ಐಟಿ- 21000 ನೇಮಕ: ಟಾರ್ಗೆಟ್ 25000 ಕೋಟಿ ರೂ

ಏನಪ್ಪಾ ಅಂದರೆ ಭಾರತೀಯ ಕಂದಾಯ ಸೇವೆ (IRS) ವಿಭಾಗದಲ್ಲಿ ಸುಮಾರು 1,500 ಮಂದಿಯನ್ನು ಮೊದಲು ನೇಮಿಸಿಕೊಂಡು ಕಾರ್ಯಾಚರಣೆಗೆ ಇಳಿಯಲು ಚಿದು ಮುಂದಾಗಿದ್ದಾರೆ. ಉಳಿದಂತೆ ಆದಾಯ ತೆರಿಗೆ ಇಲಾಖೆಗಾಗಿ 20,750 ಹೆಚ್ಚುವರಿ ಹುದ್ದೆ ಸೃಷ್ಟಿಸಿ, ಅಷ್ಟಕ್ಕೂ ನೇಮಕಾತಿ ನಡೆಯಲಿದೆ. ಇದು ಕೇಂದ್ರ ಸರಕಾರದ ವತಿಯಿಂದ ನಡೆಯುತ್ತಿರುವ ಬೃಹತ್ ಪ್ರಮಾಣದ ನೇಮಕಾತಿ ಎಂದು ವಿತ್ತ ಸಚಿವ ಪಿ ಚಿದಂಬರಂ ತಿಳಿಸಿದ್ದಾರೆ.
ಇದರ ಒಟ್ಟಾರೆ ಉದ್ದೇಶ ಸ್ಪಷ್ಟ ತೆರಿಗೆ ಕಳ್ಳರಿಗೆ ಮೈಚಳಿ ಬಿಡಿಸುವುದು. ಜತೆಗೆ ಇಲಾಖೆಯಲ್ಲಿ ಮೌಲ್ಯಾಧಾರಿತ ಸೇವೆಯನ್ನು ಒದಗಿಸುವುದು. ಅಂದರೆ ಇಲಾಖೆಯ ದಕ್ಷತೆ ಹೆಚ್ಚಿಸುವುದು.
ತೆರಿಗೆ ಸಂಗ್ರಹಕ್ಕೆ ಸಿಬ್ಬಂದಿ ಕೊರತೆಯೇ ವಿಘ್ನಕಾರಿಯಾಗಿದೆ ಎಂದು ಆದಾಯ ತೆರಿಗೆ ಇಲಾಖೆ ಈ ಹಿಂದಿನಿಂದಲೂ ಹೇಳುತ್ತಾ ಬಂದಿತ್ತು. ಇದೀಗ ತಡವಾಗಿ ಎಚ್ಚೆತ್ತಿರುವ ಕೇಂದ್ರವು ಭಾರಿ ನೇಮಕಾತಿಗಳಿಗೆ ಅಸ್ತು ಅಂದಿದೆ. ಇದರಿಂದ ಕೇಂದ್ರದ ಮೇಲೆ ವಾರ್ಷಿಕ 450 ಕೋಟಿ ರೂ. ಹೆಚ್ಚುವರಿ ಹೊರೆ ಬೀಳಲಿದೆ.












Click it and Unblock the Notifications