.












Click it and Unblock the Notifications