ಬಿನ್ನಿ ಮಿಲ್ ಅಮೂಲ್ಯ ಆಸ್ತಿ ಕೊನೆಗೂ ರೈಲ್ವೆ ಪಾಲಾಯ್ತು

ಬೆಂಗಳೂರು, ಮೇ 24: ನಾಡಿನ ಖ್ಯಾತ ಬಟ್ಟೆ ಗಿರಣಿಗಳು ಆಧುನಿಕತೆಯ ಸೋಗಿಗೆ ಬಲಿಯಾಗಿ ಯಾವುದೋ ಕಾಲವಾಗಿದೆ. ಬೆಂಗಳೂರು ಅಂತಲೇ ಅಲ್ಲ, ಅದು ಕರ್ನಾಟಕದ ಮ್ಯಾಂಚಸ್ಟರ್ ದಾವಣಗೆರೆಯಾದರೂ ಆಗಬಹುದು ಮುಂಬೈನ ಭಾರಿ ದೊಡ್ಡ ದೊಡ್ಡ ಗಿರಣಿಗಳೇ ಆಗಿರಬಹುದು. ಎಲ್ಲವೂ ನಾಮಾವಶೇಷವಾಗಿವೆ. ಬಹುತೇಕವು ರಿಯಲ್ ಎಸ್ಟೇಟ್ ಉದ್ಯಮಕ್ಕೆ ಅಮೂಲ್ಯ ಕಾಣಿಕೆಗಳಾಗಿವೆ.

ಬಾಂಬೆ ರಿಯಲ್ ಎಸ್ಟೇಟ್ ಗೊತ್ತಲ್ಲಾ? ಅಲ್ಲಿ ಅಡಿ ಅಡಿಗೂ ಲಕ್ಷಾಂತರ ರೂ ಇದೆ. ಅಂತಹುದರಲ್ಲಿ ಮುಂಬೈನ ಮಧ್ಯ ಭಾಗದಲ್ಲೇ ಹರಡಿಕೊಂಡಿರುವ ಸುವಿಶಾಲ ನೂರಾರು ಎಕರೆ ಜಾಗಗಳಲ್ಲಿದ್ದ ಮಿಲ್ ಗಳು ಹೋಗಿ ಮಾಲ್ ಗಳು ಬಂದು ಯಾವುದೋ ಕಾಲವಾಯ್ತು. ಅಂತಹುದರಲ್ಲಿ ಕರ್ನಾಟಕದ ಕಥೆಯೂ ಅಷ್ಟೇ.

ಆದರೆ, ಇಲ್ಲಿ ಹೇಳ ಹೊರಟಿರುವುದು ಬಿನ್ನಿ ಮಿಲ್ಸ್ ಬಗ್ಗೆ. ಹೆಸರೇ ಸುಶ್ರಾವ್ಯ. ಬಿನ್ನಿ ಮಿಲ್ಸ್ ಎಂಬುದು ಹಳಬರ ಕಿವಿಗೆ ಬಿದ್ದರೆ ಈಗಲೂ ಅವರ ನರನಾಡಿಗಳಲ್ಲಿ ಚೈತನ್ಯ ಪುಟಿಯುತ್ತದೆ. ಏಕೆಂದರೆ ಸಾವಿರಾರು ಕಾರ್ಮಿಕರನ್ನು, ಅವರ ಕುಟುಂಬಗಳನ್ನು ಪೊರೆದ ತಾಣವಿದು. ಆದರೆ ಇದೇ ಬಿನ್ನಿ ಮಿಲ್ಸ್ ರಿಯಲ್ ಎಸ್ಟೇಟ್ ಕುಳಗಳ ಕಿವಿಗೆ ಬಿದ್ದರೆ ಅವರು ಆಲೋಚಿಸುವುದು ಕೆಡುವ ಕಾರ್ಯವನ್ನು. ಏಕೆಂದರೆ ಬಿನ್ನಿ ಮಿಲ್ಸ್ ಚರಾಸ್ತಿ 30 ಎಕರೆ ಇದೆ.

ಬಿನ್ನಿ ಮಿಲ್ಸ್ ಬೆಂಗಳೂರು ರೈಲ್ವೆಗೆ ಪರಭಾರೆ

ಬಿನ್ನಿ ಮಿಲ್ಸ್ ಬೆಂಗಳೂರು ರೈಲ್ವೆಗೆ ಪರಭಾರೆ

ಆದರೆ ಸದ್ಯ ನಮ್ಮ ಬಿನ್ನಿ ಮಿಲ್ ಕಳ್ಳಕಾಕರ/ ರಿಯಲ್ ಎಸ್ಟೇಟ್ ಕುಳಗಳ ಪಾಲಾಗಲಿಲ್ಲ ಎಂಬುದೇ ಸಮಾಧಾನ. ಅದು ಪಕ್ಕದಲ್ಲೇ ಇರುವ ಬೆಂಗಳೂರು ರೈಲ್ವೆಯ South Western Railways (SWR) ಪಾಲಾಗಿದೆ. ಹೌದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯು (BBMP) ತನ್ನ ಅಧೀನದಲ್ಲಿದ್ದ ಬಿನ್ನಿ ಮಿಲ್ಸ್ ಅಮೂಲ್ಯ ಚರಾಸ್ತಿಯನ್ನು ರೈಲ್ವೆ ಪರಭಾರೆ ಮಾಡಿದೆ.

ಬಿನ್ನಿ ಮಿಲ್ಸ್ ಬೆಂಗಳೂರು ರೈಲ್ವೆಗೆ ಪರಭಾರೆ

ಬಿನ್ನಿ ಮಿಲ್ಸ್ ಬೆಂಗಳೂರು ರೈಲ್ವೆಗೆ ಪರಭಾರೆ

ಅದು ಬರೋಬ್ಬರಿ 3.3 ಎಕರೆ ಜಮೀನು. ಅದೂ ಎಂತಹ ಇಕ್ಕಟ್ಟಿನ ಜಾಗದಲ್ಲಿ ಅಂತೀರಾ? OMG! ಅದು ರೈಲ್ವೆ ಪಾಲಾಗಿದೆ. SWRನವರು ಅಲ್ಲಿ pit line ನಿರ್ಮಿಸುವ ಆಲೋಚನೆ ಮಾಡಿದ್ದಾರೆ. Bangalore City Railway Stationಅನ್ನು ಬಿನ್ನಿ ಮಿಲ್ಸ್ ಜಾಗದಲ್ಲಿ ವಿಸ್ತರಿಸುತ್ತಾರಂತೆ.

ಬಿನ್ನಿ ಮಿಲ್ಸ್ ಬೆಂಗಳೂರು ರೈಲ್ವೆಗೆ ಪರಭಾರೆ

ಬಿನ್ನಿ ಮಿಲ್ಸ್ ಬೆಂಗಳೂರು ರೈಲ್ವೆಗೆ ಪರಭಾರೆ

ಓಕಳೀಪುರಂ ಕಾರಿಡಾರ್ ನಿರ್ಮಾಣಕ್ಕೆ ರೈಲ್ವೆಯ ಆ 3.16 ಎಕರೆ ಜಮೀನು ಬಳಕೆಯಾಗಲಿದೆ. ಈ ಮಾರ್ಗದಲ್ಲಿ ರಾಜಾಜಿನಗರ ಮತ್ತು ಫೌಂಟೇನ್ ವೃತ್ತದ (ಖೋಡೆ ವೃತ್ತ) ಮಧ್ಯೆ ಫ್ಲೈ ಓವರ್ ತಲೆ ಎತ್ತಲಿದೆ. ಪಕ್ಕದ ಚಿತ್ರದಲ್ಲಿರುವಂತೆ.

ಬಿನ್ನಿ ಮಿಲ್ಸ್ ಬೆಂಗಳೂರು ರೈಲ್ವೆಗೆ ಪರಭಾರೆ

ಬಿನ್ನಿ ಮಿಲ್ಸ್ ಬೆಂಗಳೂರು ರೈಲ್ವೆಗೆ ಪರಭಾರೆ

ವಾಸ್ತವವಾಗಿ ಬಿನ್ನಿ ಮಿಲ್ಸ್ ಬಳಿಯಿರುವ ಇನ್ನೂ 16 ಎಕರೆ ಜಮೀನಿನ ಮೇಲೆ ರೈಲ್ವೇಸ್ ಕಣ್ಣುಹಾಕಿದೆ. ಅನೇಕ ವರ್ಷಗಳ ಹಗ್ಗಜಗ್ಗಾಟದ ಬಳಿಕ ಸದ್ಯಕ್ಕೆ 3.3 ಎಕರೆ ರೈಲ್ವೆಗೆ ಸಂದಾಯವಾಗಿದೆ. ಮುಂದೆ ಇನ್ನೂ ಹೆಚ್ಚಿನ ಜಾಗ ರೈಲ್ವೆಗೇ ದಕ್ಕಲಿದೆ ಎಂದು ರೈಲ್ವೆ ಅಧಿಕಾರಿಗಳು ಆಶಿಸಿದ್ದಾರೆ. ಇನ್ನೇನು ಇಲ್ಲೂ ಕಾಂಗ್ರೆಸ್ ಆಡಳಿತದ, ಕೇಂದ್ರದಲ್ಲೂ ಕಾಂಗ್ರೆಸ್ಸಿನದ್ದೇ ರಾಜ್ಯಭಾರ. ಹಾಗಾಗಿ ರೈಲ್ವೆಗೆ ಈ ಭೂ ಪರಭಾರೆ ಪ್ರಕ್ರಿಯೆ ಸದ್ಯದಲ್ಲೇ ಕಾರ್ಯಗತಗೊಳ್ಳಲಿದೆ.

ಬಿನ್ನಿ ಮಿಲ್ಸ್ ಬೆಂಗಳೂರು ರೈಲ್ವೆಗೆ ಪರಭಾರೆ

ಬಿನ್ನಿ ಮಿಲ್ಸ್ ಬೆಂಗಳೂರು ರೈಲ್ವೆಗೆ ಪರಭಾರೆ

BBMP ಅವರೂ ಏನು ಸುಮ್ಮನೆ ಬಿಟ್ಟುಕೊಟ್ಟಿಲ್ಲ ಬಿನ್ನಿ ಮಿಲ್ಸ್ ಜಾಗ. ಹೇಳಿಕೇಳಿ ಅವರು ಬಿಟ್ಟುಕೊಟ್ಟಿರುವುದು ರೈಲ್ವೇಸ್ ನವರಿಗೆ. ಅವರ ಬಳಿಯೋ ಲಕ್ಷಾಂತರ ಎಕರೆ ಸಸ್ತಾ ಜಮೀನು ಬರಡಾಗಿ ಬಿದ್ದಿದೆ. ಅಂತಹ ಒಂದು ಜಾಗವನ್ನು (3.16 ಎಕರೆ) ತನಗೆ ಬಿಟ್ಟು ಕೊಡಬೇಕು ಎಂಬ ಕರಾರು ವಿಧಿಸಿಯೇ BBMP ಈ ಪರಾಭರೆಗೆ ಒಪ್ಪಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+