ಪತ್ನಿ ಆತ್ಮಹತ್ಯೆಯನ್ನು ವೆಬ್‌ಕ್ಯಾಮ್‌ನಲ್ಲಿ ಕಂಡ ಪತಿ!

ಇಂತಹ ಧಾರುಣ ಘಟನೆ ಮುಂಬೈನ ವಿಲೆ ಪಾರ್ಲೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ತಮ್ಮ ವಿವಾಹಕ್ಕೆ ಪತಿಯ ಮನೆಯವರು ಒಪ್ಪಿಗೆ ನೀಡಿಲ್ಲ ಎಂಬುದು ಆತ್ಮಹತ್ಯೆಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ ಪತಿ ಕಚೇರಿಯಿಂದ ಪತ್ನಿಯೊಂದಿಗೆ ವೆಬ್‌ಕ್ಯಾಮ್ ಮೂಲಕ ಚಾಟ್ ಮಾಡುತ್ತಿದ್ದಾನೆ. ತಮ್ಮ ಮದುವೆಗೆ ಮನೆಯ ಹಿರಿಯರು ಒಪ್ಪಿಗೆ ನೀಡಿಲ್ಲ.
ನಿನ್ನನ್ನು ಮನೆಗೆ ಸೇರಿಸಿಕೊಳ್ಳಬೇಕಾದರೆ 20 ಲಕ್ಷ ವರದಕ್ಷಿಣೆ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದಾರೆ ಎಂದು ಮನೆಯ ಘಟಾನಾವಳಿಗಳನ್ನು ಪತ್ನಿಗೆ ವಿವರಿಸಿದ್ದಾನೆ. ಇದರಿಂದ ನೊಂದ ಪತ್ನಿ ಚಾಟ್ ಮಾಡುತ್ತಲೇ ಫ್ಯಾನಿಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಪತ್ನಿ ನೇಣಿಗೆ ಶರಣಾಗುವುದನ್ನು ನೋಡಿದ ಪತಿ, ಆಕೆಯ ಮನೆಯವರಿಗೆ ಕರೆ ಮಾಡಿ ಅವಳನ್ನು ಬದುಕಿಸುವಂತೆ ಮನವಿ ಮಾಡಿದ್ದಾನೆ. ಆದರೆ, ಆಕೆಯ ಮನೆಯವರು ಸ್ಥಳಕ್ಕೆ ಬರುವ ವೇಳೆಗಾಗಲೇ ಪತ್ನಿಯ ಪ್ರಾಣ ಪಕ್ಷಿ ಹಾರಿಹೋಗಿತ್ತು. ಪತ್ನಿ ಕಣ್ಣೆದುರೇ ಸಾಯುತ್ತಿದ್ದರು ಅಸಹಾಯನಾಗಿ ಕೂರುವಂತಹ ಸ್ಥಿತಿ ಪತಿಗೆ ಬಂದೊದಗಿತ್ತು.
ಪ್ರೀತಿಸಿ ವಿವಾಹವಾಗಿದ್ದರು : ಪರಸ್ಪರ ಪ್ರೀತಿಸುತ್ತಿದ್ದ ಇವರಿಬ್ಬರು ಕೆಲವು ದಿನಗಳ ಹಿಂದೆ ರಿಜಿಸ್ಟಾರ್ ಕಚೇರಿಯಲ್ಲಿ ವಿವಾಹವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಆದರೆ, ಪತಿಯ ಮನೆಯವರಿಗೆ ಈ ಮದುವೆ ಇಷ್ಟವಿರಲಿಲ್ಲ. ಆದ್ದರಿಂದ ಸೊಸೆಯನ್ನು ಮನೆಗೆ ಸೇರಿಸಿರಲಿಲ್ಲ.
ಅಲ್ಲದೇ ಹಣವೇ ಮುಖ್ಯ ಎಂದು ಕೊಂಡಿದ್ದ ಪತಿ ಮನೆಯವರು 20 ಲಕ್ಷ ವರದಕ್ಷಿಣೆ ತಂದರೆ, ಆಕೆಯನ್ನು ಮನೆಗೆ ಸೇರಿಸುವುದಾಗಿ ಹೇಳಿದ್ದರು. ಈ ವಿಚಾರವಾಗಿ ಪತಿ ಮತ್ತು ಪತ್ನಿ ಮಧ್ಯೆ ವೈ ಮನಸ್ಸು ಉಂಟಾಗಿ ಪತ್ನಿ ನೇಣಿಗೆ ಶರಣಾಗಿದ್ದಾಳೆ.












Click it and Unblock the Notifications