ಚಿಕ್ಕಮಗಳೂರು- ಕೋಲಾರ: ಇಬ್ಬರು ಮಹಿಳೆರ ರೇಪ್ ಹತ್ಯೆ

ಮೃತ ಮಹಿಳೆಯನ್ನು ಚಿಕ್ಕಮಗಳೂರಿನ ತರೀಕೆರೆ ಬಡಾವಣೆಯ ದೇವಿ ಬಾಯಿ ಎಂದು ಗುರುತಿಸಲಾಗಿದ್ದು, ಈಕೆ ಇಬ್ಬರು ಮಕ್ಕಳ ತಾಯಿ. ಗಂಡನಿಂದ ದೂರವಾಗಿದ್ದರು ಎಂದು ಚಿಕ್ಕಮಗಳೂರು ಪೊಲೀಸರು ತಿಳಿಸಿದ್ದಾರೆ.
ರೇಪ್, ಹತ್ಯೆ- ಕೋಲಾರದಲ್ಲಿ ಮಹಿಳೆ ನಗ್ನ ಶವ ಪತ್ತೆ:
ಮಹಿಳೆಯ ಮೇಲೆ ಅತ್ಯಾಚಾರವೆಸಗಿದ ಪಾತಕಿಗಳು, ಆಕೆಯನ್ನು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೋಲಾರದ ಭೈರೇಗೌಡ ನಗರದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ. ಕೋಲಾರ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ.
ಮಹಿಳೆಯನ್ನು ನಗರದ ಹೊರವಲಯದಲ್ಲಿ ನೀಲಗಿರಿ ತೋಪಿಗೆ ಎಳೆದೊಯ್ದು, ಈ ಕುಕೃತ್ಯವೆಸಗಲಾಗಿದೆ. ಮಹಿಳೆಯ ವಿವರ ತಿಳಿದುಬಂದಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.











Click it and Unblock the Notifications