ಅತ್ಯಾಚಾರ ಆರೋಪ : ಬಿಜೆಪಿ ಮುಖಂಡ ಬಂಧನ

ರಿತೇಶ್ ಚಾಂಡಿವಾಲಾ ಮತ್ತು ಆತನ ಸ್ನೇಹಿತರಾದ ಜಿತು, ಶೆರು ಮತ್ತು ಸಂದೀಪ್ ಮೇ 19ರಂದು ನನ್ನ ಮೇಲೆ ಅತ್ಯಾಚಾರ ನಡೆಸಿದ್ದಾರೆ ಎಂದು ಯವತಿ ಪೊಲೀಸರಿಗೆ ದೂರು ನೀಡಿದ್ದಾಳೆ. ಅತ್ಯಾಚಾರ ಪ್ರಕರಣದ ಬಗ್ಗೆ ಯಾರಿಗಾದರೂ ಹೇಳಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಯುವತಿ ದೂರಿದ್ದಾಳೆ.
ಬದ್ನಾಗರ್ ಪ್ರದೇಶದ ಬಿಜೆಪಿ ಮುಖಂಡರ ಪುತ್ರಿಯಾದ ಈಕೆ ಮೇ 19ರಂದು ರಾತ್ರಿ ಮನೆಗೆ ಹೋಗುವ ಸಂದರ್ಭದಲ್ಲಿ ರಿತೇಶ್ ಚಾಂಡಿವಾಲಾ ಮತ್ತು ಆತನ ಸ್ನೇಹಿತರು ಆಕೆಯ ಮೇಲೆ ಅತ್ಯಾಚಾರ ನಡೆಸಿದ್ದಾರೆ.
ನಂತರ ಆಕೆಯನ್ನು ಅಪಹರಿಸಿ ಮನೆಯೊಂದರಲ್ಲಿ ಕೂಡಿಹಾಕಿ ನಿರಂತರವಾಗಿ ಅತ್ಯಾಚಾರವೆಸಗಿದ್ದಾರೆ. ಎರಡು ದಿನಗಳ ಬಳಿಕ ಬಿಡುಗಡೆಗೊಳಿಸಿ ಸಂಬಂಧಿಕರ ಮನೆಗೆ ಬಿಟ್ಟು ಬಂದಿದ್ದಾರೆ.
ಸಂಬಂಧಿಕರಿಗೆ ಘಟನೆಯ ಕುರಿತು ಯವತಿ ಹೇಳಿಕೊಂಡಿದ್ದಾಳೆ. ಆಕೆಗೆ ಧೈರ್ಯ ತುಂಬಿದ ಸಂಬಂಧಿಕರು ಯುವತಿಯಿಂದ ಪೊಲೀಸರಿಗೆ ದೂರು ಕೊಡಿಸಿದ್ದಾರೆ.
ಮೇ 21ರಂದು ಪೊಲೀಸರು ಯುವತಿಯನ್ನು ಪೋಷಕರಿಗೆ ಒಪ್ಪಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ನಾಲ್ವರನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಯವತಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪಿಯ ಪತ್ತೆಗಾಗಿ ಡಿಎನ್ ಎ ಪರೀಕ್ಷೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ.












Click it and Unblock the Notifications