ಮಗುವಿಗೆ ಭೀಕರ ಕಾಯಿಲೆ, ಹೆಲ್ಪ್ ಪ್ಲೀಸ್

ದಕ್ಷಿಣ ಕನ್ನಡ ಜಿಲ್ಲೆಯ ಅರಿಯಡ್ಕ ಗ್ರಾಮದ ಸಂತೋಷ್ ಮತ್ತು ಜನಿತಾ ಕುಮಾರಿ ಅವರ ಐದು ವರ್ಷದ ಮಗು ಅರುಣಾ ಬ್ಲಾಡ್ ಕ್ಯಾನ್ಸರ್ ನಿಂದ ಬಳಲುತ್ತಿದೆ. ಒಂದನೇ ತರಗತಿಯಲ್ಲಿ ಓದುತ್ತಿರುವ ಮಗುವಿಗೆ ತನಗೆ ಇಂತಹ ಭಯಾನಕ ಕಾಯಿಲೆ ಇದೆ ಎಂದು ತಿಳಿದಿಲ್ಲ.
ಮಗು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿತ್ತು, ತಜ್ಞ ವೈದ್ಯರ ಬಳಿ ಪರೀಕ್ಷೆ ಮಾಡಿಸಿದಾಗ ಕುಟುಂಬದವರಿಗೆ ಮಗುವಿಗೆ ಕ್ಯಾನ್ಸರ್ ರೋಗ ವಿರುವ ವಿಷಯ ತಿಳಿದು ಬಂದಿದೆ. ಕ್ಯಾನ್ಸರ್ ಮೊದಲನೆ ಹಂತದಲ್ಲಿದ್ದು, ಎರಡು ವರ್ಷ ನಿರಂತರವಾಗಿ ಚಿಕಿತ್ಸೆ ನೀಡಿದರೆ ಮಗು ಗುಣಮುಖವಾಗಲಿದ ಎಂದು ವೈದ್ಯರು ಹೇಳಿದ್ದಾರೆ.
ಎರಡು ವರ್ಷಗಳ ಕಾಲ ಮಗುವಿಗೆ ಚಿಕಿತ್ಸೆ ನೀಡಲು ಐದು ಲಕ್ಷಕ್ಕಿಂತ ಹೆಚ್ಚು ಖರ್ಚಾಗಲಿದೆ. ಚಿಕಿತ್ಸೆ ಕೊಡಿಸಿದರೆ, ಮಗು ಆರೋಗ್ಯವಾಗಿ ಸಾಮಾನ್ಯರಂತೆ ಜೀವನ ನಡೆಸಬಹುದು ಎಂದು ಭರವಸೆಯನ್ನು ನೀಡಿದ್ದಾರೆ.
ಅರುಣಾ ಅವರ ತಂದೆ-ತಾಯಿ ಕೂಲಿ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಐದು ಲಕ್ಷ ಹಣವನ್ನು ಹೊಂದಿಸಿ ಮಗುವಿಗೆ ಚಿಕಿತ್ಸೆ ಕೊಡಿಸಲು ದಂಪತಿಗಳಿಗೆ ಅಸಾಧ್ಯವಾಗಿದೆ. ಆದ್ದರಿಂದ ಸಹಾಯ ಮಾಡುವ ಮನೋಭಾವವಿರುವವರು ಮಗುವಿನ ಚಿಕಿತ್ಸೆಗೆ ಸಹಾಯ ಮಾಡುವಂತೆ ಕುಟುಂಬದವರು ಮನವಿ ಮಾಡಿದ್ದಾರೆ.
ಸಹಾಯಮಾಡಲು ಇಚ್ಚಿಸುವ ದಾನಿಗಳು ಮಗುವಿನ ತಾಯಿಯ ಬ್ಯಾಂಕ್ ಖಾತೆಗೆ ಹಣವನ್ನು ಜಮಾ ಮಾಡಬಹುದಾಗಿದೆ. ದಾನಿಗಳು ಸಹಾಯ ಮಾಡುತ್ತಾರೆ. ತಮ್ಮ ಮಗು ಉಳಿದ ಮಕ್ಕಳಂತೆ ಆರೋಗ್ಯಕರವಾಗಿ ಬದುಕಿ ಬಾಳುತ್ತದೆ ಎಂದು ದಂಪತಿಗಳು ನಿರೀಕ್ಷೆಯಿಂದ ಕಾಯುತ್ತಿದ್ದಾರೆ.
ಸಹಾಯ ಮಾಡುವವರು
k. Janitha Kumari
A C : 111701010015732
ifc code : VIJB 000117
Vijaya bank, KAVU
Puttur
Dkshina kannada
karnataka ಬ್ಯಾಂಕ್ ಖಾತೆಗೆ ಹಣವನ್ನು ಜಮಾಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ 9902213623 ನಂಬರ್ ಗೆ ಕರೆ ಮಾಡಬಹುದು.












Click it and Unblock the Notifications