ಯುಪಿಗೆ ನಾಲ್ಕು ವರ್ಷ, ಸಾಧನೆಗಳ ಪಟ್ಟಿ ಬಿಡುಗಡೆ
ನವದೆಹಲಿ, ಮೇ 23 : ಸತತ ಬಂಬತ್ತು ವರ್ಷಗಳಿಂದ ದೇಶದ ಆಡಳೀತ ಚುಕ್ಕಾಣಿ ಹಿಡಿದಿರುವ ಕೇಂದ್ರದ ಯುಪಿಎ ಸರ್ಕಾರ ತನ್ನ ಸಾಧನೆಯಗಳ ಪಟ್ಟಿ ಬಿಡುಗಡೆ ಮಾಡಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಅಭೂತಪೂರ್ವ ಆರ್ಥಿಕ ಪ್ರಗತಿಯನ್ನು ಕೇಂದ್ರ ಸರ್ಕಾರ ಸಾಧಿಸಿದೆ ಎಂದು ರಿಪೋರ್ಟ್ ಕಾರ್ಡ್ ನಲ್ಲಿ ವಿವರಿಸಲಾಗಿದೆ.
ಕೇಂದ್ರ ಯುಪಿಎ ಸರ್ಕಾರ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನವದೆಹಲಿಯಲ್ಲಿ ಸರ್ಕಾರದ ರಿಪೋರ್ಟ್ ಕಾರ್ಡ್ ಅನ್ನು ಮಿತ್ರ ಪಕ್ಷಗಳ ಸಮ್ಮಖದಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಪ್ರಧಾನಿ ಮನಮೋಹನ್ ಸಿಂಗ್ ಬಿಡುಗಡೆ ಮಾಡಿದರು.
ನಂತರ ಮಾತನಾಡಿದ ಸೋನಿಯಾ ಗಾಂಧಿ, ಸರ್ಕಾರ ಮತ್ತು ಮಿತ್ರ ಪಕ್ಷಗಳ ನಡುವೆ ಸಂಘರ್ಷವಿಲ್ಲ. ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮಿತ್ರ ಪಕ್ಷಗಳ ನಡವೆ ಒಡಕು ಉಂಟಾಗಿದೆ ಎನ್ನುವುದು ಕೇವಲ ಮಾಧ್ಯಮಗಳ ಸೃಷ್ಠಿ ಎಂದು ಆರೋಪಿಸಿದರು.

ಪ್ರಧಾನಿ ಮನಮೋಹನ್ ಸಿಂಗ್ ದೇಶವನ್ನು ಸಮರ್ಥವಾಗಿ ಮುನ್ನೆಡೆಸುತ್ತಿದ್ದಾರೆ. ನಾಯಕತ್ವ ಬದಲಾವಣೆ ಮಾಡುವ ಯಾವುದೇ ಆಲೋಚನೆಗಳು ಯುಪಿಎಯಲ್ಲಿ ಇಲ್ಲ ಎಂದು ಪ್ರಧಾನಿ ಟೀಕಿಸಿದ್ದ ಪ್ರತಿಪಕ್ಷ ಬಿಜೆಪಿ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಮುಲಾಯಂ ಗೈರು : ಯುಪಿಎ ಸರ್ಕಾರದ ಮಹತ್ವದ ಸಭೆ ಪ್ರಮುಖ ಮಿತ್ರ ಪಕ್ಷವಾದ ಸಮಾಜವಾದಿ ಪಕ್ಷದ ನಾಯಕ ಮುಲಯಂ ಸಿಂಗ್ ಯಾದವ್ ಗೈರು ಹಾಜರಾಗಿದ್ದರು. ಸರ್ಕಾರಕ್ಕೆ ಬಾಹ್ಯ ಬೆಂಬಲ ನೀಡಿರುವ ಬಿಎಸ್‌ಪಿಯ ಮಾಯಾವತಿ ಸಹ ಗೈರು ಹಾಜರಾಗಿದ್ದರು.
ಸರ್ಕಾರದ ಸಾಧನೆಗಳು
* 6,450 ಕೋಟಿ ವೆಚ್ಚದಲ್ಲಿ 20,100 ಕಿ.ಮೀ.ಗ್ರಾಮೀಣ ರಸ್ತೆ ನಿರ್ಮಾಣ
* ಆಹಾರ ಭದ್ರತೆ ಮಸೂದೆ ಮತ್ತು ಭೂ ಸ್ವಾಧೀನ ಮಸೂದೆ ಜಾರಿಗೆ ಪ್ರಯತ್ನ
* ನಗದು ನೇರ ವರ್ಗಾವಣೆ ಯೋಜನೆ ಜಾರಿ
* 10 ಲಕ್ಷ ಕೋಟಿ ಮಕ್ಕಳಿಗೆ ಬಿಸಿಯೂಟ. 12 ಲಕ್ಷ ಗರ್ಭಿಣಿಯರಿಗೆ ಆರೋಗ್ಯ ಸೌಲಭ್ಯ
* 4 ಕೋಟಿ ಕುಟುಂಬಕ್ಕೆ ನರೇಗಾ ಉದ್ಯೋಗ
* 25.9 ಕೋಟಿ ಟನ್ ಆಹಾರ ಉತ್ಪಾದನೆ, 4.711 ಕೋಟಿ ಕೃಷಿ ಸಾಲ ನೀಡಿಕೆ
* ಸಣ್ಣ ಮತ್ತು ಅತಿ ಸಣ್ಣ ಹಾಗೂ ಮಧ್ಯಮ ಕೈಗಾರಿಕೆಗಳಿಗೆ ಸಾಲ ನೀಡಿಕೆ ಪ್ರಮಾಣದಲ್ಲಿ ದ್ವಿಗುಣ
* ಉದ್ಯೋಗ ಖಾತರಿ ಯೋಜನೆಯ ವೇತನ 65 ರೂ.ಗಳಿಂದ 125 ರೂ.ಗಳಿಗೆ ಹೆಚ್ಚಳ












Click it and Unblock the Notifications